ವಿಜಯಪುರ: ಕರಾಟೆ ಚಾಮಪಿಯನ್ಶಿಪ್: ವಿದ್ಯಾರ್ಥಿಗಳ ಸಾಧನೆ

ಲೋಕದರ್ಶನ ವರದಿ

ವಿಜಯಪುರ 06: ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಇತ್ತೀಚಿಗೆ ಜರುಗಿದ ಆಲ್ ಇಂಡಿಯಾ ಇನ್ವೆಟಿಸಲ್ ಕರಾಟೆ ಚಾಂಪಿಯನಶಿಫ್ 2019 ರಲ್ಲಿ ಭಾಗವಹಿಸಿದ್ದ ವಿಜಯಪುರದ ಟೈಕೊಂಡೊ ಸಂಸ್ಥೆ ಬಂಜಾರಾ  ಶಾಲೆಯ ವಿದ್ಯಾರ್ಥಿಗಳು  ಉತ್ತಮ ಸಾಧನೆ ತೋರಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದು ಶಾಲೆಗೆಕೀರ್ತಿ ತಂದಿದ್ದಾರೆ. 

8 ವರ್ಷದ ವಿಭಾಗದ ಪೈಟಿಂಗ್ ಮತ್ತು ಕಟಾ  ಅನುಪಮ ಬೆಳ್ಳುಬ್ಬಿ ಗೊಲ್ಡ ಮತ್ತು ಸಿಲ್ವರ,  9 ವರ್ಷದ ವಿಭಾಗದಲ್ಲಿ ಪಾಯಲ ರಾಠೋಡ ಪೈಟಿಂಗ್ ಮತ್ತು ಕಟಾದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಅದರಂತೆ 14 ವರ್ಷದ ವಿಭಾಗದ ಸಿಪಾಲಿ ರಾಠೋಡ ಪೈಟಿಂಗದಲ್ಲಿ ಚಿನ್ನ ಹಾಗೂ ಕಟಾದಲ್ಲಿ ಬೆಳ್ಳಿ,  17ವರ್ಷದ ವಿಭಾಗದಲ್ಲಿ ಸಂದೀಪ ಲಮಾಣಿ ಪೈಟಿಂಗ್ನಲ್ಲಿ ಚಿನ್ನ ಹಾಗೂ ಕಟಾದಲ್ಲಿ ಕಂಚಿನ ಪದಕ, 20 ವರ್ಷ ಮೇಲ್ಪಟ್ಟ ವಿಭಾಗದ ಆನಂದ ರಾಠೋಡ ಪೈಟಿಂಗದಲ್ಲಿ ಬೆಳ್ಳಿ ಹಾಗೂ ಕಟಾದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. 

10 ವರ್ಷದೊಳಗಿನ ವಿಭಾಗದಲ್ಲಿ ಅಂಜಲಿ ರಾಠೋಡ ಕಟಾದಲ್ಲಿ ಬೆಳ್ಳಿ, 17 ವರ್ಷದ ವಿಭಾಗದಲ್ಲಿ ಕಿರಣ ಪವಾರ ಕಟಾದಲ್ಲಿ ಬೆಳ್ಳಿ,  ರೋಹಿತ ರಾಠೋಡ ಕಂಚಿನ ಪದಕ, 22 ವರ್ಷ ವಿಭಾಗದ ಚಿನ್ನಾ ಲಮಾಣಿ ಕಟಾದಲ್ಲಿ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.  ವಿಜಯಪುರ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ  ವಿಜಯಕುಮಾರ ರಾಠೋಡ ಮಾರ್ಗದರ್ಶನ ಮಾಡಿದ್ದರು.