ವಲಯದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕವಿ ಚಕ್ರವರ್ತಿ ರನ್ನ ಕುರಿತು ವಿವಿಧ ಚಟುವಟಿಕೆಗಳು
ಮಹಾಲಿಂಗಪುರ, 08; ಇದೆ 22 ರಿಂದ ಆರಂಭವಾಗುವ ರನ್ನ ವೈಭವ -2025 ರ ರನ್ನ ಸಂಭ್ರಮದ ಅಡಿಯಲ್ಲಿ ಮುಧೋಳ ವಲಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕವಿ ಚಕ್ರವರ್ತಿ ರನ್ನ ಕುರಿತು ಫೆಬ್ರವರಿ 01 ರಿಂದ 20 ವರೆಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಆದೇಶ ಹೊರಡಿಸಿದೆ.
ಈ ಆದೇಶದಂತೆ ರನ್ನ ಬೆಳಗಲಿ ಪಟ್ಟಣದ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆಯಲ್ಲಿ ಗದಾಯುದ್ಧ ಪ್ರಸಂಗವನ್ನು ಬರೆಯುತ್ತಿರುವ ರನ್ನ ಭಾವಚಿತ್ರ ಕುರಿತು ಚಿತ್ರ ಕಲಾ ಸ್ಪರ್ಧೆ ಏರಿ್ಟತು. ಈ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಪೂಜಾ ಒಡೆಯರ್ ಪ್ರಥಮ. ಕುಮಾರಿ ಲಾಲಮಾ ಒಂಟಿ ದ್ವಿತೀಯ. ಕುಮಾರಿ ಈರ್ಪ ದೊಡಮನಿ ತೃತೀಯ ಸ್ಥಾನಗಳನ್ನು ಪಡೆದರು.ವಿಧ್ಯಾರ್ಥಿಗಳು ಈ ಪ್ರಶಸ್ತಿಗಳನ್ನು ಬರುವ 22 ರಂದು ರನ್ನ ವೇದಿಕೆ ಮೇಲೆ ಸ್ವೀಕರಿಸಲಿದ್ದಾರೆ.
ಫೆಬ್ರುವರಿ 22 ರಂದು ರನ್ನ ಬೆಳಗಲಿ ಪಟ್ಟಣದಲ್ಲಿ ರನ್ನ ವೈಭವದ ಸಂಭ್ರಮಕ್ಕೆ ಚಾಲನೆ ದೊರೆತು, 23 ಹಾಗೂ 24 ನೇ ತಾರೀಖಿನಂದು ಮುಧೋಳ ನಗರದಲ್ಲಿ ಶೇಷ ಕಾರ್ಯಕ್ರಮ ಅದ್ಧೂರಿ ಸಮಾರಂಭದೊಂದಿಗೆ ಸಮಾರೋಪಗೊಳ್ಳಲಿದೆ. ಜಿಲ್ಲಾಡಳಿತ ಹಾಗೂ ರನ್ನ ಪ್ರತಿಷ್ಠಾನ ಆಯೋಜಿಸಿರುವ ಈ ಕಾರ್ಯವು ಮಹಾಕವಿ ರನ್ನನ ಸಾಹಿತ್ಯ, ಕನ್ನಡ ಭಾಷೆ ಸೊಗಡು, ಪಾಂಡಿತ್ಯ ಹಾಗೂ ಶ್ರೇಷ್ಠತೆಯನ್ನು ಮುಂದಿನ ಪೀಳಿಗೆಯಲ್ಲಿ ಬಿಂಬಿಸುವ ಉದ್ಧೇಶ ಹೊಂದಿದ್ದು ಇದನ್ನು ಹಮ್ಮಿಕೊಂಡಿರುವ ಇಲಾಖೆಯ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದು ಚಿತ್ರ ಕಲಾ ಶಿಕ್ಷಕರಾದ ಚೋಪಡೆ ಪತ್ರಿಕೆಗೆ ಹೆಮ್ಮೆಯಿಂದ ಹೇಳುತ್ತಾರೆ.
ಈ ಸಂದರ್ಭದಲ್ಲಿ ಎಸ್ ಎಸ್.ಉದಪುಡಿ, ಪ್ರಭಾರಿ ಮುಖ್ಯ ಗುರುಮಾತೆ ಪಿ ಕೆ. ಪವಾರ, ವ್ಹಿ ಎಂ. ಹೊಸೂರ, ಎಸ್ ಎಂ. ಮೇಗಾಡಿ, ಎಲ್ ಎಂ. ಶಾಸ್ತ್ರಿ, ಎಸ್ ಕೆ. ಕಾಡದೇವರಮಠ, ಅಮಿತ್ ತಳಗೇರಿ, ಕಿರಣ ಪವಾರ, ವಿಕಾಸ ಕೊಣ್ಣೂರ, ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಚೋಪಡೆ ಉಪಸ್ಥಿತರಿದ್ದರು.