ಕೊಪ್ಪಳ 01: ಕಾಮರ್ಿಕರಿಗೆ ಸಕರ್ಾರದ ವಿವಿಧ ಸೌಲಭ್ಯಗಳಿದ್ದು, ಅವುಗಳನ್ನು ಪಡೆದುಕೊಳ್ಳುವಂತೆ ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಹೆಚ್. ವಿಶ್ವನಾಥರೆಡ್ಡಿ ಅವರು ಕಾಮರ್ಿಕ ಬಂದುಗಳಿಗೆ ಕರೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾಮರ್ಿಕ ಇಲಾಖೆ, ಕನರ್ಾಟಕ ರಾಜ್ಯ ಅಸಂಘಟಿತ ಕಾಮರ್ಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕನರ್ಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗುರುವಾರದಂದು ಆಯೋಜಿಸಲಾದ "ಕಾಮರ್ಿಕ ಸಮ್ಮಾನ ಪ್ರಶಸ್ತಿ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೆ ಕಾಮರ್ಿಕರು ತಾವು ಮಾಡುವ ಕೇಲಸದಲ್ಲಿ ದೇವರನ್ನು ಕಾಣಬೇಕು. ಅಂದಾಗ ಮಾತ್ರ ಆ ಕೆಲಸದಿಂದ ನಮಗೆ ಪುರಸ್ಕಾರ ಸನ್ಮಾನಗಳು ತನ್ನಷ್ಟಕ್ಕೆ ತಾವೇ ಹುಡಿಕಿಕೊಂಡು ಬರುತ್ತವೆ. ಎಷ್ಟು ಶ್ರಮವಹಿಸಿ ಕೆಲಸ ಮಾಡುತ್ತೆವೆಯೋ ಅಷ್ಟು ಪ್ರತಿಫಲ ಸಿಗುವುದರಲ್ಲಿ ಸಂಶಯವೇ ಇಲ್ಲಾ. ಆದ್ದರಿಂದ ಕಾಮರ್ಿಕರಿಗೆ ಕೇಂದ್ರ ಹಾಗೂ ರಾಜ್ಯ ಸಕರ್ಾರವು ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಹಲವಾರು ಕ್ಷೇತ್ರದಲ್ಲಿ ಕಾಮರ್ಿಕರು ತಮ್ಮ ದಿನನಿತ್ಯದ ಜೀವನೊಪಾಯಕ್ಕೆ ತಮ್ಮ ಶ್ರಮ ವಹಿಸಿ ಕೆಲಸದ ಜೊತೆಗೆ ಜೀವನ ಮಾಡುತ್ತಿದ್ದಾರೆ. ಅಂತವಹ ಕಾಮರ್ಿಕರನ್ನು ಗುರುತಿಸಿ ಅವರಿಗೆ ಸಕರ್ಾರದಿಂದ ಕಾಮರ್ಿಕ ಸಮ್ಮಾನ ಪ್ರಶಸ್ತಿಗಳು ಹಾಗೂ ಗೌರವಧನ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದರಿಂದ ಕಾಮರ್ಿಕರ ವೃತ್ತಿಪರ ಕೆಲಸದಲ್ಲಿ ಇನ್ನು ಹೆಚ್ಚಿನ ಆಸಕ್ತಿ ತೊರಕಲಿದೆ. ಕಾಮರ್ಿಕರಿಗೆ ವಿವಾಹ, ಮನೆ ನೀಮರ್ಾಣಕ್ಕೆ ಸಹಾಯಧನ, ಮಕ್ಕಳ ವಿದ್ಯಾಭಾಸಕ್ಕೆ ಸಹಾಯ, ಮಕ್ಕಳ ವಿವಾಹಕ್ಕೆ ಧನ ಸಹಾಯ ಹೀಗೆ ಹಲವಾರು ಸೌಲಭ್ಯಗಳನ್ನು ನೀಡಿ ಅವರಿಗೆ ಜೀವನ ಮಾಡಲು ಸಕರ್ಾರವು ನೆರವಾಗಿ ನಿಂತಿದೆ. ಅಲ್ಲದೇ ವಿವಿದ ರೀತಿಯ ಸೌಲಭ್ಯಗಳನ್ನು ಜಾರಿಗೆ ಮಾಡಿದ್ದು, ಕಾಮರ್ಿಕರು ಅವುಗಳ ಸದುಯೊಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಹೆಚ್. ವಿಶ್ವನಾಥರೆಡ್ಡಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಸಕರ್ಾರದ ಸಂಸದೀಯ ಕಾರ್ಯದಶರ್ಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಬಸವಣ್ಣ ನವರ ಕಾಯಕವೇ ಕೈಲಾಸ ಎಂಬ ಮಾತಿನಂತೆ ನಾವು ಮಾಡುವ ಕೇಲಸದಲ್ಲಿ ಕೈಲಾಸವನ್ನು ಕಾಣಬೇಕು. ಅಂದಾಗ ಮಾತ್ರ ಆ ಕೇಲಸಕ್ಕೆ ಯಶಸ್ಸು ಬರುತ್ತದೆ. ಅಂಬೇಡ್ಕರ್ ಸಹಾಯ ಅಸ್ತ ನೊಂದಣಿ ಪಲಾನುಭವಿಗಳಿಗೆ ಹಲವಾರು ಕ್ಷೇತ್ರದಲ್ಲಿ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದು, ಅಂತಹ ಕಾಮರ್ಿಕರಿಗೆ ರೂ. ಐದು ಲಕ್ಷ ಅನುಧಾನದಲ್ಲಿ ಮನೆಗಳ ನಿಮರ್ಾಣ ಹಾಗೆಯೇ ಕೆಲಸದ ಸಂದರ್ಭದಲ್ಲಿ ಅಕಾಲಿಕಾ ಮರಣ ಹೊಂದಿದ ಕಾಮರ್ಿಕರಿಗೆ ರೂ. ಐದು ಲಕ್ಷ ಪರಿಹಾರವನ್ನು ಸಕರ್ಾರದಿಂದ ವಿತಹರಿಸಲಾಗುತ್ತದೆ. ಇ.ಎಸ್.ಐ. ನೊಂದಣಿಯಾಗಿರುವ ಕಾಮರ್ಿಕರಿಗೆ ರೋಗರುಜಿನಿ ಸಂಭವಿಸಿದರೆ ಸಕರ್ಾರದಿಂದ ಉಚಿತ ಚಿಕ್ಸಿತ್ತೆಯನ್ನು ಸಹ ನೀಡಲಾಗುತ್ತದೆ. ಇಂದು ನಿಶಪಕ್ಷಪಾತ ಆಡಳಿತತವನ್ನು ಮಾಡುವುದರಿಂದ ಸಕರ್ಾರದಿಂದ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳು ಜಾರಿಗೆಗೊಳಿಸಲು ಸಾಧ್ಯವಾಗುತ್ತದೆ. ಹೀಗೆ ನಾವೇಲ್ಲರೂ ನಿಶಪಕ್ಷಪಾತವಾದ ಆಡಳಿತ ಮಾಡುವುದರಿಂದ ಜನರಿಗೆ ದೊರಕಬೇಕಾದ ಸೌವಲತ್ತುಗಳು ದೊರೆಯುತ್ತವೆ ಎಂದರು.
ಜಿಲ್ಲಾ ಕಾಮರ್ಿಕ ಅಧಿಕಾರಿ ಚಂದ್ರಶೇಖರ ಎನ್. ಐಲಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಕಾಮರ್ಿಕರನ್ನು ಗುರುತಿಸಿ ಅವರಿಗೆ ನೊಂದಣಿ ಕಾರ್ಡಗಳನ್ನು ನೀಡುತ್ತಿದ್ದು, ಅವರಿಗೆ ಹಲವಾರು ಸಕರ್ಾದಿಂದ ಬರುವ ಸಹಾಯಧನ ನೀಡುತ್ತಿದ್ದೆವೆ. ಹಾಗೆಯೇ ಕೇಂದ್ರ ಸಕರ್ಾರದ ಶ್ರಮ ಸಮ್ಮಾನ್ಧನ ಯೋಜನೆ 60 ವರ್ಷ ಪೂರೈಸಿದ ವ್ಯೆಕ್ತಿಗಳಿಗೆ ಪಿಂಚಣಿ ನೊಂದಣಿಯಲ್ಲಿ ಕೊಪ್ಪಳ ಜಿಲ್ಲೆಯು ರಾಜ್ಯದ ಎರಡನೇ ಸ್ಥಾನದಲ್ಲಿದೆ. ಇನ್ನು ಅನೇಕ ರೀತಿಯ ಯೋಜನೆಗಳ ಬಗ್ಗೆ ಇಲಾಖೆಯು ಕಾಮರ್ಿಕರಿಗೆ ಮಾಹಿತಿಯನ್ನು ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾ ಕಾಮರ್ಿಕ ನಿರೀಕ್ಷಕ ಹೊನ್ನಪ್ಪ, ಜಿಲ್ಲಾ ಬಾಲ ಕಾಮರ್ಿಕ ಯೋಜನಾ ನಿದರ್ೇಶಕ ಬಸವರಾಜ ಹಿರೇಗೌಡರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರು, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿ ಭಟ್ಟಿ ಕಾಮರ್ಿಕರು, ಸಾರಿಗೆ ಕಾಮರ್ಿಕರು, ಹಮಾಲಿಗಳು, ಟೈಲರ್ಗಳು ಹಾಗೂ ಚಿಂದಿ ಆಯುವವರು, ಮೆಕ್ಯಾನಿಕ್ ಕಾಮರ್ಿಕರು, ಗೃಹ ಕೆಲಸದ ಕಾಮರ್ಿಕರು, ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಚಾಲಕರು ಹಾಗೂ ಅಸಂಘಟಿತ ವಲಯದ ಕಾಮರ್ಿಕ ಸಂಘದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಜಿಲ್ಲೆಯ ವಿವಿಧ ಕ್ಷೇತ್ರದ ಕಾಮರ್ಿಕರಿಗೆ "ಕಾಮರ್ಿಕ ಸಮ್ಮಾನ ಪ್ರಶಸ್ತಿ"ಯನ್ನು ನೀಡಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.