ಲೋಕದರ್ಶನ ವರದಿ
ಕೊಪ್ಪಳ 07: ನಗರದ ಡಿಡ್ಡಿಕೇರಿ ಓಣಿಯ ಮುನ್ಸಿಪಲ್ ವಾರ್ಡ ನಂ. 7ರಲ್ಲಿ ಈ ಹಿಂದೆ 2004-5ನೇ ಸಾಲಿನಲ್ಲಿ ಸಂಸತ್ ಸದಸ್ಯರ ಅನುದಾನದಲ್ಲಿ ಮಹಿಳಾ ಶೌಚಾಲಯ ನಿಮರ್ಿತಗೊಂಡಿದ್ದು, ಶೌಚಾಲಯ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುತ್ತದೆ. ಶೌಚಾಲಯಕ್ಕೆ ಹೋಗುವ ರಸ್ತೆಯ ಶೌಚಾಲಯದಲ್ಲಿ ಲಭ್ಯವಿಲ್ಲದ ನೀರಿನ ಮತ್ತು ಮೇಲ್ವಿಚಾರಣೆಯಿಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ಶೌಚಾಲಯ ಉಪಯೋಗದಲ್ಲಿರುವುದರಿಂದ ಹೊರ ಹೋಗುವ ನೀರಿನ ಮಾರ್ಗ ವ್ಯವಸ್ಥೆ ಇಲ್ಲದಿರುವ ಬಗ್ಗೆ ಅಲ್ಲೆ ಅಕ್ಕ ಪಕ್ಕದಲ್ಲಿರುವ ವಾಸದ ಮನೆಗಳಿಗೆ ದನಗಳ ದೊಡ್ಡಿಗಳಿಗೆ ನೀರು ಹೋಗುತ್ತಿದ್ದು , ಅಕ್ಕ ಪಕ್ಕದ ನಿವಾಸಿಗಳ ಮಕ್ಕಳ ಅನಾರೋಗ್ಯದ ಕಡೆಗೆ ಪರಿಣಾಮ ಬೀರುತ್ತಿದೆ.
ಶೌಚಾಲಯದ ದುರಸ್ತಿ ಬಗ್ಗೆ ಇನ್ನುವರೆಗೆ ನಗರಸಭೆಯ ಯಾವ ಅನುದಾನದಲ್ಲೂ ಟೆಂಡರ್ ಬಗ್ಗೆ ಅಂದಾಜು ಪತ್ರಿಕೆ ತಯಾರಿಸಿರುವುದಿಲ್ಲ. ಆದ ಕಾರಣ ಶೌಚಾಲಯದ ನೀರಿನ ವ್ಯವಸ್ಥೆ, ಮಹಿಳೆಯರಿಗೆ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ರಸ್ತೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಕನರ್ಾಟಕ ನವ ನಿಮರ್ಾಣ ಸೇನೆ ಜಿಲ್ಲಾ ಘಟಕ ಹಾಗೂ ವಾಡರ್ಿನ ನಾಗರಿಕರು ಒತ್ತಾಯಿಸಿ ಮಾನ್ಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಪೂರಖಾನ ಅಹ್ಮದ, ತಾಲೂಕ ಅಧ್ಯಕ್ಷ ರವಿ ಡೊಳ್ಳಿನ, ಸಂಚಾಲಕ ವಿಜಯಕುಮಾರ ಕವಲೂರ, ವಾಡರ್ಿನ ನಾಗರಿಕರಾದ ಜಿಲಾನಸಾಬ ನಿಶಾನಿ, ಜಾಫರಸಾಬ ಕುರು, ವಾಹೀದ್ ಸೊಂಪೂರ, ದಾದಾಪೀರ ಕುದರಿಮೋತಿ, ಅಬ್ದುಲ್ ಕರೀಮ, ತೌಸೀಪ್ ನಿಶಾನಿ, ಶಂಶುದ್ಧಿನ್, ಶಂಕ್ರಪ್ಪ ಕುರಿ ಅಬ್ದುಲ ರಹೆಮಾನ ಸೇರಿದಂತೆ ಇತರರು ಉಪಸ್ಥಿತರಿದ್ದರು.