ಪ್ರಾಕೃತ ಪರೀಕ್ಷೆ: ಮಾಣಿಕ ಕಲಮನಿಗೆ ಸುವರ್ಣ ಪದಕ
ಬೆಳಗಾವಿ 12: ಶ್ರೀಕ್ಷೇತ್ರ ಶ್ರವಣಬೆಳಗೊಳದ ಪ್ರಾಕೃತ ವಿದ್ಯಾಪೀಠ ಸಂಚಾಲಿತ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ನಡೆಸಲಾಗುವ ಪರೀಕ್ಷೆಯಲ್ಲಿ ಪ್ರಾಕೃತ ರತ್ನ ಕನ್ನಡ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಬೆಳಗಾವಿಯ ಮಾಣಿಕ ಕುಂತಿನಾಥ ಕಲಮನಿ ಇವರು ಅತೀ ಹೆಚ್ಚು ಅಂಕ ಪಡೆಯುವ ಮೂಲಕ ಸುವರ್ಣ ಪದಕ ಪಡೆದುಕೊಂಡಿದ್ದಾರೆ.
ಪ್ರಾಕೃತ ವಿದ್ಯಾಪೀಠದ ವತಿಯಿಂದ ಕನ್ನಡ ಮತ್ತು ಹಿಂದೆ ಭಾಷೆಯಲ್ಲಿ ಪ್ರಾಕೃತ ಡಿಪ್ಲೋಮಾ, ಪ್ರಾಕೃತ ಪ್ರವೇಶ, ಪ್ರಾಕೃತ ಪಥಮ, ಪ್ರಾಕೃತ ಮಧ್ಯಮ, ಪ್ರಾಕೃತ ವಿಶಾರದ ಹಾಗೂ ಅಂತಿಮವಾಗಿ ಪ್ರಾಕೃತ ರತ್ನ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಪ್ರಸಕ್ತ ಸಾಲಿನಲ್ಲಿ ಫೆಬ್ರುವರಿ 2025 ರಂದು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಪ್ರಾಕೃತ ರತ್ನ ವಿಭಾಗದಲ್ಲಿ ಮಾಣಿಕ ಇವರು ಸುವರ್ಣ ಪದಕ ಪಡೆದುಕೊಂಡಿದ್ದಾರೆ. ಈ ಮೊದಲು ಇವರು ಪ್ರಾಕೃತ ಮದ್ಯಮ ಪರೀಕ್ಷೆ ಹಾಗೂ ಪ್ರಾಕೃತ ವಿಶಾರದ ಪರೀಕ್ಷೆಯಲ್ಲಿ ಸುವರ್ಣ ಪದಕ ಪಡೆದುಕೊಂಡಿದ್ದು, ಇದೀಗ ಪ್ರಾಕೃತ ರತ್ನ ವಿಭಾಗದಲ್ಲಿ ಸುವರ್ಣ ಪದಕ ಪಡೆಯುವ ಮೂಕ ಹ್ಯಾಟ್ರಿಕ್ ದಾಖಲೆ ಸಾಧಿಸಿದ್ದಾರೆ.