ಬಳ್ಳಾರಿ: ಕನ್ನಡ ವಿಶ್ವವಿದ್ಯಾಲಯ, ಹಂಪಿ ತಂತ್ರಜ್ಞಾನ ಮಾಲೆ ಕಾರ್ಯಕ್ರಮ ದೇಶಿ ವಿಜ್ಞಾನ-ತಂತ್ರಜ್ಞಾನ ತರ್ಕಕ್ಕೆ ನಿಲುಕದು: ಡಾ.ರಮೇಶ

ಲೋಕದರ್ಶನ ವರದಿ

ಬಳ್ಳಾರಿ 20: ದೇಶಿ ವಿಜ್ಞಾನ-ತಂತ್ರಜ್ಞಾನವು ಅನುಭವ, ನಂಬಿಕೆ, ಭಾವನೆ ಹಾಗೂ ದುಡಿಮೆಯನ್ನು ಆಧರಿಸಿ ದೇಶಿಯ ಸಮುದಾಯವನ್ನ ಪ್ರಮುಖ ಅಂಶವಾಗಿ ನೋಡುತ್ತವೆ. ಈ ನಿಟ್ಟಿನಲ್ಲಿ ನಮ್ಮಜನಪದರು ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ತಮ್ಮ ಸರಳ ಜ್ಞಾನದಿಂದ ತಿಳಿದುಕೊಳ್ಳುತ್ತಿದ್ದರು. ಆದರೆ ಆಧುನಿಕ ವಿಜ್ಞಾನವು ಬರೀ ಊಹೆ, ಸೂತ್ರ, ಪ್ರಯೋಗ ಹಾಗೂ ತರ್ಕವನ್ನು ಆಧರಿಸಿದೆ. ಇಲ್ಲಿ ಆಧುನಿಕ ವಿಜ್ಞಾನವು ಸಮುದಾಯವನ್ನು ಮುಖ್ಯವಾಗಿ ಪರಿಗಣಿಸುವುದಿಲ್ಲ. ಪ್ರಮುಖವಾಗಿ ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ನಮ್ಮ ದೇಶಿಯ ಕರಕುಶಲಗಳು, ಕಸುಬುಗಳು ಹಾಗೂ ಕಲೆ ಮತ್ತು ಸಂಸ್ಕೃತಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಆದರೆ ಆರೋಗ್ಯಕರ ದೃಷ್ಟಿಯಿಂದ ದೇಶಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಸ್ತುತ ದಿನಗಳಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದ ಸಿಂಡಿಕೇಟ್ ಹಾಲ್ನಲ್ಲಿ ಜರುಗಿದ ದೇಶಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಲೆ ಲೇಖಕರ ಕಮ್ಮಟದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪ್ರಕೃತಿಯಲ್ಲಿ ಸಿಗುವ ಎಲ್ಲಾ ವಸ್ತುಗಳು ಜ್ಞಾನದ ಸ್ವರೂಪ. ಇದನ್ನು ನಾವು ಗಮನಿಸುವುದೇ ಇಲ್ಲ. ಜಾಗತೀಕರಣದ ಪ್ರಭಾವದಿಂದ ನಮ್ಮ ಸಾಮಾನ್ಯ ಜ್ಞಾನವನ್ನು ನಿರ್ಲಕ್ಷಿಸಿ ನಮ್ಮ ದೇಶಿಯ ಜ್ಞಾನದ ಪರಂಪರೆಯನ್ನು ಮರೆಯುತ್ತಿದ್ದೇವೆ. ಆದರೆ ದೇಶಿ ವಿಜ್ಞಾನದಲ್ಲಿ ಒಳತಿನ ಪಾತ್ರ ಬಹಳ ದೊಡ್ಡದು ಹಾಗಾಗಿ ಆಧುನಿಕ ಕಾಲದಲ್ಲಿರುವ ನಾವು ಮತ್ತೆ ದೇಶಿ ಪರಂಪರೆಯಾದ ಆಹಾರ, ಉಡುಗೆ-ತೊಡುಗೆ, ಆಚಾರ-ವಿಚಾರ ಸಂಪ್ರದಾಯಗಳಿಗೆ ಮೊರೆ ಹೋಗುತ್ತಿದ್ದೇವೆ ಎಂದು ಡಾ.ಸ.ಚಿ.ರಮೇಶ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನಗಳ ಇತಿಹಾಸ ವಿಭಾಗ ಮುಖ್ಯಸ್ಥ ಡಾ.ಸಿ.ಮಹಾದೇವ ಸ್ವಾಗಿತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಡಾ.ಎಸ್.ವೈ.ಸೋಮಶೇಖರ್ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಮಾಡಿದರು. ಸಂಗೀತ ವಿಭಾಗದ ವಿದ್ಯಾಥರ್ಿ ವಿರೂಪಾಕ್ಷಪ್ಪ ಪ್ರಾರ್ಥನೆಗೀತೆ ಹಾಡಿದರು ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ನಿಕಾಯದ ಡೀನ್ರಾದ ಡಾ.ಕೇಶವನ್ ಪ್ರಸಾದ್, ಪ್ರಾಧ್ಯಾಪಕರುಗಳಾದ ಡಾ.ಎಫ್.ಟಿ.ಹಳ್ಳಿಕೇರಿ, ಡಾ.ಸಿ.ಎಸ್.ವಾಸುದೇವನ್, ದೇಶಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ವಿದ್ವಾಂಸರು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.