ಬಳ್ಳಾರಿ: ವಾಹನ ಸಮೇತ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

ಬಳ್ಳಾರಿ 09: ಟಾಟಾ ಏಸ್ ತೊಳಿಯಲು ಹೋಗಿ ವಾಹನ ಸಮೇತ ಕಾಲುವೆಯಲ್ಲಿ ಮುಳುಗಿ ಸಾವನ್ನಾಪ್ಪಿರುವ ಘಟನೆ ನಗರದ ಕುವೆಂಪು ನಗರದಲ್ಲಿ ಹಾದು ಹೋಗಿರುವ ತುಂಗಭದ್ರಾ ಕಾಲುವೆಯಲ್ಲಿ ಇಂದು ಮುಂಜಾನೆ ಘಟನೆ ನಡೆದಿದೆ.

ನಗರದ ಕೌಲ್ ಬಜಾರ್ ನಿವಾಸಿ ಅಹಮ್ಮದ್ (68) ಮೃತ ವ್ಯಕ್ತಿ. ತನ್ನ ಟಾಟಾ ಏಸ್ ವಾಹನವನ್ನು ಕಾಲುವೆಯಲ್ಲಿ ತೊಳೆಯಲು ಹೋದಾಗ ನಿಯಂತ್ರಣ ತಪ್ಪಿ ವಾಹನದೊಂದಿಗೆ ಕಾಲುವೆಯ ನೀರು ಪಾಲದ್ದು, ಸ್ಥಳಕ್ಕೆ ಅಗ್ನಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ ವಾಹನದೊಂದಿಗೆ ಅಹಮ್ಮದ್ ನ ಮೃತ ದೇಹವನ್ನು ಹೊರ ತೆಗೆಯಲಾಗಿದೆ.