ಸಂಕೇಶ್ವರ : ಪಟ್ಟಣದ ಶ್ರೀ ಹಿರಣ್ಯಕೇಶಿ ನದಿಯ ನೀರಲ್ಲಿ ವ್ಯಕ್ತಿಯೊಬ್ಬರ ಮೃತದೇಹವೊಂದು ಪತ್ತೆಯಾಗಿರುವ ಘಟನೆ ರವಿವಾರ ಸಂಜೆ ವರದಿಯಾಗಿದೆ.
ಬಾಬುರಾವ ಪವಾರ (55) ಮೃತ ವ್ಯಕ್ತಿಯಾಗಿದ್ದು, ನೆರೆಯ ಮಹಾರಾಷ್ಟ್ರದ ಚನ್ನಿಕುಪ್ಪಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಇವರು ಕಳೆದ ಮೂರು ದಿನಗಳ ಹಿಂದಷ್ಟೇ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಅವರ ಮೃತದೇಹವು ರವಿವಾರ ಸಂಜೆ ನೀರಿನ ಮೇಲ್ಲೆ ಪತ್ತೆಯಾಗಿದೆ. ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.