ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ರಿಯಾಜ್ ಅಹ್ಮದ್ ಆಯ್ಕೆ: ಕಂಪ್ಲಿಯಲ್ಲಿ ಸಂಭ್ರಮಾಚರಣೆ
ಕಂಪ್ಲಿ 08: ಕಂಪ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ರಿಯಾಜ್ ಅಹ್ಮದ್ ಆಯ್ಕೆಗೊಂಡ ಹಿನ್ನಲೆ ಯುವ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯುವ ಮುಖಂಡ ಖಾಜಾ ಮಾತನಾಡಿ, ಇತ್ತೀಚೆಗೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತ್ತು. ಆದರೆ, ಶುಕ್ರವಾರದಂದು ಫಲಿತಾಂಶ ಪ್ರಕಟವಾದ ಹಿನ್ನಲೆ ನೂತನ ಅಧ್ಯಕ್ಷರಾಗಿ ರಿಯಾಜ್ ಅಹ್ಮದ್ ಆಯ್ಕೆಗೊಂಡಿರುವುದು ಯುವ ಕಾರ್ಯಕರ್ತರದಲ್ಲಿ ಹರ್ಷೋದ್ಘಾರ ಮೂಡಿದೆ. ಇಂತಹ ಯುವ ನಾಯಕರಿಂದ ಕಾಂಗ್ರೆಸ್ ಅನ್ನು ಇನ್ನೂ ದೊಡ್ದ ಮಟ್ಟದಲ್ಲಿ ಸಂಘಟಿಸಲು ಸಾಧ್ಯವಾಗುತ್ತದೆ ಎಂದರು. ನಂತರ ಅಧ್ಯಕ್ಷ ರಿಯಾಜ್ ಅಹ್ಮದ್ ಮಾತನಾಡಿ, ಜನಪ್ರಿಯ ನಾಯಕ ಶಾಸಕ ಜೆ.ಎನ್.ಗಣೇಶ್ ಅವರ ಆಶೀರ್ವಾದಿಂದಾಗಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಲು ಸಾಧ್ಯವಾಗಿದೆ. ಶಾಸಕರ, ಮುಖಂಡರ, ಯುವ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷದ ಏಳಿಗೆಗೆ ಶ್ರಮಿಸಲಾಗುವುದು. ಮತ್ತು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದು, ಯಾವುದೇ ಚುತಿ ಬಾರದಂತೆ ನೋಡಿಕೊಳ್ಳಲಾಗುವುದು. ಯುವಕರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದರು. ತದನಂತರ ಯುವಕರು ನೂತನ ಅಧ್ಯಕ್ಷರಿಗೆ ಮಾಲಾರೆ್ಣಯೊಂದಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಅಕ್ಕಿ ಜಿಲಾನ್, ರಾಜ, ಮೊಹ್ಮದ್, ಸಂದೀಪ್, ಶೇಖರಿ, ಗಂಗಣ್ಣ, ಆಟೋ ರಾಘು, ಸುಧಾ, ಶ್ರೀನಿವಾಸ, ಯುಸೂಫ್, ಮೆಹಬೂಬ್, ವಾಹಿದ್, ಮಾಜಿದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಫೆ.002: ಕಂಪ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ರಿಯಾಜ್ ಅಹ್ಮದ್ ಆಯ್ಕೆಗೊಂಡ ಹಿನ್ನಲೆ ಯುವ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.