ಬಳ್ಳಾರಿ: ಸಮರ್ಪಕ ಆಡಳಿತಕ್ಕೆ ಸಂಘಟನೆ ಆಗ್ರಹ

ಲೋಕದರ್ಶನ ವರದಿ

ಬಳ್ಳಾರಿ 07: ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮ ದೇವಸ್ಥಾನದ ಆಡಳಿತ ಮಂಡಳಿಯು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಅಕ್ರಮಗಳನ್ನು ತಡೆಗಟ್ಟುವಂತೆ ಕರ್ನಾಟಕ ಜನಸೈನ್ಯ ಸಂಘಟನೆಯ ಮುಖಂಡರು ರಾಜ್ಯದ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಮಾಡಿದೆ.

ಬುದುವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವರುವನ್ನು ಬೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಬಳ್ಳಾರಿಯ ಶ್ರೀ ಕನಕದುರ್ಗಮ್ಮ ದೇವಸ್ಥಾನವು ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟಿರುವ ಎ-ಶ್ರೇಣಿಯ ದೇವಸ್ಥಾನವಾಗಿದೆ. ಸಾವಿರಾರು ಜನರು ಭೇಟಿ ನೀಡುವ ಈ ದೇವಸ್ಥಾನದಲ್ಲಿ ಪಾರದರ್ಶಕವಾದ ಆಡಳಿತ ನಡೆಯುತ್ತಿಲ್ಲ ಎಂದು ದೂರಿದರು.

ಈ ದೇವಸ್ಥಾನದಲ್ಲಿ ಪಾರರ್ದಶಕ ಆಡಳಿತ ನಡೆಯದಿರುವ ಮತ್ತು ದೇವಸ್ಥಾನದ ಬೇಡಿಕೆಗಳು ಹಾಗೂ ಅಭಿವೃದ್ಧಿಯ ಬಗ್ಗೆ ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ ಎಂದು ಕನರ್ಾಕಟ ಜನಸೈನ್ಯ ಮುಖಂಡರು ಸಚಿವರಿಗೆ ವಿವರಿಸಿದರು.

ಭಕ್ತರ ಬೇಡಿಕೆಗಳನ್ನು ಈಡೇರಿಸುವುದರಲ್ಲಿ ರಾಜ್ಯ ಸಕರ್ಾರ, ಮುಜರಾಯಿ ಇಲಾಖೆಯು ನಿರ್ಲಕ್ಷ್ಯ ವಹಿಸಿದಲ್ಲಿ ಸಂಘಟನೆಯು ವತಿಯಿಂದ ಪ್ರತಿಭಟನೆ ಹಾಗೂ ಧರಣಿ ನಡೆಸಲಾಗುತ್ತದೆ ಸಂಘಟನೆಯ ಅಧ್ಯಕ್ಷ ಎರ್ರಿಸ್ವಾಮಿ ಎಚ್ಚರಿಸಿದರು.

ಬಿ.ಹೊನ್ನೂರಪ್ಪ, ಕೆ.ಎಸ್.ಅಶೋಕ್ ಕುಮಾರ್, ಚೆಂಚಯ್ಯ, ಫಯಾಜ್ ಭಾಷಾ, ಎಸ್.ನಾಸಿರ್, ಕೆ.ಹೊನ್ನೂರ್ ಸ್ವಾಮಿ, ರಾಧಾಕೃಷ್ಣ ಶೇಖರ್, ಖಾಜಾ, ಅರುಣ್ ಕುಮಾರ್, ಹುಲಿಗೇಶ್ ಮಹೇಶ್ ಮತ್ತಿತರೆ ಅನೇಕರು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.