ಕೊಪ್ಪಳ 06: ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಸಮ್ಮಿಶ್ರ ಸಕರ್ಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾಗಿರುವ ಯಶೋಧ ಶ್ರೀಧರರವರು ಕಳೆದ ಎರೆಡು ದಶಕಗಳಿಂದ ಸಿದ್ದರಾಮಯ್ಯನವರ ಬೆಂಬಲಿಗರಾಗಿಯೆ ಕೈಲಾದಷ್ಟು ಸಮಾಜ ಸೇವೆ ಮತ್ತು ರಾಜಕಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಕಾಂಗ್ರೆಸ್ ಪಕ್ಷದಲ್ಲಾಗಲಿ ಅಥವ ಸಕರ್ಾರದಲ್ಲಿ ಆಗಲಿ ಸೂಕ್ತವಾದ ಸ್ಥಾನ ಮಾನ ಇನ್ನೂವರೆಗೆ ದೊರೆಯಲ್ಲಿಲ್ಲ, ಕೂಡಲೆ ದೊರೆಯಲಿ ಎಂಬುದು ಅವರ ಅನುಯಾಯಿಗಳ ಒತ್ತಾಯವಾಗಿದೆ.
ಸಿದ್ದರಾಮಯ್ಯರವರ ಕಾರ್ಯಚಟುವಟಿಕೆ ಅವರ ಅಹಿಂದ್ ವರ್ಗದ ಜನರ ಅಭಿವೃದ್ಧಿ ಕಾರ್ಯಕ್ರಮಗಳು ಬೆಂಬಲಿಸಿದ ಯಶೋಧ ಶ್ರೀಧರರವರು ಬ್ಯಾಂಕ್ ನೌಕರಿ ಕೆಲಸಕ್ಕೆ ರಾಜಿನಾಮೆ ನೀಡಿ ಸಮಾಜ ಸೇವೆ ಮತ್ತು ರಾಜಕೀಯ ಸೇವಗಾಗಿ ಸಿದ್ದರಾಮಯ್ಯನವರನ್ನು ಬೆಂಬಲಿಸಿ ಕೆಲಸ ಮಾಡುತ್ತ ನಿರಂತರವಾಗಿ ಸೂಮಾರು ಎರೆಡು ದಶಕಗಳಿಂದ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾಗಿ ಉಳಿದುಕೊಂಡಿದ್ದಾರೆ.
ಅವರಿಗೆ ಇನ್ನುವರೆಗು ಯಾವುದೇ ರೀತಿಯ ಸ್ಥಾನ ಮಾನ ದೊರೆಯದೇ ಇರುವುದು, ವಿಪಯರ್ಾಸ ವಾಗಿದೆ. ಮೂಲತಹ ಹಿಂದುಳಿದ ಹೈದರಬಾದ ಕನರ್ಾಟಕ ಪ್ರದೇಶದಿಂದ ಗುರುತಿಸಿಕೊಂಡಿರುವ ಯಶೋಧ ಶ್ರೀಧರರವರು ಈ ಭಾಗದಲ್ಲಿ ಬ್ಯಾಂಕ್ ಉದ್ಯೊಗಿ ಯಾಗಿದ್ದರು, ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ ಬಳಿಕ ಎರಡು-ಮೂರು ಬಾರಿ ಚುನಾವಣೆ ಸಂದರ್ಭದಲ್ಲಿ ನಿಗಮ ಮಂಡಳಿ ನೇಮಕಾತಿ ಸಂದರ್ಭದಲ್ಲಿ ಇವರ ಹೆಸರು ಈ ಭಾಗದಿಂದ ಮುಂಚುಣಿಯಲ್ಲಿತ್ತು, ಆದರೇ, ಇನ್ನೂವರೆಗೆ ಅವರಿಗೆ ಸಿದ್ದರಾಮಯ್ಯನವರ ಕೃಪ ಕಟಾಕ್ಷ ಆಶಿವರ್ಾದ ಅಥವ ಹಸೀರು ನೀಶಾನೆ ದೊರೆಯಲಿಲ್ಲ, ಯಶೋಧ ಶ್ರೀಧರರವರ ಅನುಯಾಯಿ ಬೆಂಬಲಿಗರು, ಸಿದ್ದರಾಮಯ್ಯನವರ ಹಸೀರು ನಿಶಾನೆಗಾಗಿ ಕಾಯುತ್ತಿದ್ದಾರೆ, ಈಗಲಾದರೂ ಅವರು ಕಾಂಗ್ರೇಸ್ ಪಕ್ಷದಲ್ಲಾಗಲೀ ಅಥವಾ ಸಕರ್ಾರದಲ್ಲಾಗಲೀ ಅವರಿಗೆ ಸೂಕ್ತವಾದಂತಹ ಸ್ಥಾನ ಮಾನ ದೊರಕಿಸಿ ಕೊಡಲು ಸಿದ್ದರಾಮಯ್ಯನವರು ಮುಂದಾಗಲಿ ಎಂಬುದೆ ಹೈ.ಕ. ಪ್ರದೇಶ ಅದರಲ್ಲೂ ವಿಶೇಷವಾಗಿ ಕೊಪ್ಪಳದ ಕೆಲ ಕಾರ್ಯಕರ್ತರ ಮತ್ತು ಅಭಿಮಾನಿಗಳ ಅಭಿಲಾಶೆ ಯಾಗಿದೆ. ಮತ್ತು ಸಿದ್ದರಾಮಯ್ಯ ನವರಿಗೆ ಒತ್ತಾಯ ಕೂಡ ಪತ್ರಿಕಾ ಪ್ರಕಟಣೆ ಮೂಲಕ ಮಾಡಿದೆ.