ಮಧಬಾವಿ ಗ್ರಾಮದಲ್ಲಿ ಅಥಣಿ ತಾಲೂಕಾ ರೈತ ಸಂಘ ಹಾಗೂ ಗಡಿಭಾಗದ ರೈತರ ಸಮಾವೇಶ ಹಾಗೂ ಚರ್ಚೆ ಏರಿ್ಡಸಲಾಗಿತ್ತು.
ಸಂಬರಗಿ 8 : 2014 ರಿಂದ ಇಲ್ಲಿಯವರೆಗೆ ರೈತರ ಪಂಪ್‌ಸೇಟ್ ವಿದ್ಯೂತ್ ಬಿಲ್ 30ಕೋಟಿ ಬಾಕಿ ಇದ್ದು, ಸರಕಾರ ಶೀಘ್ರದಲ್ಲಿ ವಿದ್ಯೂತ್ ಬಿಲ್ ಮಣ್ಣಾ ಮಾಡಬೇಕು. ಇಲ್ಲವಾದರೆ ಫೆಬ್ರವರಿ 24ರಂದು ಹೆಸ್ಕಾಂ ಮುಖ್ಯ ಕಛೇರಿ ಎದುರಿಗೆ ಅ ನಿರ್ಧಿಷ್ಟವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯ ಸಂಚಾಲಕ ರಾಜಕುಮಾರ ಜಂಬಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಮಧಬಾವಿ ಗ್ರಾಮದಲ್ಲಿ ಅಥಣಿ ತಾಲೂಕಾ ರೈತ ಸಂಘ ಹಾಗೂ ಗಡಿಭಾಗದ ರೈತರ ಸಮಾವೇಶ ಹಾಗೂ ಚರ್ಚೆ ಏರಿ್ಡಸಲಾಗಿತ್ತು. ಆ ವೇಳೆ ಈ ತೀರ್ಮಾಣ ತೆಗೆದುಕೊಳ್ಳಲಾಯಿತು.
ಗಡಿ ಭಾಗದ ಹತ್ತು ಗ್ರಾಮದ ರೈತರು ವಿವಿಧ ಬ್ಯಾಂಕ್‌ದಿಂದ ಸಾಲ ಪಡೆದು ಕೃಷ್ಣಾ ನದಿಯಿಂದ ಪೈಪ್‌ಲೈನ್ ಮುಖಾಂತರ ನೀರಿನ ಸರಬರಾಜು ಮಾಡಿಕೊಂಡರು. 24ಘಿ7 ವಿದ್ಯೂತ್ ಎಕ್ಸ್‌ಪ್ರೇಸ್ ಲೈನ್‌ವನ್ನು ಅಳವಡಿಸಿಕೊಂಡರು. ಆದರೆ ಪ್ರವಾಹ ಬಂದಾಗ ವಿದ್ಯೂತ್ ಸ್ಥಗಿತಗೊಂಡಿತು. ನೀರು ಸರಬರಾಜು ಆಗದಿದ್ದರೂ ಸಹ ವಿದ್ಯೂತ್ ಬಿಲ್‌ವನ್ನು ಹೆಸ್ಕಾಂ ಇಲಾಖೆಯವರು ಹಾಕಿದ್ದಾರೆ. 500 ಕುಟುಂಬದ ರೈತರು ಬೀದಿ ಪಾಲಾಗಿದ್ದಾರೆ. ಸರ್ಕಾರ ಶೀರ್ಘದಲ್ಲಿ ವಿದ್ಯೂತ್ ಬಿಲ್ ಮಣ್ಣಾ ಮಾಡಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾಣ ತೆಗೆದುಕೊಳ್ಳಲಾಯಿತು. ರೈತರು ವಿದ್ಯುತ್ ಬಿಲ್ ಪಾವತಿಸಲು ತಮ್ಮ ಜಮೀನವನ್ನು ಮಾರಾಟ ಮಾಡಿ ತುಂಬುವ ಸ್ಥಿತಿಯಲ್ಲಿ ಬಂದಿದ್ದಾರೆ. ಇಂತಹ ಕಷ್ಟದಲ್ಲಿ ರೈತರು ಸಿಲುಕಿದ್ದಾರೆ. ಸರ್ಕಾರ ಸ್ಪಂದನೆ ಮಾಡಿ ಸಾಲವನ್ನು ಮಣ್ಣಾ ಮಾಡಬೇಕು.
ಈ ವೇಳೆ ರೈತ ಮುಖಂಡ ಆರ್.ಎಮ್. ಪಾಟೀಲ, ಮರಗೇಪ್ಪಾ ಮಗದುಮ್, ತಾಲೂಕಾ ಅಧ್ಯಕ್ಷ ಎಮ್. ಸಿ.ತಾಂಬೋಳಿ, ಬಾಬು ಜತ್ತಿ, ಗುರುಪಾದ ಮದಣ್ಣವರ, ಅಪ್ಪಾಸಾಬ ಮುಜಗುನಿ, ಶಿವಾನಂದ ಮುಜಗುನಿ, ಶ್ರೀಧರ ಹುಂಡೆಕರ, ಬಾಬು ಜತ್ತಿ, ಶ್ರೀಶೈಲ ಕೆಂಪವಾಡ, ಗಿರಿಶ ಟಕ್ಕೋಡಿ ಸೇರಿದಂತಹ ರೈತರು ಉಪಸ್ಥಿತ ಇದ್ದರು.