ಪರಿಸರ ನಾಶದಿಂದ ದೇಶಕ್ಕೆ ಅಪಾಯ ಕಾದಿದೆ: ಪಕ್ಕಿರೇಶ್ವರ ಸ್ವಾಮಿಗಳು

ಲೋಕದರ್ಶನ ವರದಿ

ಗದಗ 16: ಪರಿಸರ ನಾಶದಿಂದ ಇಂದು ಮಳೆಬೆಳೆ ಕಡಿಯಾಗುತ್ತಿರುವದರಿಂದ ನಾವೇಲ್ಲರೂ ಬರಗಾಲವನ್ನು ಎದುರಿಸುತ್ತಿದ್ದೆವೆ ಈ ಬಗ್ಗೆ ಪರಿಸರ ಜಾಗೃತಿ ಅವಶ್ಯವಾಗಿದೆ ಎಂದು ಮಲ್ಲಸಮುದ್ರಗಿರಿ ಓಂಕಾರೇಶ್ವರ ಮಠದ ಫಕ್ಕಿರೇಶ್ವರ ಮಹಾಸ್ವಾಮಿಗಳು ಹೇಳಿದರು. 

ಎಸ್.ಎಂಕೃಷ್ಣಾ ನಗರದಲ್ಲಿರುವ ಸಿದ್ದಾರ್ಥ/ಜೈ ಹನುಮಾನ ಸಮಾಜದ ವಿವಿದೋದ್ದೇಶಗಳ ಸೇವಾ ಸಂಘ ವತಿಯಿಂದ 5 ನೇ ವಾಷರ್ಿಕೋತ್ಸವ ಹಾಗೂ ಮಳೆಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಪಡೆಸುತ್ತಿದ್ದಾನೆ. ಇದು ಹೀಗೆ ಮುಂದುವರೆದರೆ ಮನುಕುಲದ ಅವನತಿಗೆ ಕಾರಣವಾಗಲಿದೆ ಅದ್ದರಿಂದ ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸ ಮುಂದಿನ ಭವಿಷ್ಯಕ್ಕೆ ಪರಿಸರವನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಸಂಘ-ಸಂಸ್ಥೆಗಳು ಇಂತಹ ಕಾರ್ಯಕ್ರಮಗಳು ಹಮ್ಮಿಕೊಂಡು ಪರಿಸರ ಕುರಿತು ಜಾಗೃತಿ ಮೂಡಿಸಬೇಕಾಗಿದೆ  ಎಂದು ಹೇಳಿದರು.  

ಪ್ರೋ. ಶಿವಾನಂದ ಗೋಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಗೊಂಡಸ್ವಾಮಿ ಕಳಕಣ್ಣವರ ಅಧ್ಯಕ್ಷತೆವಹಿಸಿದ್ದರು. ರಂಗಪ್ಪ ಹುಯಿಲಗೋಳ, ಮುತ್ತು ಜಡಿ, ತೋಟಯ್ಯ ಹಿರೇಮಠ, ಮಲ್ಲೇಶ ಬಿಂಗಿ, ಬಸವರಾಜ ಕಡೇಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪರಶುರಾಮ ಕಳಕಣ್ಣವರ ಪ್ರಾಥರ್ಿಸಿದರು. ಧಮರ್ೇಂದ್ರ ಇಟಗಿ ಕಾರ್ಯಕ್ರಮ ನಿರೂಪಿಸಿದರು.