ವಿಜಯಪುರ 18: ನಗರದ ಸಿದ್ಧರಾಮೇಶ್ವರ ದೇವಸ್ಥಾನದ ಎದುರು ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಆಶ್ರಯದಲ್ಲಿ ಶನಿವಾರ ಬುದ್ಧಪೂರ್ಣಿಮೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಮಂಡಳಿಯ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮಾನವರನ್ನು ಮಾನವರನ್ನಾಗಿ ಕಾಣುವ ವಿಶಾಲ ದೃಷ್ಟಿ ನಮ್ಮಲ್ಲಿರಬೇಕೆಂದು ಭಗವಾನ ಬುದ್ಧರು ಹೇಳಿದ್ದಾರೆ. ಆಸೆಯನ್ನು ತೊರೆದು ನಿಸ್ವಾರ್ಥ ಜೀವನ ಮಾಡಬೇಕು. ಆಸೆಯೇ ದುಃಖಕ್ಕೆ ಕಾರಣ ಎಂಬ ಬುದ್ಧನ ಮಾತು ಬದುಕಿದೆ ದಾರಿ ದೀಪವಾಗಿದೆ ಎಂದರು.
ಬುದ್ಧನ ಜನನ, ಬುದ್ಧನಿಗೆ ಜ್ಞಾನೋದಯ (ಅರಿವು), ಬುದ್ಧನ ಶರೀರ ತ್ಯಾಗ (ಪರಿನಿರ್ವಾಹಣ) ವೈಶಾಖ ಶುಕ್ಲ ಹುಣ್ಣಿಮೆಯಂದು ಆಗಿದ್ದು ವಿಶೇಷವಾಗಿದೆ. ಅದ್ಕಕಾಗಿಯೇ ಬುದ್ಧ ಪೂಣರ್ಿಮಾ ಎಂದು ಕರೆಯುತ್ತಾರೆ. ಬುದ್ಧನ ಮೂಲ ಹೆಸರು ಸಿದ್ಧಾರ್ಥ, ತಾಯಿ ಮಾಯಾದೇವಿ, ತಂದೆ ಶುದ್ದೊಧನ, ಬುದ್ಧ ಹುಟ್ಟಿದ ತಕ್ಷಣವೇ ಎಲ್ಲ ಲಕ್ಷಣಗಳು ಮಹಾಪುರುಷನಾಗುತ್ತಾನೆ, ವೈರಾಗ್ಯಸಂಪನ್ನನಾಗುತ್ತಾನೆ ಎಂದ ಜೋತಿಷ್ಯರು ಭವಿಷ್ಯ ನುಡಿದಿದ್ದರು. ಸಿದ್ಧಾರ್ಥನಿಗೆ ಲೋಕದ ಪರಿಚಯವಾಯಿತು. ರೋಗ, ಸಾವು, ಅಡ್ಡಿ ಆತಂಕಕಗಳು ಪರಿಚಯವಾದವು. ತನ್ನ 29ನೇಯ ವರ್ಷದಲ್ಲಿ ರಾಜಭೋಗ ಬಿಟ್ಟು ಅರಣ್ಯ ಸೇರಿ ಜ್ಞಾನ ಪಡೆದನು. ಅಂದಿನಿಂದ ಜಗತ್ತಿಗೆ ಬುದ್ಧನಾಗಿ ಪರಿಚಯನಾದನು. ವಿಶ್ವದಲ್ಲಿ ಭೌದ್ಧ ಧರ್ಮದ ಸ್ಥಾನ ಮಾನ ಕಲ್ಪಿಸಿದ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಯಕುಮಾರ ಘಾಟಗೆ ಮಾತನಾಡಿ, ಕನಿಷ್ಕನು ಏರ್ಪಡಿಸಿದ ಭೌದ್ಧ ಸಮಾವೇಶದಲ್ಲಿ ಭಗವಾನ ಬುದ್ಧರ ಪಾತ್ರ ಮುಖ್ಯವಾಗಿತ್ತು. ಬುದ್ಧ ತತ್ವ ಅಷ್ಟಾಂಗ ಮಾರ್ಗದ ಮೂಲಕ ಮೋಕ್ಷ ಪಡೆಯುವ ದಾರಿಯನ್ನು ತೋರಿಸಿದನು. ಚೀನಾ ಯಾತ್ರಿಕ ಹೂಯನ್ತ್ಸಾಂಗ ಚೀನಿ ಲಿಪಿಯಲ್ಲಿ ಭೌದ್ಧ ಧರ್ಮದ ತತ್ವಗಳನ್ನು ಬರೆದನು. ಇಂದು ಜಗತ್ತಿನ ಎಲ್ಲ ಭಾಷೆಗಳಲ್ಲಿ ಭೌದ್ಧ ಧರ್ಮದ ಸಾಹಿತ್ಯ ದೊರಕುತ್ತದೆ ಎಂದರು.
ಮಾನವ ಹಕ್ಕುಗಳ ಹೋರಾಟಗಾರ್ತಿ ಯಾಸ್ಮೀನ ಯಲಗಾರ ಮಾತನಾಡಿ, ಜ್ಞಾನ ಮತ್ತು ತಪಸ್ಸಿನಿಂದ ಬುದ್ಧ ಮಹಾತ್ಮನಾದನು. ಜಗತ್ತಿನ ಸತ್ಯ ಸಂಗತಿಯನ್ನು ಅರಿತು ಬದುಕನ್ನು ಮಾಡಿ ಜಗತ್ತಿಗೆ ತೋರಿಸಿದ ಮಹಾಪುರುಷ ಬುದ್ಧ. ಮಹಾಕವಿ ಅಶ್ವಘೋಷನ ಭಕ್ತಿ ಶಕ್ತಿ, ಸತ್ಯ, ವಿನಯ, ವಿದ್ಯಾವೈಭವ, ಪರಿಚಯವನ್ನು ಮಾಡಿ ಆಧ್ಯಾತ್ಮಿಕ ಜೀವನವೇ ಮೇಲು ಎಂದು ತೋರಿಸಿದವರು ಭಗವಾನ ಬುದ್ಧ ಎಂದರು.
ರುಬಿನಾ ಗುಂದಗಿ, ರಿಯಾನಾ ನಾಗಠಾಣ, ಸರ್ವಾನಂದ ಕುಬರಡ್ಡಿ, ಬಸವರಾಜ ಬಗಲಿ, ಮುದಸ್ಸರ ವಾಲಿಕಾರ, ವಿಠ್ಠಲ ದಳವಾಯಿ, ಮಹಾಲಿಂಗೇಶ್ವರ ಕರಬಂಟನಾಳ, ಈಶ್ವರ ಬೀದರ, ಸಿದ್ದು ಇಂಗಳೇಶ್ವರ, ಗೌತಮ ನಹಾರ, ಉಕಮಿಚಂದ ಜೈನ, ರಾಜು ದೊರೆ ಮುಂತಾದವರು ಉಪಸ್ಥಿತರಿದ್ದರು.