ಔರಾದಕರ ಸಮಿತಿ ಶಿಫಾರಸ್ಸು ಜಾರಿ ಮಾಡಲು ಸಕರ್ಾರ ಬದ್ಧವಾಗಿದೆ: ಪಾಟೀಲ

ಧಾರವಾಡ05: ನೂತನ ವೇತನ ಶ್ರೇಣಿ ಸೇರಿದಂತೆ ಹಲವಾರು ಸುಧಾರಣಾ ಕ್ರಮಗಳನ್ನು ಶಿಫಾರಸ್ಸು ಮಾಡಿರುವ ಔರಾದಕರ ಸಮಿತಿ ವರದಿಯನ್ನು ಜಾರಿಮಾಡಲು ರಾಜ್ಯ ಸಕರ್ಾರ ಬದ್ಧವಾಗಿದೆ ಎಂದು ಗೃಹಸಚಿವ ಎಂ.ಬಿ. ಪಾಟೀಲ ಹೇಳಿದರು.

ಅವರು ಇಂದು ಬೆಳಿಗ್ಗೆ ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ ಜರುಗಿದ 4ನೇ ತಂಡದ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪೊಲೀಸ್ ತರಬೇತಿ ಶಾಲೆಯು ಪೊಲೀಸ್ ಇಲಾಖೆಯ ಹೃದಯವಿದ್ದಂತೆ. ಇಲ್ಲಿ ನೀಡುವ ಶಾರೀರಿಕ, ಮಾನಸಿಕ ಮತ್ತು ನೈತಿಕ ಶಿಕ್ಷಣ ಬಹು ಮುಖ್ಯವಾದುದು. ಇಲಾಖೆಯಲ್ಲಿ ಬದಲಾವಣೆ ತರುವುದಾದರೆ ಅದು ತರಬೇತಿ ಶಾಲೆಯಿಂದ ಆರಂಭವಾಬೇಕು. ಆದ್ದರಿಂದ ಪೊಲೀಸ್ ತರಬೇತಿ ಶಾಲೆಗಳ ಅಭಿವೃದ್ಧಿ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 

ವಿಶ್ವದ ಇತರ ರಾಷ್ಟ್ರಗಳಿಗೆ ಹೊಲಿಸಿದರೆ ನಮ್ಮ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ಮತ್ತು ಗೌರವವಿದೆ. ಇತರ ರಾಜ್ಯ, ರಾಷ್ಟ್ರಗಳ ಪೊಲೀಸ್ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿರುವ ನೂತನ ಕ್ರಮಗಳನ್ನು ನಮ್ಮ ವ್ಯವಸ್ಥೆಯಲ್ಲಿ ಅಳವಡಿಸಲು ಮತ್ತು ಸೈಬರ್ ಕ್ರೈಂ, ಪೋರೆನಿಕ್ಸ್ದಂತ ತಂತ್ರಜ್ಞಾನ ಆಧಾರಿಕ ಶಾಖೆಗಳನ್ನು ಉತ್ತಮಪಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು.

ನಿಷ್ಪಕ್ಷಪಾತವಾದ ಸೇವೆ ಸಲ್ಲಿಸುವ ಪ್ರತಿಜ್ಞೆ ಮಾಡಿರುವ ಪ್ರತಿಯೊಬ್ಬ ಪೊಲೀಸ್ ಪೇದೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಸ್ತಕ್ಷೇಪ, ತಾರತಮ್ಯವಿಲ್ಲದೆ ನಿಷ್ಪಕ್ಷಪಾತವಾದ ಸೇವೆಗೆ ಆಧ್ಯತೆ ನೀಡಬೇಕೆಂದು ಹೇಳಿದರು. 

   ಬೆಂಗಳೂರಿನಂತಹ ಬೃಹತ್ ನಗರ ಸುರಕ್ಷಿತ ನಗರವಾಗಿರಲು ಇಲಾಖೆಯ ಶ್ರಮ ಸಾಕಷ್ಟಿದೆ. ಪೊಲೀಸ್ ಇಲಾಖೆಯ ಕಟ್ಟಡ, ಕಚೇರಿ, ವಸತಿ-ಸಮುಚ್ಛಯ ಮತ್ತು ತರಬೇತಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಪೂರೈಸಲಾಗುತ್ತಿದೆ ಎಂದು ಗೃಹಸಚಿವ ಎಂ.ಬಿ. ಪಾಟೀಲ ಹೇಳಿದರು.

     ಪೊಲೀಸ್ ಇಲಾಖೆ ತರಬೇತಿ ವಿಭಾಗದ ಮಹಾನಿದರ್ೆಶಕರಾದ ಪಿ.ಕೆ. ಗಗರ್್, ಉತ್ತರ ವಲಯ ಐ.ಜಿ.ಪಿ. ಆರ್.ರೇವಣ್ಣ, ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಉಪಸ್ಥಿತರಿದ್ದರು.