ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿ ಅರವಿಂದ ರಾಠೋಡ ಆಯ್ಕೆ.
ದೇವರಹಿಪ್ಪರಗಿ 08: ಭಾರಿ ಕುತೂಹಲ ಕೆರಳಿಸಿದ್ದ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ,ದೇವರ ಹಿಪ್ಪರಗಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅರವಿಂದ ರಾಠೋಡ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತಾಲೂಕಿನ ಕೋರವಾರ ಗ್ರಾಮದ ಯುವ ಮುಖಂಡರಾಗಿ, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸುಭಾಸ ಛಾಯಗೋಳ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹಾಗೂ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾದ ಸಂಗಮೇಶ ಛಾಯಗೋಳ ಅವರ ಮಾರ್ಗದರ್ಶನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಆನ್ಲೈನ್ ಮುಖಾಂತರ ನಡೆದ ಚುನಾವಣೆಯಲ್ಲಿ ಸುಮಾರು 953 ಮತಗಳನ್ನು ಪಡೆಯುವ ಮೂಲಕ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದಾರೆ.ಆಯ್ಕೆಗೆ ಪ್ರತ್ಯಕ್ಷ ಹಾಗೂ ಅಪರೂಕ್ಷವಾಗಿ ಸಹಕಾರ ನೀಡಿದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮುಖಂಡರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಧನ್ಯವಾದಗಳು ತಿಳಿಸಿದ್ದಾರೆ