ಬಳ್ಳಾರಿ 01: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ 21ನೇ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ 7 ಕೃತಿಗಳನ್ನು ಸಮ್ಮೇಳನಾಧ್ಯಕ್ಷ ಡಾ.ಜೆ.ಎಂ.ನಾಗಯ್ಯ,ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರು ಲೋಕಾರ್ಪಣೆಗೊಳಿಸಿದರು.
ಗಮನಸೇಳೆದ ಪುಸ್ತಕ ಮಳಿಗೆಗಳು: ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಆವರಣದಲ್ಲಿ 14 ಪುಸ್ತಕ ಮಳಿಗೆಗಳನ್ನು ಹಾಕಲಾಗಿತ್ತು. ಇದನ್ನು ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಉದ್ಘಾಟಿಸಿದರು.
ಸಾಹಿತಿಗಳಾದ ಶಿವರಾಮಕಾರಂತ, ಕುವೆಂಪು, ತೇಜಸ್ವಿ, ಹಾ.ಮಾ.ನಾಯಕರವರ ಪುಸ್ತಕಗಳು ಹಾಗೂ ಕಥೆ, ಕಾದಂಬರಿ, ಸಾಹಿತ್ಯ, ರಾಮಾಯಣ ಮಹಾಭಾರತ, ವೈಚಾರಿಕ, ವೈಜ್ಞಾನಿಕ, ಪ್ರಗತಿಪರ ಪುಸ್ತಕ, ದಲಿತರ ಬದುಕು, ಸಂವಿಧಾನ ಓದು, ಸಂಶೋಧನ ಪುಸ್ತಕ, ಹಳೆಗನ್ನಡ, ಗ್ರಂಥಗಳು ಹಲವಾರು ಪುಸ್ತಕಗಳು ಪುಸ್ತಕ ಮಳಿಗೆಗಳಲ್ಲಿ ಇದ್ದವು.
ಹಗರಿಬೊಮ್ಮನಹಳ್ಳಿಯ ಎಂ.ಜಿ ಕುಲಕಣರ್ಿರವರ ಚೈತನ್ಯ ಬುಕ್ ಸ್ಟಾಲ್, ಬಸವರಾಜ ಕಮ್ಮಾರ ಪುಸ್ತಕ ಜಗತ್ತು ಬುಕ್ ಸ್ಟಾಲ್, ವೆಂಕಟೇಶ್ ಅವರ ಬೆಂಗಳೂರು ನವಭಾರತ ಪಬ್ಲಿಕೇಷನ್ ಬುಕ್ ಸ್ಟಾಲ್, ಅಭಿನವ ಬುಕ್ ಸ್ಟಾಲ್, ಶಿವಮೊಗ್ಗ ಜಯಪ್ರಕಾಶರವರ ಗೀತಾಂಜಲಿ ಪುಸ್ತಕ ಪ್ರಕಾಶನ, ಮಸ್ಕಿಯ ಪುರುಷರಾಮ ಅವರ ಬಂಡಾರ ಪ್ರಕಾಶನ, ಮುಧೋಳದ ಖುಷಿ ಬುಕ್ ಹೌಸ್, ಎಸ್.ಪಿ. ಬುಕ್ ಹೌಸ್, ಮುದ್ದೇಬಿಹಾಳದ ವಿಜಯ ಪ್ರಕಾಶನ ನಾಲತವಾಡ, ಪ್ರಭುದೇವ ಜನಕಲ್ಯಾಣ ಸಂಸ್ಥೆ ಪುಸ್ತಕ ಮಳಿಗೆಗಳು ಮಾರಾಟ ಮತ್ತು ಪ್ರದರ್ಶಕ್ಕೆ ಪುಸ್ತಕಗಳನ್ನಿಟ್ಟಿದ್ದವು.
ಸಾಹಿತ್ಯಾಸಕ್ತರು, ಕನ್ನಡ ಮನಸ್ಸುಗಳು ಪುಸ್ತಕಗಳ ಮಳಿಗೆಗಳತ್ತ ತೆರಳಿ ಪರಿಶೀಲಿಸಿ ಖರೀದಿಸುತ್ತಿರುವುದು ಕಂಡುಬಂದಿತು.