ವಿಜಯಪುರ : ಎಸ್ಎಸ್ಎಲ್ಸಿ ಫಲಿತಾಂಶ: ಭತಗುಣಕಿ ಪ್ರೌಢಶಾಲೆ ಸಾಧನೆ

ಲೋಕದರ್ಶನ ವರದಿ

ವಿಜಯಪುರ : ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಎಸ್.ಎಸ್. ಮಿಸಾಳೆ ಪ್ರೌಢಶಾಲೆಯ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 97 ವಿದ್ಯಾರ್ಥಿಗಳಲ್ಲಿ  85 ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು  ಪ್ರಥಮ ಶ್ರೇಣಿಯಲ್ಲಿ 23 ವಿದ್ಯಾರ್ಥಿಗಳು , ದ್ವಿತೀಯ ಶ್ರೇಣಿಯಲ್ಲಿ 46 ವಿದ್ಯಾಥರ್ಿಗಳು ಹಾಗೂ ತೃತೀಯ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು  ಪಾಸಾಗಿದ್ದಾರೆ. 

578 ಅಂಕಗಳನ್ನು ಪಡೆದ ಲಕ್ಷ್ಮೀ ಸಲಗರ ಶಾಲೆಗೆ ಪ್ರಥಮ ಸ್ಥಾನ, 573 ಅಂಕಗಳನ್ನು ಪಡೆದ  ಸುಧಾಕರ ಪಾಟೀಲ ದ್ವಿತೀಯ ಸ್ಥಾನ, 554 ಅಂಕಗಳನ್ನು ಪಡೆದ ಅಂಬಿಕಾ ಭೈರಶೆಟ್ಟಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ  ಬಿ.ಎಂ,ಕೋರೆ ಹಾಗೂ ಮುಖ್ಯೋಪಧ್ಯಾಯ  ಆರ್.ಎಂ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ