ಜಗಜೀವನರಾಂ ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು: ಸೋಮನಕಟ್ಟಿ
ಬ್ಯಾಡಗಿ 06: ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಂತೆ ಬಾಬು ಜಗಜೀವನ್ ರಾಂ ಅವರು ಕೂಡ ಜಾತಿ ಮತ್ತು ಕನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದವರು ಶೋಷಿತ ವರ್ಗದವರಿಗಾಗಿ ದುಡಿದ ಮಹನೀಯರು ಎಂದು ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಹೇಳಿದರು.ತಾಲೂಕ ಆಡಳಿತ ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರೇ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದೆ ಡಾಕ್ಟರ್ ಬಾಬು ಜಗಜೀವನರಾಂ ಅವರ 118ನೇ ಜಯಂತಿ ಕಾರ್ಯಕ್ರಮದಲ್ಲಿ ಬಾಬಾ ಜಗಜೀವನರಾಂ ಅವರಿಗೆ ಉತ್ಪನ್ನ ಮನಸ್ ಸಲ್ಲಿಸುವ ಮೂಲಕ ಮಾತನಾಡಿದವರು ಜಗಜೀವನರಾಂ ಅವರ ಸಂಘರ್ಷಮ ವಾಗಿದ್ದರೂ ಕೂಡ ಸಂವಿಧಾನಿಕ ನಾಯಕರಾಗಿ ದೇಶಕ್ಕೆ ಮತ್ತು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಜಗಜೀವನರಾಂ ಅವರ ಜಯಂತಿಯನ್ನು ಆಚರಿಸುವ ಮೂಲಕ ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಮಲ್ಲಿಕಾರ್ಜುನ ಮಾತನಾಡಿ ಜಗಜೀವನರಾಂ ಅವರು ಬಿಹಾರ ರಾಜ್ಯದ ಶೋಷಿತ ಸಮಾಜದಲ್ಲಿ ಹುಟ್ಟಿ ಬೆಳೆದ ನಾಯಕ ಸಮಾಜದಲ್ಲಿ ಸಮಾನತೆ ಮತ್ತು ಸರ್ವರಿಗೂ ಸಮಬಾಳು ಸಮಪಾಲು ತರಲು ಶ್ರಮಿಸಿದವರು ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಆಗಬೇಕೆಂದು ಹಸಿರು ಕ್ರಾಂತಿಗೆ ನಾಂದಿ ಹಾಡಿದವರು ಇಂತಹ ಮಹಾನ್ ನಾಯಕನನ್ನು ನಾವಿಂದು ಅವರ ಜನ್ಮದಿನವನ್ನು ಆಚರಿಸುವ ಮೂಲಕ ಸ್ಮರಿಸಿಕೊಳ್ಳುವುದು ನಮ್ಮ ಪುಣ್ಯದ ಕೆಲಸ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುರೇಶ್ ಅಶಾದಿ. ಎಂ ಡಿ ಚಿಕ್ಕಣ್ಣನವರ. ದುರ್ಗೇಶ ಗೋಣೆಮ್ಮನವರ. ಸೋಮು ಮಾಳಗಿ. ಸುಭಾಷ್ ಮಾಳಗಿ ಶಿವಾನಂದ ಯಮುನಕ್ಕನವರ್. ಚಂದ್ರಶೇಖರ ಗದಗಕರ.ರವಿ ಹುಣಸಿಮರದ. ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೊಡ್ಡ ಬಸವರಾಜ್. ಶಿಶು ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಚಂದ್ರಶೇಖರ್. ಹಾಗೂ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಸಮಾಜ ಬಾಂಧವರು ಹಾಗೂ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.