ರೈತರ ಮೇಲೆ ಪೋಲಿಸರ ಹಲ್ಲೆ ಖಂಡಿಸಿ ಪ್ರತಿಭಟನೆ


ಲೋಕದರ್ಶನ ವರದಿ 

ಯರಗಟ್ಟಿ 19: ಬೆಳಗಾವಿಯ ಸುವರ್ಣ ಸೌಧ ಎದುರು ಪ್ರತಿಭಟನೆ ಮಾಡುತ್ತಿರುವಾಗ ಪೋಲಿಸರು ರೈತರ ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದು ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ರೈತ ಸೇನೆ, ರೈತ ಸಂಘ, ಹಸಿರು ಸೇನೆ, ಕರವೇ ವಿವಿಧ ಸಂಘಟನೆಗಳ ಕಾರ್ಯಕರ್ತರು ಸ್ಥಳೀಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೆಲಕಾಲ ಬೆಳಗಾವಿ-ಬಾಗಲಕೋಟ, ಗೋಕಾಕ-ಧಾರವಾಡ ಹೆದ್ದಾರಿಗಳನ್ನು ಬಂದ್ ಮಾಡಿ ಟೈರಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸೇನೆ ಜಿಲ್ಲಾಧ್ಯಕ್ಷ ಸೋಮು ರೈನಾಪೂರ ಮಾತನಾಡುತ್ತಾ ಜಿಲ್ಲೆಯ ಸುಮಾರು ಕಾಖರ್ಾನೆಗಳು ರಾಜ್ಯವನ್ನು ಆಳುತ್ತಿರುವ ಜನಪ್ರತಿನಿಧಿಗಳ ಮಾಲೀಕತ್ವದಲ್ಲಿದ್ದು ರೈತರ ಹಿತಕಾಪಾಡುವ ನೆಪವೊಡ್ಡಿ ಆಯ್ಕೆಯಾಗಿ ಕಬ್ಬು ಬೆಳೆಯುವ ರೈತರ ಕಗ್ಗೊಲೆ ಮಾಡುತ್ತಿದ್ದಾರೆ. ಮತ್ತು ಕಾಖರ್ಾನೆಗಳು ರೈತರ ಹಿಂದಿನ ಬಾಕಿ ನೀಡದೇ ಪ್ರಸಕ್ತ ಸಾಲಿನ ದರ ನಿಗದಿ ಮಾಡದೇ ರೈತರ ಕಬ್ಬನ್ನು ತೆಗೆದುಕೊಂಡು ರೈತರಿಗೆ ಪಂಗನಾಮ ಹಾಕಲು ಹೊರಟಿದ್ದಾರೆ. ಇದನ್ನು ರೈತ ಸಂಘಟನೆಗಳು ಸಹಿಸುವುದಿಲ್ಲ. ಹಿಂದಿನ ಬಾಕಿ ಪಾವತಿಸಿ ಪ್ರಸಕ್ತ ಸಾಲಿನ ಕಬ್ಬಿನ ದರವನ್ನು ಮೂರು ಸಾವಿರಕ್ಕೂ ಹೆಚ್ಚು ಪ್ರತಿ ಟನ್ಗೆ ಘೋಷಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು. 

ಕರವೇ ಯುವ ಘಟಕ ತಾಲೂಕಾಧ್ಯಕ್ಷ ರಫೀಕ್.ಡಿ.ಕೆ, ರೈತ ಸಂಘ ಘಟಕಾಧ್ಯಕ್ಷ ಶಮೀರ ಜಮಾದಾರ, ಪ್ರವೀಣ ಪಠಾತಾರ, ವೆಂಕಣ್ಣ ಹುರುಕನವರ, ಸುರೇಶ ರೈನಾಪುರ, ಜಿ.ಐ.ಪಾಟೀಲ, ಗೋವಿಂದ ಕಡೆಮನಿ, ಎಸ್.ಎಫ್.ಸಿದ್ನಾಳ, ಚಂಭಣ್ಣ ಮುಗಳಿ, ಹನಮಂತ ಗಲಬಿ, ವೆಂಕಪ್ಪ ಹೊಂಗಲ, ಶಿವಾನಂದ ನಾವಿ, ವೆಂಕಪ್ಪ ಕಳ್ಳಿಗುದ್ದಿ ಮುಂತಾದವರಿದ್ದರು.