ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನಕ್ಕಾಗಿ ದಕ್ಷತೆಯಿಂದ ಕೆಲಸ ನಿರ್ವಹಿಸಿ: ಜಿ.ಪಂ. ಅಧ್ಯಕ್ಷ ಬಳಿಗಾರ

ಗದಗ 20:   ಜಿಲ್ಲೆಯಲ್ಲಿನ ರಸ್ತೆ ಕಾಮಗಾರಿ,   ಚೆಕ್ ಡ್ಯಾಂ, ಕೆರೆ  ಸ್ವಚ್ಛತೆ,  ಕೆರೆ ದುರಸ್ತಿ ನಿರ್ವಹಣೆ  ಕುರಿತಂತೆ ವಿವಿಧ  ಕಾಮಗಾರಿಗಳ ಅನುಷ್ಟಾನಕ್ಕಾಗಿ ಸಂಬಂಧಿತ ಇಲಾಖೆ ಅಧಿಕಾರಿಗಳು  ಹೆಚ್ಚಿನ ದಕ್ಷತೆಯಿಂದ ಕೆಲಸ  ನಿರ್ವಹಿಸಬೇಕು ಎಂದು ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ  ಎಸ್.ಪಿ. ಬಳಿಗಾರ ಅವರು ನುಡಿದರು.

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು  ಮಾಸಿಕ ಕೆಡಿಪಿ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಸಿಂಗಟಾಲೂರು ಏತ ನೀರಾವರಿ ಯೋಜನೆಗೆ  ಸಂಬಂಧಿಸಿದಂತೆ  ಬಿಡುಗಡೆಯಾದ ಅನುದಾನ, ಖಚರ್ಾದ ಮತ್ತು ಉಳಿಕೆ   ಅನುದಾನದ ವಿವರವಾದ ಮಾಹಿತಿಯನ್ನು  ಸಂಬಂಧಿತ  ಅಧಿಕಾರಿಗಳು   ಸಲ್ಲಿಸಬೇಕೆಂದು  ಎಸ್.ಪಿ. ಬಳಿಗಾರ ಅವರು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಹಂಗಾಮು ಪ್ರಾರಂಭವಾಗಿದ್ದು ರೈತ ರಿಗೆ ರಸಗೊಬ್ಬರ  ಹಾಗೂ ಬಿತ್ತನೆ ಬೀಜ ವಿತರಣೆ ಹಾಗೂ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚಚರ್ಿಸಿ   ಅವರು   ಮಾಹಿತಿ   ಪಡೆದರು. 

ಕೇಂದ್ರ ಸಕರ್ಾರವು ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಗಳನ್ನು ಗುರುತಿಸಿ ಅಂತಹ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ  ಅರಣ್ಯೀಕರಣ, ಅಂತರ್ಜಲ ಪುನಶ್ಚೇತನ, ಮಳೆ ನೀರು ಸಂಗ್ರಹಣೆ ಕುರಿತಾಗಿ  ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸುವ  ಜಲಶಕ್ತಿ ಯೋಜನೆ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಗಳ ಮಾಹಿತಿಯನ್ನು ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ        ನೀಡಲು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ  ತಿಳಿಸಿದರು.   

        ಜಿಲ್ಲೆಯ  ರೈತರಿಗೆ ಬೇಕಾಗಿರುವ  ಬೀಜ ಮತ್ತು ರಸಗೊಬ್ಬರಗಳನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ.  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕುರಿತು ಗ್ರಾ. ಪಂ. ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಪ್ರಚಾರ ಮಾಡಲಾಗಿದ್ದು        ಈಗಾಗಲೇ 132549 ರೈತರ ಸ್ವಯಂ ಘೋಷಣೆಗಳನ್ನು ಪಡೆದು ಆನ್ ಲೈನ್ ನಲ್ಲಿ ನೊಂದಾಯಿಸಲಾಗಿದೆ.  ಸಿರಿ ಧಾನ್ಯ ಬೆಳೆಗೆ   ಪ್ರೋತ್ಸಾಹಿಸಲು ಒಂದು ಕುಟುಂಬಕ್ಕೆ  ಪ್ರತಿ ಹೆಕ್ಟೇರ್ಗೆ 10,000 ರೂ.  ನೀಡಲಾಗುತ್ತಿದೆ  ಎಂದು ಜಂಟಿ ಕೃಷಿ ನಿದರ್ೇಶಕ  ಟಿ.ಎಸ್.   ರುದ್ರೇಶ ತಿಳಿಸಿದರು.    

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ.   ಕ್ಷಯ ರೋಗಿಗಳ ನಿಯಂತ್ರಣಕ್ಕೆ ಪ್ರತಿ ತಿಂಗಳು ಸಮುದಾಯ ಮಟ್ಟದ ಸಭೆ, ಶಾಲಾಕಾಲೇಜುಗಳಲ್ಲಿ ಅರಿವು ಮೂಡಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.   ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯತ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕತರ್ೆಯರೊಂದಿಗೆ  ಸಮೀಕ್ಷೆ ನಡೆಸಿ  ಅಗತ್ಯವಿದ್ದಲ್ಲಿ ಟೆಮಿಸಾಸ್ ರಾಸಾಯನಿಕ ಸಿಂಪಡಣೆ,  ಡಿಡಿಟಿ ಪೌಡರ್ ಸಿಂಪರಣೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿರುಪಾಕ್ಷರೆಡ್ಡಿ ಮಾದಿನೂರು ಅವರು ಸಭೆಗೆ ತಿಳಿಸಿದರು.     

          2018-19 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಶೇ. 40 ಕ್ಕಿಂತ ಕಡಿಮೆ ಫಲಿತಾಂಶ ಬಂದ 9 ಶಾಲೆಗಳಿಗೆ ನೋಟೀಸ ಜಾರಿ ಮಾಡಲಾಗಿದೆ.  ಎಸ್.ಎಸ್.ಎಲ್. ಸಿ ಪರೀಕ್ಷೆ ಪಲಿತಾಂಶ ಉನ್ನತೀಕರಿಸಲು    ತಾಲೂಕು ಹಂತದಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜೂನ್ ಮೊದಲನೇ ವಾರದಲ್ಲಿ ಗುರು ಪ್ರೇರಣಾ ತರಬೇತಿಯನ್ನು ಎಲ್ಲ ವಿಷಯಗಳಲ್ಲಿ.    ಪ್ರಾಥಮಿಕ ಹಾಜರಾತಿಯನ್ನು ಹೆಚ್ಚಿಸಲು  ಮೇ 30 ರಂದು  ಅಕ್ಷರ ಗುಡಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ.  ಜಿಲ್ಲೆಯ  ಎಲ್ಲ ಶಾಲಾ   ಮಕ್ಕಳಿಗೆ ಯೋಗದ ಕುರಿತು ಅರಿವು ಮೂಡಿಸುವ ಸಲುವಾಗಿ ಜೂನ್ 21 ರಂದು ಎಲ್ಲ ಶಾಲೆಗಳಲ್ಲಿ ಯೋಗ ಕಾರ್ಯಕ್ರಮ ನಡೆಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎನ್.ಎಚ್. ನಾಗೂರ ಅವರು ಸಭೆಗೆ  ತಿಳಿಸಿದರು.      

         ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.    ಸಭೆಯಲ್ಲಿ ಜಿಲ್ಲಾ ಪಂಚಾಯತ್  ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಹನುಮಂತಪ್ಪ ಪೂಜಾರ,  ಶಿಕ್ಷಣ ಮತ್ತು ಆರೋಗ್ಯ  ಸಮಿತಿ ಅಧ್ಯಕ್ಷರಾದ  ಶಿವಕುಮಾರ್ ನೀಲಗುಂದ,  ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಜಿ.ಪಂ. ಯೋಜನಾ ನಿದರ್ೇಶಕ ಟಿ. ದಿನೇಶ,  ಜಿ.ಪಂ. ಉಪಕಾರ್ಯದಶರ್ಿ ಪ್ರಾಣೇಶ ರಾವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.