ಬಳ್ಳಾರಿ: ಮನ್-ಧನ್ ಯೋಜನೆ ಜಾಗೃತಿ ಅಭಿಯಾನ

ಲೋಕದರ್ಶನ ವರದಿ

ಬಳ್ಳಾರಿ 20: ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರಿಗೆ 60 ವರ್ಷಗಳ ನಂತರ ಪಿಂಚಣಿ ಸೌಲಭ್ಯದಿಂದ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮನ್-ಧನ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಎನ್.ಐಲಿ ಹೇಳಿದರು.

ಕಾಮರ್ಿಕ ಇಲಾಖೆಯ ವತಿಯಿಂದ ಬಳ್ಳಾರಿ ಸಮೀಪದ ಅಂದ್ರಾಳ್ ಗ್ರಾಮ ಸರಕಾರಿ ಶಾಲಾ ಆವರಣದಲ್ಲಿ ಬುಧವಾರ  ಏರ್ಪಡಿಸಿದ್ದ ಪ್ರಧಾನ ಮಂತ್ರಿ ಶ್ರಮಯೋಗಿ ಮನ್-ಧನ್ ಯೋಜನೆ ಮತ್ತು ಅಸಂಘಟಿತ ಕಾಮರ್ಿಕರು ಅರಕುಶಲ ಕಾಮರ್ಿಕರನ್ನು ನೊಂದಾಯಿಸುವ ಅಭಿಯಾನಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

      ಈ ಯೋಜನಗೆ ಒಳಪಡಬೇಕಾದರೇ ಅಸಂಘಟಿತ ಕಾಮರ್ಿಕರಾಗಿದ್ದು 18 ರಿಂದ 40ವರ್ಷ ವಯೋಮಿತಿ ಇರಬೇಕು, ಮಾಸಿಕ ಅದಾಯ 15ಸಾವಿರ ರೂ.ಗಳು ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಈ ಯೋಜನೆ ಅಡಿಯಲ್ಲಿ ಅಸಂಘಟಿತ ಕಾಮರ್ಿಕರಾದ ಗೃಹ, ಬೀದಿ ಬದಿ ವ್ಯಾಪಾರಿಗಳು, ಬೀಡಿ, ಚಿಂದಿ ಆಯುವವರು, ನರೇಗಾ ಅಕುಶಲ ಹಾಗೂ ಮುಂತಾದ ಅಸಂಘಟಿತ ಕಾಮರ್ಿಕರು ಈ ಯೋಜನೆಗೆ ಒಳಪಟ್ಟಿರುತ್ತಾರೆ ಎಂದರು.

     ಪ್ರಧಾನಮಂತ್ರಿ ಶ್ರಮಯೋಗಿ ಮನ್-ಧನ್ ಯೋಜನೆಯ ಮಾಹಿತಿಹೊತ್ತ ಹಾಗೂ ಧ್ವನಿವರ್ಧಕಗಳೊಂದಿಗೆ ವಾಹನವು ಇಡೀ ಗ್ರಾಮದಾದ್ಯಂತ ಸಂಚರಿಸಿತು. ಇದೇ ಸಂದರ್ಭದಲ್ಲಿ ಈ ಯೋಜನೆಗೆ ಸಂಬಂಧಿಸಿದ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆಯ ಸ್ಮಾರ್ಟ್  ಕಾರ್ಡ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಸಿ.ಎನ್.ರಾಜೇಶ್, ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಶಿವರಾಜ್ ಆರ್.ಎನ್, ಕಾರ್ಮಿಕ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.