ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆಗೆ ಸಹಕರಿಸಿ: ದೇಸಾಯಿ

ಕೊಪ್ಪಳ 27: ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆಗಾಗಿ ಸಹಕರಿಸುವಂತೆ ಕೊಪ್ಪಳ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ ಅವರು ಜಿಲ್ಲೆಯ ಎಲ್ಲಾ ಸೆಕ್ಟರ್ ಅಧಿಕಾರಿಗಳಿಗೆ ಕರೆ ನೀಡಿದರು. 

ಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಸೆಕ್ಟರ್ ಅಧಿಕಾರಿಗಳ ಕರ್ತವ್ಯ, ಜವಾಬ್ದಾರಿಗಳ ಕುರಿತು ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಬುಧವಾರದಂದು ಆಯೋಜಿಸಲಾದ ತರಬೇತಿ ಕಾಯರ್ಾಗಾರದಲ್ಲಿ ಅವರು ಮಾತನಾಡಿದರು.  

ಸೆಕ್ಟರ್ ಅಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ 10 ರಿಂದ 12 ಮತಗಟ್ಟೆಗಳ ಜವಾಬ್ದಾರಿಯನ್ನು ಹೊಂದಿರುತ್ತಾರೆ.  ರಾಜ್ಯ ಮತ್ತು ಕೇಂದ್ರದ ಕೆಲವು ಇಲಾಖೆಗಳ ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು "ಸೆಕ್ಟರ್ ಅಧಿಕಾರಿ" ಎಂದು ಅವರಿಗೆ ನೇಮಕ ಮಾಡುತ್ತಾರೆ.  ಮತಗಟ್ಟೆಗಳ ಉಸ್ತುವಾರಿ, ಭೀತಿ-ತಡೆ ನಕಾಶೆ ತಯಾರಿ, ಚುನಾವಣೆ ನಿರ್ವಹಣೆ, ಮತಗಟ್ಟೆಗಳು, ಮತಗಟ್ಟೆ ಅಧಿಕಾರಿಗಳು, ಮಾಗರ್ಾಧಿಕಾರಿಗಳು, ಬಿ.ಎಲ್.ಓ., ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸುವುದು ಮತ್ತು ಜಿಲ್ಲಾಧಿಕಾರಿಗಳಿಗೆ ಕಾಲಕಾಲಕ್ಕೆ ವರದಿಯನ್ನು ನೀಡುವುದು ಸೆಕ್ಟರ್ ಅಧಿಕಾರಿಗಳ ಪ್ರಮುಖ ಕರ್ತವ್ಯವಾಗಿದೆ.  ಚುನಾವಣೆಯ ನಿರ್ವಹಣೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ಮಾದರಿ ನೀತಿ ಸಂಹಿತೆ, ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆ, ಎಲ್ಲಾ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸುವುದು ಮತ್ತು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಎಂಬ ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ.      ಚುನಾವಣಾ ಪೂರ್ವ ಕರ್ತವ್ಯಗಳು: ಸೆಕ್ಟರ್ ಅಧಿಕಾರಿಗಳು ಚುನಾವಣಾ ಪೂರ್ವ ಮತಗಟ್ಟೆಗಳು ಎಲ್ಲೆಲ್ಲಿವೆ ಮತ್ತು ಯಾವ ಮಾರ್ಗದಿಂದ ಕ್ರಮವಾಗಿ ಕ್ಷಿಪ್ರವಾಗಿ ಸಂಚರಿಸಬಹುದು ಎಂಬುವುದನ್ನು ಗುರುತಿಸಬೇಕು.  ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳಿರುವುದನ್ನು ಗಮನಿಸಿ ವರದಿ ಸಲ್ಲಿಸಬೇಕು.  ಮತಗಟ್ಟೆ 200 ಮೀಟರ್ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಕಛೇರಿಗಳಿಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.  ಮಾದರಿ ನೀತಿ ಸಂಹಿತೆ ಪಾಲನೆ ಬಗ್ಗೆ ಗಮನಹರಿಸಿ, ಉಲ್ಲಂಘನೆಯಾದರೆ ತಕ್ಷಣ ಈ ಕುರಿತು ವರದಿಯನ್ನು ಮಾಡಬೇಕು.  ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು.  ಅಲ್ಲದೇ ಮತಯಂತ್ರಗಳ ಕಾರ್ಯ ವಿಧಾನದ ಬಗ್ಗೆಯೂ ಸಹ ಮಾಹಿತಿ ನೀಡಬೇಕು.  ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. 

ಚುನಾವಣಾ ಮುನ್ನಾ ದಿನದ ಜವಾಬ್ದಾರಿಗಳು: ಚುನಾವಣಾ ಮುನ್ನಾ ದಿನದಂದು ಸೆಕ್ಟರ್ ಅಧಿಕಾರಿಗಳು ತಮಗೆ ಹಂಚಿಕೆಯಾದ ಮಾರ್ಗದ ಅಧಿಕಾರಿಗಳು, ಸಾಮಾಗ್ರಿ ಮತಯಂತ್ರಗಳು ಲಭ್ಯ ಇರುವುದನ್ನು ಖಾತ್ರಿ ಮಾಡಿಕೊಳ್ಳಬೇಕು.  ಪೊಲೀಸ್ ಬಂದೋಬಸ್ತ್ ಇರುವುದನ್ನು ಸಹ ಖಾತ್ರಿ ಮಾಡಿಕೊಳ್ಳಬೇಕು.  ಮಾದರಿ ಸದಾಚಾರಿ ಸಂಹಿತೆ ಜಾರಿಯಲ್ಲಿರಬೇಕು.  ಕಾನೂನು ಉಲ್ಲಂಘನೆಯಾಗಬಾರದು.  ಎಲ್ಲಾ ಮತಗಟ್ಟೆಗಳ 100 ಮತ್ತು 200 ಮೀಟರ್ ವ್ಯಾಪ್ತಿಯ ಮಾಕರ್್ ಮಾಡಿರುವುದನ್ನು ಗಮನಿಸಬೇಕು.  

ಮತದಾನ ದಿನದ ಜವಾಬ್ದಾರಿಗಳು: ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳು ಮಾದರಿ ಸದಾಚಾರ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು.  ಅಣಕು ಮತದಾನ ನಡೆಯುವಾಗ ಯಾವುದಾದರೂ ಒಂದು ಮತಗಟ್ಟೆಯಲ್ಲಿ ಹಾಜರಿರಬೇಕು.  ನಿಮ್ಮ ವ್ಯಾಪ್ತಿಯಲ್ಲಿನ ಯಾವುದೇ ಮತಗಟ್ಟೆಯಲ್ಲಿ ತೊಂದರೆ ಆದರೆ ತಕ್ಷಣ ಪರಿಹರಿಸಬೇಕು.  ಅದಕ್ಕಾಗಿ ಸಂಬಂಧಪಟ್ಟವರಿಂದ ಸಲಹೆ ಸೂಚನೆ, ಮಾರ್ಗದರ್ಶನ ಪಡೆಯಿರಿ.  ಹೆಚ್ಚುವರಿ ಮತಯಂತ್ರಗಳು, ಸಿಬ್ಬಂದಿ ಮತ್ತು ಮತದಾನ ಸಾಮಾಗ್ರಿ ಜೊತೆಗಿರಲಿ.  ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ವಿತರಿಸಿ.  ಮತಯಂತ್ರ ಬದಲಿಸುವುದಕ್ಕಾಗಿ ಗರಿಷ್ಟ 90 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬೇಡಿ.  ಪೋಲಿಂಗ್ ಎಜೆಂಟರ್ ಹಾಜರಿ ಅಥವಾ ಗೈರುಹಾಜರಿ ಮಾಹಿತಿ ಸಂಗ್ರಹಿಸಬೇಕು.  ಪೋಲಿಂಗ್ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯಗಳ ಬಗ್ಗೆ ಜ್ಞಾನವಿರುವುದನ್ನು ಗಮನಿಸಿ ಸೂಕ್ತ ಸಲಹೆ ಸೂಚನೆ ನೀಡಿ.  ಎಲ್ಲಾ ಚಟುವಟಿಕೆಗಳು ನಿಯಮಾನುಸಾರ ಮತದಾನದ ಕೊನೆಗೆ 17ಎ ಮತದಾರರ ರಜಿಸ್ಟರ್ಗಳನ್ನು ಆಯೋಗದ ಮಾರ್ಗಸೂಚಿಗಳನ್ವಯ ಮುಕ್ತಾಯಗೊಳಿಸಿರುವುದರ ಬಗ್ಗೆ ನಿಗಾ ಇರಲಿ.

ಮತದಾನಕ್ಕೆ ಏಳು ದಿನಗಳ ಮೊದಲೇ ಸೆಕ್ಟರ್ ಅಧಿಕಾರಿಗೆ ವಲಯ ಮ್ಯಾಜಿಸ್ಟ್ರೀಯಲ್ (ನ್ಯಾಯಾಧಿಕಾರ) ಅಧಿಕಾರಗಳನ್ನು ನೀಡಲಾಗುತ್ತದೆ.  ಸಿ.ಆರ್.ಪಿ.ಸಿ. ಅನುಚ್ಛೇದ 144ರ ಪ್ರಕಾರ ತುತರ್ು ಸನ್ನಿವೇಶಗಳುಂಟಾದರೆ ಪರಿಸ್ಥಿತಿಯನ್ನು ಹತೋಟಿಗೆ ತರಲು ತಕ್ಷಣ ಆದೇಶಗಳನ್ನು ಹೊರಡಿಸಬಹುದು ಮತ್ತು ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ ಅವರು ಜಿಲ್ಲೆಯ ಎಲ್ಲಾ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು.  

ತರಬೇತಿ ಕಾಯರ್ಾಗಾರದಲ್ಲಿ ಸೆಕ್ಟರ್ ಅಧಿಕಾರಿಗಳಾಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರರು ಮತ್ತಿತರರು ಉಪಸ್ಥಿತರಿದ್ದರು.  ಮತ ಖಾತ್ರಿಗಾಗಿ ಬಳಕೆ ಮಾಡಲಾದ ಮತದಾನ ಖಾತ್ರಿಯಂತ್ರ ವಿ.ವಿ.ಪ್ಯಾಟ್ ಕಾರ್ಯ ನಿರ್ವಹಣೆ ಕುರಿತು ಮಸ್ಟರ್ ಟ್ರೈನರ್ ಪ್ರವೀಣ ಹಾಗೂ ಗಿರೀಶ್ ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು.