ಜಲಶಕ್ತಿ ಅಭಿಯಾನ, ಧ್ವನಿ ಸಂದೇಶ ಉದ್ಘಾಟನೆ

ಗದಗ 24:  ಜಿಲ್ಲಾ ಪಂಚಾಯತ್, ಗದಗ, ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ, ಕೃಷಿ ಇಲಾಖೆ, ಗದಗ ಹಾಗೂ ರಿಲೈಯನ್ಸ್ ಫೌಂಡೇಶನ್, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಹುಲಕೋಟಿಯಲ್ಲಿ ಜಲಶಕ್ತಿ ಅಭಿಯಾನ ಹಾಗೂ ಧ್ವನಿ ಸಂದೇಶ ಉದ್ಘಾಟನಾ ಸಮಾರಂಭವನ್ನು ದಿ. 23ರಂದು ಏರ್ಪಡಿಸಲಾಗಿತ್ತು. 

ಅಂತರ್ಜಲದ ಮೇಲೆ ಹೆಚ್ಚಿನ ಅವಲಂಬನೆ, ಮಳೆ ಕೊರತೆ, ಅಸಮರ್ಪಕ ನೀರಿನ ಬಳಕೆ, ನಗರೀಕರಣ ಹಾಗೂ ಉದ್ಯಮೀಕರಣಗಳಿಂದ ನೀರಿನ ಬೇಡಿಕೆ ಹೆಚ್ಚಾಗಿದ್ದು, ನೀರಿನ ಸಂರಕ್ಷಣೆ ಹಾಗೂ ಅದರ ಸಮರ್ಪಕ ಬಳಕೆ ಬಗ್ಗೆ ಜನ ಸಮೂಹಕ್ಕೆ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.  ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜಲಶಕ್ತಿ ಅಭಿಯಾನವನ್ನು ಆರಂಭಿಸಿದ್ದು, ಜಿಲ್ಲೆಯಲ್ಲಿ ಕೃಷಿ ಹಾಗೂ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು, ನೀರು ಸಂರಕ್ಷಣೆ ವ್ಯವಸ್ಥೆಯನ್ನು ಪುನಃಜರ್ಿಕರಿಸುವ ನಿಟ್ಟಿನಲ್ಲಿ ಕೈ ಜೋಡಿಸಿ ಕೆಲಸ ಮಾಡಲು ಟಿ.ಎಸ್.ರುದ್ರೇಶಪ್ಪ, ಜಂಟಿ ಕೃಷಿ ನಿದರ್ೇಶಕರು, ಗದಗ ಜಿಲ್ಲೆ ಇವರು ಮಾತನಾಡಿದರು.

ರಿಲೈಯನ್ಸ್ ಫೌಂಡೇಶನ್ ಹಾಗೂ ಕೆವಿಕೆ, ಹುಲಕೋಟಿ ಇವರ ವತಿಯಿಂದ "ಧ್ವನಿ ಸಂದೇಶ" ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ವ್ಯವಸ್ಥೆಯಲ್ಲಿ ಜಿಲ್ಲೆಯ ರೈತರಿಗೆ ಕೃಷಿ ಸಂಬಂಧಿತ ಮಾಹಿತಿ, ವಿವಿಧ ಇಲಾಖೆಗಳ ಯೋಜನೆಗಳು, ಕೃಷಿ ಮಾರುಕಟ್ಟೆ ಹಾಗೂ ಹವಾಮಾನ ಮಾಹಿತಿಯನ್ನು ಧ್ವನಿ ಸಂದೇಶದ ಮುಖಾಂತರ ರೈತರ ಮೊಬೈಲ್ಗಳಿಗೆ ಕಳುಹಿಸಲಾಗುವುದು.  ಜಿಲ್ಲೆಯ ನೋಂದಾಯಿತ 98 ಸಾವಿರ ರೈತರಿಗೆ ಮಾಹಿತಿಯನ್ನು ಕಳುಹಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಾ. ಎಚ್.ಎಸ್.ಜಿನಗಿ, ಕಾರ್ಯ ನಿವರ್ಾಹಕ ಅಧಿಕಾರಿಗಳು, ತಾಲೂಕು ಪಂಚಾಯತ, ಗದಗ ಇವರು ನೀರು ಸಂರಕ್ಷಣೆಯಲ್ಲಿ ರೈತ ಸಮುದಾಯ ಕ್ರಿಯಾಶೀಲರಾಗಿ ಭಾಗವಹಿಸಲು ವಿನಂತಿಸಿದರು.  ಕುರಿ ಹಾಗೂ ಉಣ್ಣೆ  ನಿಗಮದ ಸಹಾಯಕ ನಿದರ್ೇಶಕರಾದ ಡಾ. ಆರ್.ಎಮ್.ನಾಯಕರ, ಕೃಷಿ ವಿಶ್ವ ವಿದ್ಯಾಲಯ, ಧಾರವಾಡದ ಪ್ರಾಧ್ಯಾಪಕರಾದ ಡಾ. ಬಿ.ಆಯ್. ಬಿದರಿ ಹಾಗೂ ರಿಲೈಯನ್ಸ್ ಸಂಸ್ಥೆಯ ಮಾಹಿತಿ ತಂತ್ರಜ್ಞರಾದ ಡಾ. ಸುರೇಶ ಅಡಿಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕೆವಿಕೆ ವಿಸ್ತರಣಾ ತಜ್ಞರಾದ ಎಸ್.ಎಚ್.ಆದಾಪೂರ ಇವರು ಜಲಶಕ್ತಿ ಅಭಿಯಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಬಿ.ಗೋವಿಂದಯ್ಯ, ಯೋಜನಾ ನಿದರ್ೇಶಕರು, ರಿಲೈಯನ್ಸ್ ಫೌಂಡೇಶನ್ ಇವರು ಮಾತನಾಡಿ ಈಗಾಗಲೇ ರಿಲೈಯನ್ಸ್ ಫೌಂಡೇಶನ್  ಸಂಸ್ಥೆಯು ಕನರ್ಾಟಕ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಲಕ್ಷಾಂತರ ರೈತರಿಗೆ ಧ್ವನಿ ಸಂದೇಶವನ್ನು ಕೊಡಲಾಗುತ್ತಿದ್ದು, ಗದಗ ಜಿಲ್ಲೆಯಲ್ಲಿ ಮೊದಲನೆಯ ಸಲ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.  ಕ್ಷೇತ್ರಾಧಿಕಾರಿಗಳಾದ ಶಿವಶರಣಪ್ಪ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.  ಕೆವಿಕೆ ತಜ್ಞರಾದ ಎಸ್.ಕೆ.ಮುದ್ಲಾಪೂರ ಇವರು ವಂದಾನರ್ಪಣೆಗೈದರು.  ಕಾರ್ಯಕ್ರಮದಲ್ಲಿ 250 ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು, ಶ್ರಮಜೀವಿ ರೈತ ಉತ್ಪಾದಕ ಸಂಸ್ಥೆಯ ಸದಸ್ಯರು ಹಾಗೂ ಕೃಷಿ ವಿದ್ಯಾಥರ್ಿನಿಯರು ಭಾಗವಹಿಸಿದ್ದರು.