ರಾಣೆಬೆನ್ನೂರು ಶಾರದಾ ನೃತ್ಯಾಲಯಕ್ಕೆ ಬೆಳ್ಳಿ ಹಬ್ಬದ ಸಂಭ್ರಮ ಶಿಕ್ಷಣ ಮತ್ತು ಸಂಸ್ಕೃತಿ ಕಲೆಗಳಿಂದ ಮಕ್ಕಳ ವಿಕಾಸತೆ ಸಾಧ್ಯ - ಕೆ.ಜಿ. ಕುಲಕರ್ಣಿ

Ranebennur Sarada Nrityalaya celebrates Silver Festival Children's development is possible through

ರಾಣೆಬೆನ್ನೂರು ಶಾರದಾ ನೃತ್ಯಾಲಯಕ್ಕೆ ಬೆಳ್ಳಿ ಹಬ್ಬದ ಸಂಭ್ರಮ ಶಿಕ್ಷಣ ಮತ್ತು ಸಂಸ್ಕೃತಿ ಕಲೆಗಳಿಂದ ಮಕ್ಕಳ ವಿಕಾಸತೆ ಸಾಧ್ಯ - ಕೆ.ಜಿ. ಕುಲಕರ್ಣಿ 

ರಾಣೇಬೆನ್ನೂರು 04: ಮಾ 4ಬದುಕಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ಗೌರವವನ್ನು ತಂದುಕೊಡಬಲ್ಲ ಕಲೆಗಳು ನಮ್ಮ ಬದುಕಿನಲ್ಲಿ ಬೆರೆತಾಗ ಮಾತ್ರ ಸಂಸ್ಕೃತಿ ಮತ್ತು ಸಂಸ್ಕಾರ ಹೆಚ್ಚಾಗಲು ಸಾಧ್ಯವಾಗುವುದು ಎಂದು ಹಂಸಭಾವಿಯ ನಾಟ್ಯಾಚಾರ್ಯ, ನೃತ್ಯ ವಿದ್ವಾನ್ ಕೆ.ಜಿ. ಕುಲಕರ್ಣಿ ಹೇಳಿದರು. ಅವರು ಇಲ್ಲಿನ ಚರ್ಚ್‌ ರಸ್ತೆಯ ಎಸ್‌. ಜೆ. ಎಂ. ವ್ಹಿ. ಮಹಿಳಾ ಕಾಲೇಜು ಆವರಣದಲ್ಲಿ ಶ್ರೀ ಶಾರದಾ ನೃತ್ಯಾಲಯದ 25ನೇವರ್ಷದ ಬೆಳ್ಳಿ ಹಬ್ಬ ಸಂಭ್ರಮ  ಉದ್ಘಾಟಿಸಿ ಮಾತನಾಡಿದರು.ಇಂದಿನ ಆಧುನಿಕ ಬದುಕಿನ ಪಾಶ್ಚಾತ್ಯ  ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ಪರಂಪರೆಯ, ನಿಜ ಮತ್ತು ನೈಜ  ಸಂಸ್ಕೃತಿಯ ಸಂಗೀತ, ನೃತ್ಯ, ಶಿಲ್ಪಕಲೆ, ನಾಟ್ಯ, ಚಿತ್ರ, ವಾಸ್ತು ಶಿಲ್ಪ, ಸಾಹಿತ್ಯ ಪೌರಾಣಿಕ, ಸಾಮಾಜಿಕ ನಾಟಕಗಳು ನೇಪಥಕ್ಕೆ ಸರಿಯುವಂತಾಗಿದೆ ಎಂದು ವಿಷಾದಿಸಿದರು. ವಿದ್ಯಾರ್ಥಿಗಳ ಬದುಕು ಬರಡಾಗಬಾರದು ಅದಕ್ಕಾಗಿ ಪಾಟಗಳ ಜೊತೆಗೆ, ಸಮಗ್ರ ಸಂಸ್ಕೃತಿ ಬಿಂಬಿತ ಪಟ್ಟೇತರ ಚಟುವಟಿಕೆಗಳು ಅಳವಡಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದ್ದು, ಪಾಲಕರು ಅತ್ತ ಕಡೆ ಗಮನಹರಿಸಿ ಸಂಸ್ಕಾರವಂತರನ್ನಾಗಿ ಮಾಡಬೇಕು  ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಹಾಯಕ ನಿರ್ದೇಶಕ  ಆರ್‌. ವಿ. ಚಿನ್ನಿಕಟ್ಟಿ ಅವರು ಮಾತನಾಡಿ, ಕಲೆ ಎಲ್ಲರಿಗೂ ಒರಿಯುವುದಿಲ್ಲ, ಒಲಿದವರು ಸಹ  ಸಮರ್ಥವಾಗಿ ಬಳಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಕಲೆ, ಕಲಾ ಪೋಷಣೆಗಾಗಿಯೇ ಆರಾಧನೆಯಲ್ಲಿ ತೊಡಗಿಕೊಂಡಿರುವ ವಿದುಷಿ  ಪ್ರಿಯಾ ಸವಣೂರು ಅವರು ನಾಡಿನ ಹೆಮ್ಮೆ ಎಂದರು. ಕಲಾವಿದರ ಅನುಕೂಲತೆಗಾಗಿ ಅವರಲ್ಲಿರುವ ಕಲೆ ಪ್ರದರ್ಶನಕ್ಕಾಗಿ ಇಲಾಖೆಯು ಅನೇಕ ಯೋಜನೆಗಳ ಮೂಲಕ ಸಹಾಯ ನೀಡುತ್ತಲ್ಲಿದೆ. ಕೇವಲ ಸರ್ಕಾರದಿಂದ ಮಾತ್ರ ಕಲೆ, ಸಾಹಿತ್ಯ, ಸಂಗೀತ, ಜನಪದ  ಉಳಿಸಿ ಬೆಳೆಸಲು ಸಾಧ್ಯವಾಗಲಾರದು. ಕಲೆ ಮತ್ತು ಕಲಾವಿದರಿಗೆ ಜನಾಶ್ರಯದ ಸಹಾಯ ಸಹಕಾರವು ಅಗತ್ಯವಿದೆ ಎಂದರು.   ಪ್ರಾಸ್ತಾವಿಕವಾಗಿ ಮಾತನಾಡಿದ, ನಾಟ್ಯ ವಿದುಷಿ ಪ್ರಿಯಾ. ಪ. ಸವಣೂರು  ಅವರು, ಕಳೆದ 2000 ಇಸ್ವಿಯಲ್ಲಿ, ತಮ್ಮ ಆರಂಭದ ಗುರುಗಳಾದ ವಿದ್ವಾನ್ ಕೆ.ಜಿ. ಕುಲಕರ್ಣಿ ಅವರಲ್ಲಿ ತಮ್ಮ ಶಿಷ್ಯತ್ವವನ್ನು ಪಡೆದು, ಗುರುಗಳ ಅಪ್ಪಣೆಯಲ್ಲಿ, ರಂಗಪ್ರವೇಶ ಪಡೆದು 25 ವರ್ಷಗಳು ಕಳೆದಿದೆ ಎಂದರು. ತಮ್ಮ ನೃತ್ಯಾ ಲಯದಲ್ಲಿ ಇಂದಿನವರೆಗೂ ಸಾವಿರಾರು ವಿದ್ಯಾರ್ಥಿಗಳು, ಕಲಿತು ತಮ್ಮ ಪ್ರತಿಭೆ ಮೆರೆಯುತ್ತಿರುವುದು ನೃತ್ಯ ಸಂಸ್ಥೆಗೆ  ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ, ಎಂದ ಅವರು,ರಾಜ್ಯ ರಾಷ್ಟ್ರ ಮಟ್ಟದಲ್ಲಿ  ಪ್ರದರ್ಶನ ನೀಡಿ, ಪ್ರಸಂಸೆಗಳಿಸಿದ್ದೇವೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಗಣ್ಯರಾದ ಜಿ.ಜಿ.ಹೊಟ್ಟಿ ಗೌಡ್ರು, ಕಾಲೇಜು ಪ್ರಾಚಾರ್ಯ ಪ್ರೊ, ಆರ್‌. ವಿ. ಹೆಗಡಾಳ, ಕ.ಸಾ.ಪ. ಅಧ್ಯಕ್ಷ ಪ್ರಭಾಕರ್ ಶಿಗ್ಲಿ, ಆರ್‌. ಟಿ.ಇ.ಎಸ್‌. ಅಧ್ಯಕ್ಷ ಸುಭಾಸ್ ಸಾಹುಕಾರ, ನಿವೃತ್ತ ಪ್ಯಾದ್ಯಾಪಕಿ ಶ್ರೀಮತಿ ಸೀತಾ ಕೋಟಿ, ಉಷಾ ಸೊರಟೂರ, ವಿಠ್ಠಲ ಏಕಬೋಟೆ, ಎನ್‌.ಎಂ.ಗೌಳಿ, ನೀಲಕಂಠರಾವ್ ರೋಖಡೆ, ವಿಜಯ ಸವಣೊರು, ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಪರಶುರಾಮ ಸವಣೂರು ಪ್ರಾರ್ಥಿಸಿದರು. ಶ್ರೀಮತಿ ಪುಷ್ಪ ಶೆಲವಡಿಮಠ ಸ್ವಾಗತಿಸಿ ನಿರೂಪಿಸಿದರು.     ನಂತರ ನಡೆದ ನಾಟ್ಯಾಲಯದ ನೂರಾರು ಮಕ್ಕಳ ವೈವಿಧ್ಯಮಯ, ಸಂಸ್ಕೃತಿ ಪ್ರತಿಬಿಂಬಿತ ನೃತ್ಯ ಕಾರ್ಯಕ್ರಮಗಳು, ಸಾರ್ವಜನಿಕರ ಗಮನ ಸೆಳೆದವು.ಸಂತೋಷ್ ಮಹಾಲೆ, ಮಂಜುಳಾ ಸವಣೂರು, ಪ್ರಜ್ವಲ್ ಎಂ.ಡಿ, ವಿಜಯಾ ಸವಣೂರು ಮೊದಲಾದವರು ವಸ್ತ್ರಾಲಂಕಾರ ಮತ್ತು, ಪ್ರಸಾದನ ಕಾರ್ಯ ರೂಪಿಸಿ. ನೃತ್ಯಗಳಿಗೆ ಮೆರೆಗೂ ತಂದಿದ್ದರು. ಗಮನ ಸೆಳೆದರು. 25ನೇ ವರ್ಷದ ವರ್ಷಾಣೆಗೆ, ಪ್ರದರ್ಶನಗೊಂಡ ನೃತ್ಯ ನಾಟಕ "ಕೋಳೂರು ಕೊಡಗೂಸು " ವಿಶೇಷವಾಗಿ, ಸಾಮೂಹಿಕ ಕಾರತಾಡನಕ್ಕೆ  ಪ್ರೇಕ್ಷಕರು ಮುಂದಾಗಿದ್ದರು