ಕಟ್ಟಡ,ಇತರೆ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.11ರಂದು ಪ್ರತಿಭಟನೆ

Protest on April 11th demanding fulfillment of demands of construction and other workers

ಕಟ್ಟಡ,ಇತರೆ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.11ರಂದು ಪ್ರತಿಭಟನೆ  

ಕೊಪ್ಪಳ 07: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.11 ರಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ  ಜಿಲ್ಲಾಧಿಕಾರಿಗಳ ಕಚೇರಿವರಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹೋರಾಟ ಸಮಿತಿಯ ಮುಖಂಡ ಎ.ಎಲ್‌. ತಿಮ್ಮಣ್ಣ ಹೇಳಿದರು.ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಇಂದು ನೈಜವಾಗಿ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳು ಸಿಗುತ್ತಿಲ್ಲ, ಶೇಕಡ 90 ರಷ್ಟು ಗ್ರಾಮೀಣ ಪ್ರದೇಶದ ಕಾರ್ಮಿಕರು ಇದ್ದು ಅವರಿಗೆ ಸೌಲಭ್ಯಗಳು ಸಿಗುತ್ತಿಲ್ಲ, ಕಾರ್ಮಿಕರಿಗೆ ನೀಡುವ ಕಿಟ್ಟಿನಲ್ಲಿ 350 ಕೋಟಿ ರೂಪಾಯಿ ಭ್ರಷ್ಟಾಚಾರವಾಗಿದ್ದು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೊಸದಾಗಿ ಜಾರಿಗೊಳಿಸಿರುವ ಕುಟುಂಬ ಐ ಡಿ ಅಪ್ಲಿಕೇಷನನ್ನು ಈ ಕೂಡಲೇ ರದ್ದುಗೊಳಿಸಬೇಕು,ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೀಡಲಾಗುವ ಎಲ್ಲಾರೀತೀಯ ಟೂಲ್ ಕಿಟ್ಟಗಳನ್ನು ನೀಡುತ್ತಿರುವುದನ್ನು ಈ ಕೂಡಲೇ ಸ್ಥಗಿತ ಗೊಳಿಸಬೇಕು ಎಂದರು.  

ಮುಖಂಡ ರಮೇಶ್ ಘೋರೆ​‍್ಡ ಮಾತನಾಡಿ 56 ಲಕ್ಷ ಕಟ್ಟಡ ಕಾರ್ಮಿಕರಿದ್ದು, 26 ಲಕ್ಷ ಕಾರ್ಮಿಕರ  ಕಾರ್ಡು ಅನಹ9 ಗೊಳಿಸಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕಾರ್ಮಿಕರ ಮೇಲೆ ನಂಬಿಕೆ ಇಲ್ಲ ಅವರು ಶೈಕ್ಷಣಿಕ, ಮದುವೆ ಸಹಾಯ ಧನ ಸೇರಿದಂತೆ ಇತರೆ ನೀಡುತ್ತಿಲ್ಲ ಎಂದರು.ಮುಖಂಡ ಸುಲ್ತಾನ್ ಮಹೆಬೂಬ್ ಅಲಿ ಪಠಾಣ್ ಮಾತನಾಡಿ ಈಗಾಗಲೇ ಹಲವಾರು ತಿಂಗಳಿಂದ ಮಂಜುರಾತಿ ಪಡೆದ ಫಲಾನುಭವಿಗಳಿಗೆ ಧನಸಹಾಯ ಕೂಡಲೇ ಬಿಡುಗಡೆ ಮಾಡಬೇಕು ಎಂದರು. ಮತ್ತೋರ್ವ ಮುಖಂಡ ಹನುಮಂತಪ್ಪ ಐಹೊಳೆ ಮಾತನಾಡಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೊಸ ಹೊಸ ಐಡಿ ಆಪ್ ಗಳನ್ನು ಜಾರಿಗೆ ತಂದು ಕಾರ್ಮಿಕರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು. ಕಾರ್ಮಿಕರ ಮುಖಂಡರಾದ ಶಿವಕುಮಾರ್ ಗೌಡ ಸೇರಿದಂತೆ ಇತರರು ಇದೇ ಸಂದರ್ಭದಲ್ಲಿ ಮಾತನಾಡಿ ಪಿಂಚಣಿದಾರರಿಗೆ ಶೀಘ್ರವೇ ಅವರ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಪ್ರತಿ ತಿಂಗಳು 10ನೇ ತಾರೀಖಿನ ಒಳಗಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಪಿಂಚಣಿಯನ್ನು 60 ವರ್ಷಕ್ಕೆ ಇರುವ ನಿಯಮವನ್ನು ಕಡಿತ ಗೊಳಿಸಿ ಕಾರ್ಮಿಕರಿಗೆ 50 ವರ್ಷಕ್ಕೆ ಪಿಂಚಣಿ ನೀಡಬೇಕುಎಂದರು. 

ಕೊಪ್ಪಳ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ  ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಾಬು ಮೇಸ್ತ್ರಿ, ಅಬ್ದುಲ್ ಜವಳಗೇರಾ, ಮಹೆಬೂಬ್ ಮಣ್ಣೂರ್, ಎ. ಎಸ್ ಅಂಜನಪ್ಪ, ರುದ್ರ​‍್ಪ ಹಣವಾಳ, ದಾದಾ ಮುದಗಲ್, ಮಹೇಶ್ ಗೋಡೆಕರ್ ಉಪಸ್ಥಿತರಿದ್ದರು.