ಲೋಕದರ್ಶನ ವರದಿ
ಕೊಪ್ಪಳ 07: ಓಜನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ ಮಗು ಮತ್ತು ಕಾನೂನು ಕೇಂದ್ರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಕುರಿತಾಗಿ ಚುನಾಯಿತ ಪ್ರತಿ ನಿಧಿಗಳಿಗೆ, ವಿವಿಧ ಸಮಿತಿಯ ಜಾಗೃತಿ ಸಮಿತಿಯ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕತರ್ೆಯರಿಗೆ ತರಬೇತಿ ಕಾರ್ಯಗಾರ ಮಾಡಲಾಯಿತು ಅಭಿವೃದ್ಧಿ ಅಧಿಕಾರಿಗಳಾದ ಆದಯ್ಯ ಹೆರೂರು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಯಮನೂರಪ್ಪ ಹಲವಾಗಲಿ ಈ ಕಾರ್ಯಕ್ರಮದ ಕುರಿತು ತರಬೇತಿ ನೀಡಿ ಕಾಯ್ದೆ ಕಾನೂನುಗಳು ಕುರಿತಾಗಿ ಚುನಾಯಿತ ಪ್ರತಿನಿಧಿಗಳು ಅಥವಾ ಅಂಗನವಾಡಿ ಕಾರ್ಯಕತರ್ೆಯರು ಇರಬಹುದು ತಿಳಿದುಕೊಂಡಾಗ ಮಾತ್ರ ಪಾರದರ್ಶಕವಾಗಿ ಗುರಿ ಮುಟ್ಟಲು ಜನರಿಗೆ ಕಾಯಿದೆಯನ್ನು ತಲುಪಿಸಲು ಇದು ಸಾಧ್ಯ ನಿಮ್ಮ ಜವಾಬ್ದಾರಿಗಳು ಆಹಾರ ಭದ್ರತೆ ಕಾಯ್ದೆಯ ಮಾಹಿತಿಯನ್ನು ನೀವು ತೆಗೆದುಕೊಂಡು ಸಮುದಾಯಕ್ಕೆ ಹೇಗೆ ಮುಟ್ಟಿಸುತ್ತದೆ ಎಂಬುದನ್ನು ನಿಮ್ಮ ಜವಾಬ್ದಾರಿ ಇರಬೇಕಾಗುತ್ತದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಪ್ರತಿನಿಧಿಗಳಾದ ಸಿದ್ದಪ್ಪ ವಾಲ್ಮಿಕಿ, ಬಸವರಾಜ ಮೇಟಿ, ಬಸಲಿಂಗಪ್ಪ, ಬಸವರಾಜ ಎನ್ ಬಿ, ಇತರರು ಉಪಸ್ಥಿತರಿದ್ದರು.
ಶಂಕರ ಸೂರಳ್ ಇವರು ನಿರೂಪಿಸಿದರು, ಅಂಗನವಾಡಿ ಕಾರ್ಯಕತರ್ೆ ಮೋದಿನ್ ಬಿ ಇವರು ಸ್ವಾಗತಿಸಿದರು. ಶಿವಲಿಲಾ ವಂದಿಸಿದರು.