ಬಳ್ಳಾರಿ: ಪ್ರೊ.ಚಿದಾನಂದಗೆ ಪಿಎಚ್ ಡಿ ಪ್ರಧಾನ

ಬಳ್ಳಾರಿ 07: ಬಳ್ಳಾರಿಯ ಪ್ರತಿಷ್ಠಿತ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನೀರಿಂಗ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರಾಗಿ ಸೇವೆ ಸಲ್ಲಿಸುತ್ತಿರುವ  ಪ್ರೊ.ಹೆಚ್.ಚಿದಾನಂದ ಮಂಡಿಸಿದ "ನಾವಲ್ ಗ್ರಾಫಿಕಲ್  ಮಾಡಲ್ಸ್  ಅಂಡ್  ಮೆಷಿನ್  ಲರ್ನಿಂಗ್ ಟೆಕ್ನಿಕ್ಸ್ ಫಾರ್ ಹ್ಯೂಮನ್ ಎಕ್ಟಿವಿಟಿ  ರೆಕಗ್ನಿಷನ್ ಫ್ರಮ್ ವೀಡಿಯೊ ಸೀಕ್ವೆನ್ಸ್   ಪ್ರಬಂಧಕ್ಕೆ ಪ್ರತಿಷ್ಠಿತ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, "ಡಾಕ್ಟರ್ ಆಫ್ ಫಿಲಾಸಫಿ  ಪದವಿಯನ್ನು ಪ್ರಧಾನಿಸಿದೆ. ವೀ.ವಿ.ಸಂಘ  ಮತ್ತು ಆರ್.ವೈ.ಎಂ.ಇ.ಸಿ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು  ಪ್ರೊ.ಹೆಚ್.ಚಿದಾನಂದ ಅವರನ್ನು ಅಭಿನಂದಿಸಿದ್ದಾರೆ.