ವಿಜಯಪುರ: ಲಿಂಗಾಯತರ ಕಡೆಗಣನೆ: ಎಂ.ಬಿ.ಪಾಟಿಲ ಅಸಮಾಧಾನ

ಲೋಕದರ್ಶನ ವರದಿ

ವಿಜಯಪುರ 03: ಕೇಂದ್ರ ಸಚಿವ ಸಂಪುಟದಲ್ಲಿ ಲಿಂಗಾಯತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

   ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಎನ್ಡಿಎ ಸಕರ್ಾರ ಲಿಂಗಾಯತನ್ನು ಕಡೆಗಣಿಸುತ್ತಿದ್ದು, 10 ಜನ ಲಿಂಗಾಯತ ಸಂಸದರಲ್ಲಿ ಕೇವಲ ಒಬ್ಬರಿಗೆ ಅದೂ ರಾಜ್ಯ ಸಚಿವ ಖಾತೆ ನೀಡಲಾಗಿದೆ. ಇದು ಲಿಂಗಾಯತ ವಿರೋಧಿ ನೀತಿ ಎಂದು ಎಂ.ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಿಂದ ಸುರೇಶ ಅಂಗಡಿ ಹಾಗೂ ಧಾರವಾಡದಿಂದ ಪ್ರಹ್ಲಾದ್ ಜೋಶಿ ಅವರು ನಾಲ್ಕು ಬಾರಿ ಜಯ ಗಳಿಸಿದ್ದಾರೆ. ಸುರೇಶ ಅಂಗಡಿ ಅವರು ರಾಜ್ಯ ಸಚಿವರು, ಪ್ರಹ್ಲಾದ್ ಜೋಶಿ ಅವರಿಗೆ ಕ್ಯಾಬಿನೆಟ್ ಖಾತೆ ನೀಡಲಾಗಿದೆ. ಈ ಇಬ್ಬರೂ ನಾಲ್ಕು ಬಾರಿ ಗೆಲುವು ದಾಖಲಿಸಿದರೂ ಸಹ ಸುರೇಶ್ ಅಂಗಡಿಯವರಿಗೂ ಕ್ಯಾಬಿನೆಟ್ ದಜರ್ೆ ಸಚಿವರನ್ನಾಗಿ ಮಾಡಿಲ್ಲ ಎಂದರು.  

ರಾಜ್ಯದಲ್ಲಿ ಸಮ್ಮಿಶ್ರ ಸಕರ್ಾರ ಬಿದ್ದು ಯಡಿಯೂರಪ್ಪ ಸಿ.ಎಂ. ಆಗುತ್ತಾರೆ ಎನ್ನುವುದು ಬರೀ ಕನಸು. ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಮೊದಲು ತಮ್ಮ ಖಾತೆ ಕುರಿತು ಚಿಂತೆ ಮಾಡಲಿ. ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ, ಈ ಕಾರಣಕ್ಕಾಗಿ ಸುರೇಶ ಅಂಗಡಿಯವರಿಗೆ ಸ್ವಾಭಿಮಾನ ಇದ್ದರೆ ತಮ್ಮ ಸ್ಥಾನವನ್ನು ತಿರಸ್ಕಾರ ಮಾಡಲಿ. ನನಗೇನಾದರೂ ಹೀಗೆ ಆಗಿದ್ದರೆ ನಾನು ಖಂಡಿತವಾಗಿಯೂ ಸಚಿವ ಸ್ಥಾನ ತಿರಸ್ಕರಿಸುತ್ತಿದ್ದೆ ಎಂದರು. 

ಹಿಂದಿ ಭಾಷೆ ಹೇರಿಕೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ. ಪಾಟೀಲ, ಯಾವುದೇ ಒಂದು ಭಾಷೆಯನ್ನು ಹೇರುವಾಗ ಚಚರ್ೆ ಮಾಡಬೇಕು. ಕನ್ನಡ ಭಾಷೆ ಉಳಿಸಿ ಬೆಳೆಸಬೇಕು. ಹಿಂದಿ ಭಾಷೆಯ ಕುರಿತು ವ್ಯಾಪಕವಾಗಿ ಚಚರ್ೆ ನಡೆಸಿ ಅಭಿಪ್ರಾಯ ಕೂಡಿಕರಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ವಿಚಾರ ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಷಯ. ಈ ವಿಷಯವನ್ನು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೆಗೌಡರು ಈ ಕುರಿತು ಚರ್ಚಿಸುತ್ತಾರೆ . ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದ್ದೇ ಸೋಲಿಗೆ ಕಾರಣ ಎನ್ನುವ ವಿಚಾರವನ್ನು ನಾನು ಒಪ್ಪುವುದಿಲ್ಲ ಎಂದರು.