ಸರಕಾರದ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಅಕ್ಕಿ ವಿತರಣೆ

Rice distribution to the poor under the government's Annabhagya scheme


        ಸರಕಾರದ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಅಕ್ಕಿ ವಿತರಣೆ 

ಹಾವೇರಿ  24: ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮಾಡಿದ್ದರ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಕಾರಿಗಳು ದಾಳಿ ಮಾಡಿದಾಗ ಅದರ ವರದಿಗಾಗಿ ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ಕ್ಯಾಮರಾಮೆನ್ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಹಾಗೂ ತಪ್ಪಿತಸ್ಥ ಆರೋಪಿತನ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.  

        ಸರಕಾರದ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸುವ ಅಕ್ಕಿಯನ್ನು ಮೂಟೆಗಟ್ಟಲೇ ಅಕ್ರಮ ಅಕ್ಕಿ ದಂಧೆಕೋರರು ಜಿಲ್ಲೆಯ ಹಲವೆಡೆ ಕಡಿಮೆ ಬೆಲೆಗೆ ಖರೀದಿಸಿ ಹಾವೇರಿಯ ಅಕ್ಕಿಪೇಟೆಯಲ್ಲಿನ ಬಾಡಿಗೆ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದರು.ಅಕ್ರಮ ದಂಧೆಕೋರರು ಅಕ್ಕಿ ದಾಸ್ತಾನು ಮಾಡಿದ್ದರ ಬಗ್ಗೆ ಖಚಿತ ಮಾಹಿತಿ ತಿಳಿದುಕೊಂಡು ಆಹಾರ ಇಲಾಖೆ ಅಕಾರಿಗಳು ಕಳೆದ ಭಾನುವಾರ ದಾಳಿ ಮಾಡಿದ್ದರು.ಇದರ ವರದಿಗೆಂದು ತೆರಳಿದ್ದ ಮಾಧ್ಯಮದವರ ಮೇಲೆ ಅಕ್ರಮ ದಂಧೆಕೋರರು ಹಲ್ಲೆ ಮಾಡಿದ್ದಾರೆ.ಈ ಹಿನ್ನೆಲೆ ಹಲ್ಲೆಗೈದ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಸೋಮವಾರ ಜಿಲ್ಲಾ ಕಾ.ನಿ.ಪ ಸಂಘದ ಪದಾಧಿಕಾರಿಗಳು ಎಸ್‌ಪಿ ಅಂಶುಕುಮಾರ,ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರಗೆ ಮನವಿ ಸಲ್ಲಿಸಿದರು. 

       ಈ ಸಂದರ್ಭದಲ್ಲಿ ಕಾ.ನಿ.ಪ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಧ್ಯಕ್ಷ ನಾಗರಾಜ ಕುರವತ್ತೇರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರ,ಪತ್ರಕರ್ತರಾದ ಬಸವರಾಜ ಮರಳಿಹಳ್ಳಿ,ಕೇಶವಮೂರ್ತಿ ವಿ.ಬಿ,ಅಣ್ಣಪ್ಪ ಬಾರ್ಕಿ,ಫಕ್ಕೀರಯ್ಯ ಗಣಾಚಾರಿ,ಪವನಕುಮಾರ ಮುಳಗುಂದಮಠ,ಮಾರುತಿ ಬಿ.ಎಂ.,ಶಿವಕುಮಾರ ಹುಬ್ಬಳ್ಳಿ,ಕಿರಣ ಮಾಸಣಗಿ,ರಾಜೇಂದ್ರ ರಿತ್ತಿ, ವಿರೇಶ ಬಾರ್ಕಿ,ಪ್ರಶಾಂತ ಮರೆಮ್ಮನವರ,ಶಿವು ಮಡಿವಾಳರ,ಮಂಜುನಾಥ ದಾಸಣ್ಣನವರ,ಪರಶುರಾಮ ಡೂಗನವರ,ವಿನಾಯಕ ಹುದ್ದಾರ,ಎಂ.ಡಿ ಹಣಗಿ,ನಿಂಗಪ್ಪ ಆರೇರ,ರವಿ ಹೂಗಾರ,ಫಕ್ಕೀರಗೌಡ ಪಾಟೀಲ,ನಾಗರಾಜ ಮೈದೂರ,ಶಂಕರ ಕೊಪ್ಪದ,ರಾಜು ಗಾಳೇರ,ನಿಂಗಪ್ಪ ಕಡಪಟ್ಟಿ,ಫಕ್ಕೀರಸ್ವಾಮಿ ಮಟ್ಟೆಣ್ಣನವರ,ವಿರೇಶ ಹ್ಯಾಡ್ಲ,ಮದರಸಾಬ ಮಂಜಲಾಪುರ ಸೇರಿದಂತೆ ಅನೇಕರು ಹಾಜರಿದ್ದರು.