ಬಳ್ಳಾರಿ: ಹಂಪಿ ಉತ್ಸವ ವೈವಿಧ್ಯಮಯ ಕಾರ್ಯಕ್ರಮಕ್ಕೆ ಸಿದ್ದತೆ

ಲೋಕದರ್ಶನ ವರದಿ

ಬಳ್ಳಾರಿ 08: ಮುಂಬರುವ ಜ.11, 12ರಂದು ಹಂಪಿ ಉತ್ಸವ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 4 ಕೋಟಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 5 ಕೋಟಿ ರೂ. ಅನುದಾನ ಕೇಳಲಾಗಿದ್ದು ನಾಲ್ಕು ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜ.11 ಹಾಗೂ 12 ಎರಡನೇ ಶನಿವಾರ, ಭಾನುವಾರ ರಜೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬರುವ ನಿರೀಕ್ಷೆ. ಪ್ರವಾಹ ಹಿನ್ನೆಲೆಯಲ್ಲಿ ಹಂಪಿಯ ಎದುರು ಬಸವಣ್ಣ ಬಳಿ ಇರುವ ಸಾಲು ಮಂಟಪಗಳಲ್ಲಿ ಹಸಿ ಇದೆ. ಆದರೂ ವೇದಿಕೆ ನಿಮರ್ಿಸಿ ಕಾರ್ಯಕ್ರಮ ಆಯೋಜಿಸಲಾಗುವುದು. ಗಾಯಿತ್ರಿ ಪೀಠದ ಬಳಿ ವಿಶಾಲವಾದ ಮುಖ್ಯ ವೇದಿಕೆ ನಿಮರ್ಾಣ ಮಾಡಲಾಗುವುದು. ವಿರೂಪಾಕ್ಷೇಶ್ವರ ದೇವಸ್ಥಾನ ಹಾಗೂ ಸಾಸಿವೆ ಕಾಳು ಗಣಪ ಬಳಿ ವೇದಿಕೆಗಳು ಇರಲಿವೆ.

ಡಿ.10ರವರೆಗೆ ಕಲಾವಿದರು ಅರ್ಜಿ  ಹಾಗೂ ದಾಖಲೆ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಕಲಾವಿದರ ಆಯ್ಕೆಗೆ ಸಮಿತಿ ರಚಿಸಲಾಗುವುದು. ನಿದರ್ಿಷ್ಟ ಕಲಾ ಪ್ರಕಾರ ಎಂದು ನಿಗದಿಪಡಿಸಿಲ್ಲ. ಕಲಾವಿದರು ಯೂ ಟ್ಯೂಬ್ ಲಿಂಕ್ ಕಳುಹಿಸಬೇಕು. ಸಾಸಿವೆ ಕಾಳು ಗಣಪ ವೇದಿಕೆಯಲ್ಲಿ ಜ್ಞಾನಾರ್ಜನೆಗೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಲಾಗುವುದು. ಮತ್ಸ್ಯ ಮೇಳ ಆಯೋಜಿಸಲಾಗುವುದು. 17 ಸ್ಥಳಗಳಲ್ಲಿ ಹಂಪಿ ಬೈ ನೈಟ್ ವ್ಯವಸ್ಥೆಗೆ ಸಿದ್ಧತೆ ನಡೆದಿದೆ. ಆನೆ ಸಾಲು ಮುಂದೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜಿಸಲಾಗುವುದು. ಮೈಸೂರು ದಸರಾ ಶೈಲಿಯಲ್ಲಿ ಹಂಪಿಯಿಂದ ಕಡ್ಡಿರಾಂಪುರ ಹಾಗೂ ಕಮಲಾಪುರದವರೆಗೆ ಬೆಳಕಿನ ವ್ಯವಸ್ಥೆಗೆ ಸಿದ್ಧತೆ ಮಾಡಲಾಗುವುದು.ನಾಲ್ಕು ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಉಪ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳು ಟೆಂಡರ್ ಕರೆಯಲಾಗಿದೆ. ನೀತಿ ಸಂಹಿತೆ ಮುಗಿದ ಬಳಿಕ ಟೆಂಡರ್ ತೆರೆಯಲಾಗುವುದು. ತಾಲೂಕು ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ತಂಡಕ್ಕೆ ಹಂಪಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಪ್ರದರ್ಶನ ನೀಡಲಾಗುವುದು. 

ಎಸ್ಪಿ ಸಿ.ಕೆ.ಬಾಬಾ ಮಾತನಾಡಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪಾಕಿರ್ಂಗ್ ವ್ಯವಸ್ಥೆ ಸೇರಿ ಇತರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳನ್ನು ಒಳಗೊಂಡಂತೆ ಒಂದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ವಿಂಟೇಜ್ ಕಾರು ಹಾಗೂ ಬೈಕ್ ರಾಲಿ ಆಯೋಜನೆ ಬಗ್ಗೆ ಚಿಂತನೆ ಇದೆ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ ರಾಜಪ್ಪ ಇದ್ದರು.