ಕೊಪ್ಪಳ 02: ಇತ್ತೀಚಿಗೆ ಅಂಚೆ ಕಛೇರಿಯಲ್ಲಿ ಬ್ಯಾಂಕ್ ಸೇವೆ, ವಿಮಾ ಸೇವೆ, ಆಧಾರ ನೋಂದಣಿ, ಪಾಸ್ಪೋರ್ಟ ಸೇವಾ ಕೇಂದ್ರ, ವಿವಾಹ ನೋಂದಣಿ ಮುಂತಾದ ಸೇವೆಗಳು ಪ್ರಾರಂಭಗೊಂಡಿರುವುದರಿಂದ ಕೊಪ್ಪಳದ ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಕೊರತೆ ಕಂಡು ಬರುತ್ತಿದೆ. ಹೀಗಾಗಿ ಕೊಪ್ಪಳದ ಪ್ರಧಾನ ಅಂಚೆ ಕಛೇರಿಯಲ್ಲಿ ಕೊಠಡಿಗಳ ಮಂಜೂರಿಗಾಗಿ ಸಂಸದೀಯ ಕಾರ್ಯದರ್ಶಿ ಗಳು ಹಾಗೂ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಅಂಚೆ ನೌಕರರ ಕಾರ್ಯದರ್ಶಿ ಯಾದ ಜಿ.ಎನ್.ಹಳ್ಳಿ, ನಿವೃತ್ತ ವಾತರ್ಾಧಿಕಾರಿಯಾದ ಬಸವರಾಜ ಆಕಳವಾಡಿ, ನಿವೃತ್ತಿ ಉದ್ಯೋಗ ವಿನಿಮಯ ಅಧಿಕಾರಿಯಾದ ಬಿ.ಎಫ್.ಬೀರನಾಯ್ಕರ, ಕೊಪ್ಪಳದ ಪ್ರಧಾನ ಅಂಚೆ ಕಛೇರಿಯ ಅಂಚೆ ಪಾಲಕರಾದ ಬಿ.ವಿ.ಅಂಗಡಿ, ಸಿಬ್ಬಂದಿಗಳಾದ ಹನುಮಂತರಾವ್, ಸುಭಾನ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.