ಲೋಕದರ್ಶನ ವರದಿ
ಶ್ರೀಶೈಲದಲ್ಲಿ ಅನ್ನದಾಸೋಹ: ಹಿಟ್ಟಕ್ಕಿ ವಾಹನಕ್ಕೆ ಚಾಲನೆ
ಮಹಾಲಿಂಗಪುರ 25: ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಿಗಳ ಸಮಿತಿ ವತಿಯಿಂದ ಶ್ರೀಶೈಲದಲ್ಲಿ ನಿರಂತರ 6 ದಿನಗಳ ಅನ್ನ ದಾಸೋಹ ಪ್ರಯುಕ್ತ 15 ಟನ್‌ಗೂ ಅಧಿಕ ಹಿಟ್ಟಕ್ಕಿ ತುಂಬಿದ ಲಾರಿ ಸಂಚಾರಕ್ಕೆ ಭಾನುವಾರ ಸಂಜೆ ಮಹಾಲಿಂಗೇಶ್ವರ ಮಠದ ಆಡಳಿತಾಧಿಕಾರಿ ಈಶ್ವರ ಮಠದ ಪೂಜೆ ನೆರವೇರಿಸಿದರು.
ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ. ಮುಖಂಡರಾದ ಮಹಾಲಿಂಗಪ್ಪ ಲಾತೂರ ಚಾಲನೆ ನೀಡಿದರು.
ಮುಖಂಡರಾದ ವಿಜುಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ಮಹಾಲಿಂಗ ಹೂಗಾರ, ಮಹಾಲಿಂಗ ಮಾಳಿ, ಸಿದ್ರಾಮ ದಲಾಲ, ಶೇಖರ ವಗ್ಗರ, ಪ್ರಕಾಶ ಕಂಬಾರ, ವಿಜಯ ಕಂಬಾರ, ಆನಂದ ಕಾಶಿ, ಕರೆಪ್ಪ ಕಪರಟ್ಟಿ, ರವಿ ಮುಂಡಗನೂರ, ಶಂಕರ ಮುರಗೋಡ, ಆನಂದ ಮುರಗೋಡ, ರಾಘು ಚಿಂಚಲಿ, ಆನಂದ ಹುಣಸಿಕಟ್ಟಿ, ರವಿ ಬಿ.ಪಾಟೀಲ, ನಾಗಪ್ಪ ಶಿರೋಳ, ನಾಗಪ್ಪ ಖೋತ, ಮಲ್ಲಿಕಾರ್ಜುನ ಖಾನಟ್ಟಿ, ಮಾಳಪ್ಪ ಹುಣಸಿಕಟ್ಟಿ ಇತರರಿದ್ದರು.
ಬಾಕ್ಸ್ :
ಸೋಮವಾರ ಸಂಜೆ ಶ್ರೀಶೈಲ ತಲುಪಿ ಮಂಗಳವಾರದಿಂದ ಮಾ.30ರ ಚಂದ್ರಮಾನ ಯುಗಾದಿ ಪಾಡ್ಯ ದಿನದವರೆಗೆ ನಿತ್ಯ 15 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾಸೋಹ ನೆರವೇರುವುದು. ಕಳೆದ 20 ವರ್ಷಗಳಿಂದ ಮಹಾಲಿಂಗಪುರ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಿಗಳ ಸಮಿತಿಯಿಂದ ಈ ಅನ್ನದಾಸೋಹ ಸೇವೆ ಶ್ರೀಶೈಲದಲ್ಲಿ ನೆರವೇರುತ್ತಾ ಬಂದಿರುವುದು ಸ್ಥಳೀಯ ಭಕ್ತರ ಹೆಗ್ಗಳಿಕೆ
ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು
ಮಹಾಲಿಂಗೇಶ್ವರ ಸಂಸ್ಥಾನ ಮಠ, ಮಹಾಲಿಂಗಪುರ