ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ- ಡಾ: ಸರಸ್ವತಿ
ರಾಣೇಬೆನ್ನೂರು: ಜ 1 ಇಂದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆ ಜೊತೆಗೆ ಪ್ರತಿ ಹಂತದಲ್ಲಿಯೂ ಶಿಸ್ತು, ಸಠುತೆ ಮತ್ತು ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದು ಆರಿ್ಟ.ಇ.ಎಸ್, ಕಲಾ ವಾಣಿಜ್ಯ ಮಹಾವಿದ್ಯಾಲಯದ, ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಸರಸ್ವತಿ ಬಮ್ಮನಾಳ ಹೇಳಿದರು. ಅವರು, ಇಲ್ಲಿನ ಅಂಜುಮನ್ ಸಂಸ್ಥೆಯ ಗೌಸಿಯಾ ಪದವಿ ಕಾಲೇಜಿನ, ರಾಷ್ಟ್ರೀಯ ಸೇವಾ ಯೋಜನಾ ಘಟಕವು ಆಯೋಜಿಸಿದ್ದ, "ಸ್ವಚ್ಛತಾ ಹಿ ಸೇವಾ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯು , ವಿದ್ಯಾರ್ಥಿಗಳು ಮಾನಸಿಕ, ದೈಹಿಕ, ಬೌದ್ಧಿಕ ಬೆಳವಣಿಗೆಯ ಜೊತೆಗೆ ದೇಶಪ್ರೇಮ, ಮತ್ತು ಆತ್ಮಸ್ಥೈರ್ಯ ಗುಣಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿಗಳು ತಮ್ಮ ನಿತ್ಯದ ಬದುಕಿನಲ್ಲಿ ನೈಜತೆ ಅಳವಡಿಸಿಕೊಳ್ಳಬೇಕು ಇದರಿಂದ ನಿತ್ಯ ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಸರಳತೆ ದೀರ್ಘಾಯುಷ್ಯ ಬದುಕಿಗೆ ದಾರೀದೀಪವಾಗಿದೆ ಎಂದರು. ಸ್ವಚ್ಛತಾ ಹಿ ಸೇವಾ ಶಿಬಿರದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಶ್ರಮದಾನ ಮಾಡಿದರು. ಕಾಲೇಜು ಪ್ರಾಚಾರ್ಯ ಇಬ್ರಾಹಿಂ ಹಿತ್ತಲಮನಿ ಅವರು ಅಧ್ಯಕ್ಷತೆ ವಹಿಸಿದ್ದರು. ಅಂಜುಮನ್ ಇಸ್ಲಾಂ ಅಧ್ಯಕ್ಷ ಎಚ್.ಎಫ್. ಬಿದರಿ, ಕಾರ್ಯದರ್ಶಿ ಅಯುಬ್ ಖಾಜಿ, ಶಿಕ್ಷಣ ಸಂಸ್ಥೆ ಚೇರ್ಮನ್ ಅತಾವುಲ್ಲಾ ಉದಗಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅನೀಶ್ ಹರಿಹರ, ಪ್ರಾಥಮಿಕ ಶಾಲಾ ಪ್ರಧಾನ ಗುರು, ಫೈರೋಜ್ ಖತಿಬ್ ಪ.ಪೋ.ಕಾಲೇಜು ಪ್ರಾಚಾರ್ಯ ರಾಜೇಶಾಬ್ ಯರೇಸೀಮಿ, ಉಪನ್ಯಾಸಕರಾದ ರಮೀ ಜಾಬಿ ಹರಿಹರ, ಪ್ರಿಯದರ್ಶಿನಿ ಬಿ.ಕೆ.ಫಿರ್ದೋಸ್ ಆಫ್ರಿನ್ ಜಮಖಂಡಿ, ಅಹಮ್ಮದ್ ರಜಾ ಲೋಹಾರ್ ಸೇರಿದಂತೆ ಉಪನ್ಯಾಸಕರು ಶಿಕ್ಷಕರು ಅಧ್ಯಾಪಕರು ಮತ್ತು ಅಂಜುಮನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.