ಲ್ಯಾಳ ಕ್ರಾಸ್ ಬಳಿ ಟಿಪ್ಪರ್ ಡಿಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವು

Bike rider dies as a result of tipper collision near Lala Cross

ಲ್ಯಾಳ ಕ್ರಾಸ್ ಬಳಿ ಟಿಪ್ಪರ್ ಡಿಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವು 

ಜಮಖಂಡಿ 07 : ತಾಲ್ಲೂಕಿನ ಹುಲ್ಯಾಳ ಕ್ರಾಸ್ ಬಳಿ ಟಿಪ್ಪರ್ ಡಿಕಿ ಹೊಡೆದ ಪರಿಣಾಮ ಬೈಕ್ ಸವಾರನ್ನು ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆಯೊಂದು ಸಂಭವಿಸಿದೆ.ಮಳ್ಳಲ್ಲಿ ಗ್ರಾಮದ ಭೀಮಶಿ ಉಪ್ಪಾರ (30) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು. ಕಾರ್ತಿಕ ಕಾಂಬಳೆ (20) ಇತನಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ.ಜಮಖಂಡಿಯಿಂದ ಮುಧೋಳ ರಸ್ತೆ ಮಾರ್ಗವಾಗಿ ಇಬ್ಬರು ಬೈಕ್ ಮೇಲೆ ಹೊಗುವ ಸಮಯದಲ್ಲಿ ಹಿಂಬದಿಯಿಂದ ಟಿಪ್ಪರ್ ವೇಗವಾಗಿ ಬೈಕ್ ಸವಾರರಿಗೆ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಭೀಮಶಿ ಉಪ್ಪಾರ ಓರ್ವನು ಸಾವನ್ನಪ್ಪಿದ್ದು. ಕಾರ್ತಿಕ ಕಾಂಬಳೆಗೆ ಗಂಭೀರ ಗಾಯವಾದ ಕಾರಣ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೋಲಿಸರು ಮಾಹಿತಿ ತಿಳಿಸಿದ್ದಾರೆ.ಸ್ಥಳಕ್ಕೆ ಗ್ರಾಮೀಣ ಠಾಣೆಯ ಎ.ಎಸ್‌.ಐ.ಎಸ್‌.ಎಸ್‌.ಬೀಳಗಿ ಹಾಗೂ ಸಿಬ್ಬಂದಿಗಳು ಪರೀಶೀಲನೆ ನಡೆಸಿದ್ದಾರೆ.ಪೋಟೋ : ಎ.ಬಿ.ಸಿ.ತಾಲ್ಲೂಕಿನ ಹುಲ್ಯಾಳ ಕ್ರಾಸ್ ಬಳಿ ಬೈಕ್ ಸವಾರರಿಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಓರ್ವನು ಸಾವು.