ಲೋಕದರ್ಶನ ವರದಿ
ಬಳ್ಳಾರಿ 29: ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನಿಗಧಿಪಡಿಸಬೇಕು ಎಂದು ಒತ್ತಾಯಿಸಿ ನಗರದ ಎಪಿಎಂಸಿ ಕಾರ್ಯದಶರ್ಿ ಸಿ.ಎಚ್.ಮೋಹನ್ ಅವರಿಗೆ ರೈತ ಕೃಷಿ ಕಾಮರ್ಿಕರ ಜಿಲ್ಲಾ ಸಂಘಟನೆ ಪದಾಧಿಕಾರಿಗಳು, ರೈತರು ಬುಧವಾರ ಮನವಿ ಸಲ್ಲಿಸಿದರು.
ಲಕ್ಷಾಂತರ ರೂ.ಖಚರ್ು ಮಾಡಿ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದ ಹಿನ್ನೆಲೆಯಲ್ಲಿ ಆಥರ್ಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ಈ ಕುರಿತು ಸಕರ್ಾರ ಹಾಗೂ ಚುನಾಯಿತ ಜನಪ್ರತಿನಿಧಿಗಳು ಸಭೆ ಸಮಾರಂಭಗಳಲ್ಲಿ ಮಾರುದ್ದ ಭಾಷಣ ಬಿಗಿದು ಕೈತೊಳೆದುಕೊಳ್ಳುತ್ತಿದ್ದಾರೆ, ಹೊರತು ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸಲು ಮುಂದಾಗುತ್ತಿಲ್ಲ. ಸರ್ಕಾರ ರೈತರ ಪರವಾಗಿದೆ.
ರೈತರು ಎಂದಿಗೂ ಎದೆಗುಂದಬಾರದು ಎಂದು ರಾಜಕಾರಣಿಗಳು ಹೇಳುವುದು ಸಭೆ ಸಮಾರಂಭಗಳೀಗೆ ಮಾತ್ರ ಸೀಮಿತವಾಗಿದೆ. ಇಲ್ಲಿವರೆಗೆ ಯಾವ ಸಕರ್ಾರಗಳು ರೈತರ ಬಗ್ಗೆ ಕಾಳವಹಿಸಿಲ್ಲ ಎಂದು ಸಂಘಟನೆ ಪದಾಧಿಕಾರಿಗಳು ಮನವಿಯಲ್ಲಿ ದೂರಿದ್ದಾರೆ.
ರೈತರು ಬಳಸುವ ಬೀಜ ಗೊಬ್ಬರ ಕೀಟನಾಶಕ ಸೇರಿದಂತೆ ಎಲ್ಲವೂ ದುಬಾರಿಯಾಗಿವೆ. ವ್ಯವಸಾಯ ಮಾಡುವುದು ಇತ್ತೀಚೆಗೆ ಕಷ್ಟಕರವಾಗುತ್ತಿದೆ. ಪ್ರತಿ ವರ್ಷ ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಬದ್ದ ಬೆಲೆ ಸಿಗದೇ ರೈತನ ಬದುಕು ಜೂಜಾಟವಾಗಿದೆ. ಪರಿಣಾಮ ದೇಶಾದ್ಯಂತ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ರೈತರ ಕೃಷಿಗೆ ಬೇಕಾಗಿರುವ ರಸಗೊಬ್ಬರ, ಬೀಜ ಮತ್ತು ಕೀಟನಾಶಕಗಳ ದರಗಳು ಕಳೆದ 9 ವರ್ಷಗಳಲ್ಲಿ 3 ಪಟ್ಟು ಹೆಚ್ಚಾಗಿವೆ. ಆದರೆ, ರೈತರು ಬೆಳೆದ ಉತ್ಪನ್ನಗಳ ಬೆಲೆ ಮಾತ್ರ ಹೆಚ್ಚಾಗಿಲ್ಲ. ಭತ್ತ, ಹತ್ತಿ ಸೇರಿದಂತೆ ನಾನಾ ಧಾನ್ಯಗಳ ಬೆಲೆಗಳು ಪಾತಾಳಕ್ಕೆ ಕುಸಿದಿವೆ. ಲಕ್ಷಾಂತರ ರೂ. ಖಚರ್ು ಮಾಡಿ ರೈತರು ಬೆಳೆಯುವ ಉತ್ಪನ್ನಗಳನ್ನು ಸದ್ಯದ ಮಾರುಕಟ್ಟೆ ಬೆಲೆಗೆ ಮಾರಾಟಮಾಡಿದರೇ ಪ್ರತಿ ಎಕರೆಗೆ ಸಾವಿರಾರು ರೂ. ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ರೈತರ ಬದುಕು ಹೈರಾಣವಾಗಿದೆ. ಕೂಡಲೇ ಸಂಬಂಧಿಸಿದ ಇಲಾಖೇ ಮೇಲಧಿಖಾರಿಗಳು ಸೂಕ್ತ ಬೆಲೆ ನಿಗಧಿಪಡಿಸಬೇಕು ಎಂದು ಒತ್ತಾಯಿಸಿದರು.
ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಲಾಗುವುದು ಎಂದು ಸಕರ್ಾರ ಹೇಳುವುದು ದಾಖಲೆಗಳಲ್ಲಿ ಮಾತ್ರ ಎನ್ನುವಂತಾಗಿದೆ. ರೈತರು ತೆರಳಿದರೇ ನಾನಾ ಕಾಯ್ದೆ, ನಾನಾ ಷರತ್ತುಗಳನ್ನು ವಿಧಿಸುವುದು ಸಾಮಾನ್ಯವಾಗಿದೆ. ಅವಿದ್ಯಾವಂತರಾದ ರೈತರಿಗೆ ಅಧಿಕಾರಿಗಳು ಹೇಳುವ ಷರತ್ತುಗಳು, ಕಾಯ್ದೆಗಳು ತಿಳಿಯದಾಗಿದ್ದು, ಮಧ್ಯವರ್ತಿಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಕೂಡಲೇ ಸಕರ್ಾರ ವಿಧಿಸಿದ ಷರತ್ತುಗಳನ್ನು ಸಡಿಲಗೊಳಿಸಬೇಕು. ಪ್ರತಿ ಕ್ವಿಂಟಾಲ್ ಭತ್ತಕ್ಕೆ 2500 ರೂ, ಪ್ರತಿ ಕ್ವಿಂಟಾಲ್ ಹತ್ತಿಗೆ 10 ಸಾವಿರ ರೂ.ನಿಗಧಿಪಡಿಸಬೇಕು. ರಸಗೊಬ್ಬರ, ಬಿತ್ತನೆ ಬೀಜಗಳು, ಕ್ರಿಮಿನಾಶಕ ಔಷಧಿಗಳನ್ನು ರಿಯಾಯತಿ ದರದಲ್ಲಿ ವಿತರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆರ್ಕೆಎಸ್ ಸಂಘಟನೆ ಜಿಲ್ಲಾ ಕಾರ್ಯದಶರ್ಿ ಹನುಮಂತಪ್ಪ, ಜಿಲ್ಲಾ ಸಮಿತಿ ಸದಸ್ಯ ಬಸಣ್ಣ, ಕೋಳೂರು ಪಂಪಾಪತಿ, ಗೋವಿಂದ ಸೇರಿದಂತೆ ಇತರರು ಇದ್ದರು.