ಬಳ್ಳಾರಿ: ಬಳ್ಳಾರಿ ತಾಪಂ ಕೆಡಿಪಿ ಸಭೆ ಗ್ರಾಪಂ ಮಟ್ಟದ ಗ್ರಂಥಾಲಯಗಳನ್ನು ಸರ್ಕಾರಿ ಶಾಲೆಗೆ ವರ್ಗಾಯಿಸಲು ಸೂಚನೆ

ಲೋಕದರ್ಶನ ವರದಿ

ಬಳ್ಳಾರಿ 07: ಸರ್ಕಾರಿ ಶಾಲೆಯ ವಿದ್ಯಾಥರ್ಿಗಳ ಶೈಕ್ಷಣಿಕ ಗುಣಮಟ್ಟ  ಹೆಚ್ಚಿಸುವ ದೃಷ್ಟಿಯಿಂದ ತಾಲೂಕಿನ ಗ್ರಾಪಂ ಮಟ್ಟದಲ್ಲಿರುವ ಗ್ರಂಥಾಲಯಗಳನ್ನು ಸರ್ಕಾರಿ ಶಾಲೆಗೆ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಳ್ಳಿ, ಈ ಪ್ರಕ್ರಿಯೆ 10ದಿನದೊಳಗೆ ಆರಂಭವಾಗಬೇಕು ಎಂದು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಬಿಇಓಗೆ  ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ  ಗುರುವಾರ ಆಯೋಜಿಸಿದ್ದ  ಕೆಡಿಪಿ ಸಭೆಯಲ್ಲಿ  ಮಾತನಾಡಿದರು.

ಹಾಸನ ಜಿಲ್ಲೆಯಲ್ಲಿ  ವಿದ್ಯಾರ್ಥಿಯೋರ್ವ ಕೋಟ್ಯಾಧಿಪತಿ ಶೋನಲ್ಲಿ  ಗೆದ್ದ  ಹಣವನ್ನ  ಶಾಲಾ ಕಾಂಪೌಂಡ ಬಳಕೆಗೆ ನೀಡಲು ಮುಂದಾಗಿದ್ದಾನೆ ಎಂದರೇ ಸಕರ್ಾರಿ ಶಾಲೆಯಲ್ಲಿ  ಕಲಿತಿರುವ ಹವಾಗುಣದ ಪರಿಣಾಮವಿದು.

ಸಕರ್ಾರಿ ಶಾಲೆಯ ವಿದ್ಯಾರ್ಥಿಗಳು ಮಾನವೀಯ ನೆಲೆಗಟ್ಟಿನ ಜತೆಗೆ ಬುದ್ದಿವಂತಿಕೆಯಲ್ಲಿಯೂ ಪಾರಮ್ಯ ಮೆರೆದಿದ್ದಾರೆ. ನಮ್ಮ ತಾಲೂಕಿನಲ್ಲಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನ ಇನ್ನಷ್ಟು ಜಾಣರನ್ನಾಗಿ ಮಾಡುವುದಕ್ಕಾಗಿ ಗ್ರಾಪಂ ಮಟ್ಟದಲ್ಲಿರುವ ಗ್ರಂಥಾಲಯಗಳನ್ನು ಶಾಲೆಗಳಿಗೆ ಸ್ಥಳಾಂತರಿಸಿ ಅವರಿಗೆ ಓದಲು ಬೇಕಾದ ಎಲ್ಲ ಪುಸ್ತಕಗಳ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳೋಣ ಎಂದರು.

ಸಿದ್ದಮನಹಳ್ಳಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ತುಂಬುತ್ತಿಲ್ಲ. ಈ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಪಿಡಿಓಯೋರ್ವರು ದೂರಿದರು. ಈ ಕುರಿತಂತೆ ತ್ವರಿತವಾಗಿ ಕ್ರಮಕೈಗೊಂಡು ಜನರಿಗೆ ಸೌಲಭ್ಯ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಇಓ ತಾಕೀತು ಮಾಡಿದರು.

11ಗಂಟೆಗೆ ಆರಂಭವಾಗಬೇಕಿದ್ದ ಸಭೆ 12ಗಂಟೆಗೆ ಆರಂಭವಾಗಿದ್ದಲ್ಲದೆ ಬಹಳಷ್ಟು ಇಲಾಖೆಗಳ ಕುರಿತು ಸಮರ್ಪಕ ಚಚರ್ೆಯೇ ನಡೆಯಲಿಲ್ಲ. ಮೀನುಗಾರಿಕೆ, ಸಣ್ಣ ನೀರಾವರಿ, ಬಿಸಿಎಂ ಸೇರಿ ಬೆರಣಿಕೆಯಷ್ಟು ಇಲಾಖೆಗಳ ಕುರಿತು ಮಾತ್ರ ಚರ್ಿಸಲಾಯಿತು.ಇದಲ್ಲದೇ ಸಭೆಗೆ 31ಇಲಾಖೆಗಳು ಅಧಿಕಾರಿ, 39ಗ್ರಾಪಂ ಪಿಡಿಓಗಳು, ಇಓ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ 73ಜನ ಸಭೆಯಲ್ಲಿರಬೇಕಿದ್ದರೂ ಕೆಲ ಇಲಾಖೆಗಳ ಅಧಿಕಾರಿಗಳು ಮಾತ್ರ ಪಾಲ್ಗೊಂಡಿದ್ದರು.

ಅಧ್ಯಕ್ಷೆ ರಮೀಜಾ ಬಿ, ಉಪಾಧ್ಯಕ್ಷೆ ಪುಷ್ಪಾವತಿ ಸೇರಿ ಅಧಿಕಾರಿಗಳು ಇದ್ದರು.