ದೆಹಲಿಯಲ್ಲಿ ಗೆಲುವು : ಬಿಜೆಪಿ ವಿಜಯೋತ್ಸವ
ಹೂವಿನಹಡಗಲಿ 08: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದ್ದಕ್ಕೆ ಹೂವಿನಹಡಗಲಿ ತಾಲೂಕು ಬಿಜೆಪಿ ಪಕ್ಷದಿಂದ ಶನಿವಾರ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ರೆಡ್ಡಿ ಮಾತನಾಡಿ, ’ದೆಹಲಿ ಚುನಾವಣೆಯ ಈ ಫಲಿತಾಂಶ ಹಾಗೂ ದೇಶದ ಜನರ ಮನಸ್ಸಿನಲ್ಲಿ ನರೇಂದ್ರ ಮೋದಿ ಎಷ್ಟು ಗಟ್ಟಿಯಾಗಿ ಬೇರೂರಿದ್ದಾರೆ ಎಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ. ತಾಲೂಕು ಬಿಜೆಪಿ ಅದ್ಯಕ್ಷ ಮಲ್ಲಿಕಾರ್ಜುನ. ಮುಖಂಡರಾದ ಲಕ್ಷ್ಮಣನಾಯ್ಕ. ಹೆಚ್.ಪೂಜಪ್ಪ.ಈಟಿ.ಲಿಂಗರಾಜ.ವಿಜಯಲಕ್ಷ್ಮಿ ಇದ್ದರು.