ಬಳ್ಳಾರಿ: ಅನಾಮಧೇಯ ದೂರು ಬಂದರೆ ಪರಿಶೀಲಿಸಿ: ಸಿ.ಎ.ಸ್.ಷಡಾಕ್ಷರಿ

ಲೋಕದರ್ಶನ ವರದಿ

ಬಳ್ಳಾರಿ 08: ಸರ್ಕಾರಿ ಅಧಿಕಾರಿಗಳ ವಿರುದ್ಧ ಅನಾಮಧೇಯ ದೂರು ಬಂದರೆ ಪರಿಶೀಲಿಸಿ, ಪೂರಕ ಮಾಹಿತಿ ಸಿಕ್ಕ ನಂತರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಘಟಕದ ಅಧ್ಯಕ್ಷ ಸಿ.ಎ.ಸ್.ಷಡಾಕ್ಷರಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಂಘ ಐದು ಲಕ್ಷ ನೌಕರರ ನಾನಾ ಬೇಡಿಕೆ ಮತ್ತು ಹಿತಕಾಡಲು ಅವಿರತವಾಗಿ ಶ್ರಮಿಸುತ್ತಿದೆ. ಸರ್ಕಾರದ ಸಲಹೆ ಮತ್ತು ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದೇವೆ. ರಾಜ್ಯ ಸೇರಿ ಹೊರ ರಾಜ್ಯದ ಪ್ರವಾಹಕ್ಕೆ ಈ ಬಾರಿ ಎರಡು ಕೋಟಿ ಪರಿಹಾರ ಸಂಘದಿಂದ ನೀಡಿದ್ದೇವೆ.

ರಾಜ್ಯದ ಎಲ್ಲಾ ಸಂಘದ ಕಚೇರಿಗಳಲ್ಲಿ ಕಂಪ್ಯೂಟರೀಕರಣಕ್ಕೆ ಸರ್ಕಾ ರ ಕೋಟಿ ಅನುದಾನ ನೀಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಕಿ 2.5ಲಕ್ಷ ಹುದ್ದೆ ಖಾಲಿಯಿದ್ದು, ಭರ್ತಿಗೆ ಒತ್ತಾಯ ಮಾಡಲಾಗುವುದು.

ಆರು ಕೋಟಿ ಜನಸಂಖ್ಯೆಗೆ ತಕ್ಕ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಈಗಿರುವ ಅಧಿಕಾರಿಗಳು ಮೂರ್ನಾಲ್ಕು ಕಡೆ ಕೆಲಸ ಮಾಡುವಂತಾಗಿದೆ. ಶಿಕ್ಷಕರ ವಗರ್ಾವಣೆ ಕಾಯ್ಕೆ  ತಿದ್ದುಪಡಿ ಮಾಡಬೇಕು.

ದೂರದ ಊರುಗಳಿಗೆ ವರ್ಗಾಯಿಸುವ ಬದಲು 50 ಕಿಮೀ.ವ್ಯಾಪ್ತಿಯಲ್ಕಿ ನಗರದಿಂದ ಹಳ್ಳಿಗರ, ಹಳ್ಳಿಯಿಂದ ನಗರಕ್ಕೆ ವರ್ಗಾಯಿಸಬೇಕು. ನೂತನ ಪಿಂಚಣಿ ಯೋಜನೆ ವಿಚಾರದಲ್ಲಿ ಸಮಿತಿ ಸಲ್ಲಿಸುವ ವರದಿ ಅಧಾರದ ಮೇಲೆ ತೀಮರ್ಾನ ಕೈಗೊಳ್ಳುವುದಕ್ಕೆ ನೌಕರರ ಸಂಘ ಬೆಂಬಲಿಸಲಿದೆ. 

ಮೇ.2020ಕ್ಕೆ ಸಂಘಕ್ಕೆ ನೂರು ವರ್ಷ ಈ ಹಿನ್ನಲೆ `ಶತಮಾನೋತ್ಸವ ಕಾರ್ಯಕ್ರಮ  ಆಚರಣೆ ಮಾಡಲಾಗುವುದು ಎಂದರು.