ಬಳ್ಳಾರಿ: ವಾಯುಮಾಲಿನ್ಯ ನಿಯಂತ್ರಣ ಮಾಸ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 21: ನಗರದ ಸರ್ಕಾರಿ ಪ್ರೌಢಶಾಲೆ ಬಾಪೂಜಿನಗರ ಶಾಲೆಯಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿ, ಬಳ್ಳಾರಿ ಹಾಗೂ ಸನ್ಮಾರ್ಗ ಗೆಳೆಯರ ಬಳಗ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸ ನವೆಂಬರ್ 2019 ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಶ್ರೀಧರ್ ಮಲ್ನಾಡ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು-ಬಳ್ಳಾರಿ ಇವರು ಸಸ್ಯಕ್ಕೆ ನೀರು ಎರೆಯುವುದರೊಂದಿಗೆ ಚಾಲನೆ ನೀಡಿದರು. ಹೊಗೆರಹಿತ ವಾಹನ-ಆರೋಗ್ಯಕರ ಜೀವನ ಹೊಗೆ ಉಗುಳುವ ವಾಹನ-ಸೃಷ್ಠಿಯ ವಿನಾಶಕ್ಕೆ ಕಾರಣ ಎನ್ನುವ ಸಂದೇಶ ನೀಡಿದರು ಇದೇ ಸಂದರ್ಭದಲ್ಲಿ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ವಿದ್ಯಾಥರ್ಿಗಳಿಗೆ ಪ್ರಬಂಧ ಸ್ಪರ್ಧೆ  ಹಾಗೂ ಚಿತ್ರಕಲಾ ಸ್ಪರ್ಧಾ  ಏರ್ಪಡಿಸಿದ್ದರು ವಿಜೇತರಿಗೆ ಬಹುಮಾನ ವಿತರಸಿ ಶುಭ ಹಾರೈಸಿದರು. 

ಅತಿಥಿಗಳಾಗಿ ಆಗಮಿಸಿದ್ದ ನಾಗರಾಜ, ಸಿ.ಪಿ.ಬ್ರೂಸ್ಪೇಟೆ ಠಾಣೆ ಇವರು ಮಾತನಾಡುತ್ತಾ ಹೆಸರನ್ನು ಹೆಚ್ಚಿನ ಭೂಮಿಯನ್ನು ಉಳಿಸಿ ಕಾರ್ಖಾನೆಗಳಿಂದ ಆಗುತ್ತಿರುವ ವಾಯುಮಾಲಿನ್ಯದ ಕುರಿತು ತಿಳಿಸಿದರು ಕಾಡು ಬೆಳೆಸಿ ನಾಡು ಉಳಿಸಿ ಎಂದು ಸಂದೇಶ ನೀಡಿದರು.

ಎರ್ರಿಸ್ವಾಮಿ ಶಿಕ್ಷಕರು ಹಾಸ್ಯ ಕಲಾವಿದರು ಮಾತನಾಡುತ್ತ ನೀರು ದೇಹವನ್ನು ಶುದ್ದ ಮಾಡುತ್ತದೆ ಆದರೆ ನಗು ಮನಸ್ಸನ್ನು ಶುದ್ದ ಮಾಡುತ್ತದೆ ಎನ್ನುವ ಸಂದೇಶದೊಂದಿಗೆ ಮಾಲಿನ್ಯ ನಿಯಂತ್ರಣದಲ್ಲಿ ನಮ್ಮ-ನಿಮ್ಮ ಕರ್ತವ್ಯ ಜವಾಬ್ದಾರಿಗಳನ್ನು ಹಾಸ್ಯದೊಂದಿಗೆ ಮಕ್ಕಳೊಂದಿಗೆ ಸಂವಾದ ಮಾಡುತ್ತಾ ತಿಳಿಸಿದರು