ಬೆಳಗಾವಿ 07: ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎಂ.ಕಾಂ.ಕೊನೆಯ ವರ್ಷದ ವಿದ್ಯಾರ್ಥಿ ಸಾಹಿಲ್ ರಾಜಾರಾಮ ಜಾಧವ ಹಾಗೂ ಬಿ.ಕಾಂ. ಅಂತಿಮ ವರ್ಷದ ಸುಮಿತ್ ಸುಧೀರ ಮುತಗೇಕರ ಆಸ್ಟ್ರೇಲಿಯಾದ ಮೆಲ್ಬೋರ್ನ್‌ದಲ್ಲಿ ಇದೇ 11 ಫೆಬ್ರುವರಿಯಿಂದ 16ರ ವರೆಗೆ ಜರುಗಲಿರುವ ಸಿಟಿ ಪ್ಯಾರಾ ಸ್ವೀಮಿಂಗ್ ವರ್ಲ್ಡ ಸೀರೀಸ್‌ಗೆ ಆಯ್ಕೆಯಾಗಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇರ್ವರು ಪ್ಯಾರಾ ಈಜು ಪಟುಗಳು 50 ಮೀ. ಬಟರ್ ಪ್ಲಾಯ್, 100 ಮೀ. ಫ್ರೀ ಸ್ಟ್ಯಾಲ್, ಬ್ರೆಸ್ಟ್‌ಸ್ಟ್ರೋಕ್, 200 ಮೀ.ವೈಯುಕ್ತಿಕ ಮಿಡ್ಲೆಗಳಲ್ಲಿ ಸ್ಪರ್ಧೆಯನ್ನು ನೀಡಲಿದ್ದಾರೆ.
ಅಂತರಾಷ್ಟ್ರೀಯಮಟ್ಟದ ಪ್ಯಾರಾ ಸ್ವೀಮಿಂಗ್‌ಗೆ ಆಯ್ಕೆಯಾಗಿ ಕಾಲೇಜಿನ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹಾರ್ದಿಕವಾಗಿ ಅಭಿನಂದಿಸಿ ಮಾರ್ಗದರ್ಶಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ಉಪಸ್ಥಿತರಿದ್ದರು.