ಸಂಕೇಶ್ವರದ ಶ್ರೀ ಶಂಕರಾಚಾರ್ಯ ಮಠದ ಅದ್ದೂರಿ ರಥೋತ್ಸವ : ಮೊಳಗಿದ ಹರ್ ಹರ್ ಮಹಾದೇವ ವಾಕ್ಯಘೋಷ

A grand chariot festival of Sri Shankaracharya Math, Sankeshwara: Har Har Mahadeva chants rang out.

ಸಂಕೇಶ್ವರ : ಎರಡನೇ ಕಾಶಿಯಂದು ಕರೆಯಲಾಗುವ ಸಂಕೇಶ್ವರದ ಪುರಾತನ ಪ್ರಸಿದ್ದ ಶ್ರೀ ಶಂಕರಾಚಾರ್ಯ ಮಠದ ಮಹಾಯಾತ್ರೆಯ ಅಂಗವಾಗಿ ಶುಕ್ರವಾರ ಸಂಜೆ ರಥೋತ್ಸವವು ಅದ್ದೂರಿಯಾಗಿ ಜರುಗಿತು. 

    ಕಳೆದ ಮೂರುದಿನಗಳಿಂದ ಪ್ರಾರಂಭಗೊಂಡಿರುವ ಸಂಕೇಶ್ವರದ ಶ್ರೀ ಶಂಕರಾಚಾರ್ಯ ಮಠದ ಯಾತ್ರೆಯು ಬುಧವಾರ ಶ್ರೀ ರಥವು ಶಂಕರಾಚಾರ್ಯರ ಮಠದಿಂದ ಬನಶಂಕರಿ ದೇವಸ್ಥಾನಕ್ಕೆ ಕರೆತರಲಾಗಿತ್ತು. ಬಳಿಕ ಗುರುವಾರ ಒಂದು ದಿನ ಬಿಟ್ಟು ಮಹಾಯಾತ್ರೆಯ ಅಂಗವಾಗಿ  ಶುಕ್ರವಾರ ಸಂಜೆ ಅದ್ದೂರಿಯ ರಥೋತ್ಸವ ನಡೆಯಿತು. 

    ಈ ಯಾತ್ರೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯದ ಸಾವಿರಾರು ಜನರು ರಥೋತ್ಸವದಲ್ಲಿ ಭಾಗಿಯಾಗುವ ಮೂಲಕ ದೇವರ ದರ್ಶನ ಪಡೆದು ಪುಣಿತರಾದರು. 

     ರಥೋತ್ಸವದಲ್ಲಿ ಹರ್ ಹರ್ ಮಹಾದೇವ ಎಂಬ ಘೋಷ ವಾಕ್ಯದೊಂದಿಗೆ ಹಗ್ಗ ಎಳೆದು ರಥವನ್ನು ಶ್ರೀ ಶಂಕರಾಚಾರ್ಯರ ‌ಮಠಕ್ಕೆ ತರಲಾಯಿತು. ರಥಕ್ಕೆ ತೆಂಗಿನಕಾಯಿ ಕೊಬ್ಬರಿ ಹೂವು ಬಂಡಾರ ಹಾರಿಸುವ ಮೂಲಕ ಸಾವಿರಾರು ಭಕ್ತರು ತಮ್ಮ ಹರಕೆ ಯನ್ನು ತಿರಿಸಿದರು.