ಕಾರವಾರ ವೈದ್ಯಕೀಯ ಕಾಲೇಜಿನ ನೂತನ ನಿರ್ದೇಶಕರಾಗಿ ಡಾ.ಪೂರ್ಣಿಮಾ ಆಯ್ಕೆ

Dr. Purnima has been selected as the new director of Karwar Medical College

ಕಾರವಾರ ವೈದ್ಯಕೀಯ ಕಾಲೇಜಿನ ನೂತನ ನಿರ್ದೇಶಕರಾಗಿ ಡಾ.ಪೂರ್ಣಿಮಾ ಆಯ್ಕೆ

ಕಾರವಾರ 01: ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿದ್ದ ಗಜಾನನ ನಾಯಕ ಅವರ ತೆರವಾದ ಸ್ಥಾನಕ್ಕೆ ಕ್ರೀಮ್ಸ್‌ ಜೀವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪೂರ್ಣಿಮಾ ಆರ್ ಟಿ ಪ್ರಭಾರ ನಿರ್ದೇಶಕರನ್ನಾಗಿ ಸರಕಾರ ನೇಮಕ ಮಾಡಿದೆ.ಮೂಲತಃ ದಾವಣಗೆರೆ ಜಿಲ್ಲೆಯ ಡಾ. ಪೂರ್ಣಿಮಾ ಆರ್‌.ಟಿ ಅವರು 2011ರಿಂದ ನಗರದ ಕ್ರಿಮ್ಸ್‌ ವೈದ್ಯಕೀಯ ಕಾಲೇಜಿನಲ್ಲಿ ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  

ದಾವಣಗೆರೆಯ ಜೆಜೆಎಮ್ ಮೆಡಿಕಲ್ ಕಾಲೇಜಿನಲ್ಲಿ ಎಮ್ ಬಿ ಬಿ ಎಸ್ ಪದವಿ ಪಡೆದ ಅವರು 2001 ರಲ್ಲಿ ಮೈಸೂರಿನಲ್ಲಿ ಎಮ್ ಡಿ ಮುಗಿಸಿದ್ದಾರೆ. ಬಳಿಕ ತಾವು ವೈದ್ಯಕೀಯ ಶಿಕ್ಷಣ ಪಡೆದ ಜೆಜೆಎಮ್ ಕಾಲೇಜಿನಲ್ಲೇ ತಮ್ಮ ವೈದ್ಯಕೀಯ ವೃತ್ತಿ ಆರಂಭಿಸಿದ್ದ ಇವರು 12 ವರ್ಷಗಳ ಕಾಲ ಅಲ್ಲಿಯೇ ಸೇವೆ ಸಲ್ಲಿಸಿ ಬಳಿಕ ಕಾರವಾರದ ಕ್ರಿಮ್ಸ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡಿದ್ದರು.  

ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 22 ವರ್ಷಗಳ ಅನುಭವ ಹೊಂದಿರುವ ಇವರು ಕಾರವಾರ ವೈದ್ಯಕೀಯ ಕಾಲೇಜಿನ ಮೊದಲ ಮಹಿಳಾ ನಿರ್ದೇಶಕರಾಗಿದ್ದಾರೆ.