15 ನೇ ವರ್ಷದ ಗೌತಮ ಸೂರ್ಯಸಿದ್ಧಾಂತ ಪಂಚಾಂಗ ಬಿಡುಗಡೆ
ಬಳ್ಳಾರಿ 23: ಭಾನುವಾರ ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಸುಶಮೀಂದ್ರ ಮಂಗಳ ಮಂಟಪದ ಆವರಣದಲ್ಲಿ ಜ್ಯೋತಿಶ್ಯರತ್ನ, ಮಧ್ವವಿಜಯ, ಹಾಗೂ ರಾಘವೇಂದ್ರ ವೈಭವ ಪ್ರಶಸ್ತಿ ಪುರಸ್ಕ್ರುತರಾದ ಗುರುರಾಜ ಕುಲಕರ್ಣಿಯವರಿಂದ ವಿರಚಿತ 15 ನೇ ವರ್ಷದ ಗೌತಮ ಸೂರ್ಯಸಿದ್ಧಾಂತ ಪಂಚಾಂಗ ವನ್ನು ಅನಿಲ್ ಆಚಾರ್ ಇವರ ಅಧ್ವೈರ್ಯದಲ್ಲಿ ಚಂಡಿ ಹೋಮಕ್ಕೆ ಪೂರ್ಣಾಹುತಿಯ ನಂತರ ವಿದ್ಯಾಸಿಂಧು ಮಾಧವ ತೀರ್ಥರ ಆಶೀರ್ವಚನದೊಂದಿಗೆ ಬಿಡುಗಡೆ ಮಾಡಲಾಯಿತು.
ಪ್ರಸನ್ನ ಮಾಧವ ಗುಡಿ (ಸ್ವರ ಮಹಾ ಯಜ್ಞಯ್ ಸಂಶೋಧಕರು ಹಾಗೂ ಸಂಗೀತ ಚಿಕಿತ್ಸಕರು, ಆಕಾಶವಾಣಿ ಕಲಾವಿದರು) ಇವರು ಸಂಗೀತ ಚಿಕಿತ್ಸೆಯಕಾರ್ಯಕ್ರಮ ( ಒಛಿ ಖಿಜಡಿಚಿಠಿಥಿ) ನೀಡಿದರು. ವಿದ್ಯಾಸಿಂಧು ಮಾಧವ ತೀರ್ಥರು ನೆರೆದ ಭಕ್ತಾದಿಗಳಿಗೆ ಆಶೀರ್ವಚನದೊಂದಿಗೆ ನೀಡಿದರು.
ಪಂಡಿತ್ ಗುರುರಾಜಾರ್ ರವರ ವೇದಘೋಷದೊಂದಿಗೆ ಕುಮಾರಿ ವಸುಧಾ ಹಾಗೂ ಸಂಜೀವಪ್ರಸಾದ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಅನೇಕ ಭಜನಾ ಮಂಡಳಿಗಳಿಂದ ಗೀತಗಾಯನ ಹಾಗೂ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮವೂ ನೆರವೇರಿತು.