ಲೋಕದರ್ಶನ ವರದಿ
ಗಜೇಂದ್ರಗಡ 05: ಸಮೀಪದ ನೇಲ್ಲೂರ-ಪ್ಯಾಟಿ ಗ್ರಾಮದ ಮದ್ಯ ಇರುವ ಕ್ರಾಸ್ ಬಳಿ ಭಾರತ ವಿದ್ಯಾಥರ್ಿ ಫೆಡರೇಷನ್(ಖಈ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಆಙಈ) ಇವುಗಳ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನಾಚರಣೆಯನ್ನು ವಿರೇಶ ಬೇನಹಾಳ ಹಾಗೂ ಪೀರು ರಾಠೋಡ ಅವರು ಸಸಿ ನೇಡುವುದರ ಮೂಲಕ ಉದ್ಘಾಟಿಸಿದರು ಇಂದು ಭೂಮಿಯ ತಾಪಮಾನ ಎಚ್ಚುತ್ತಿರಲು ಮತ್ತು ಓಜೋನ್ ಪದರಿಗೆ ದಕ್ಕೆಯಾಗುವುದಕ್ಕೆ ಭೂಮಿ ಮೇಲಿರುವ ಅರಣ್ಯದ ನಾಶವೇ ಕಾರಣವಾಗಿದೆ. ಇದನ್ನರಿತು ಪ್ರತಿಯೊಬ್ಬರೂ ಮರಗಳನ್ನ ಬೆಳಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಬೇಕೆಂದು ಕರೆ ನೀಡಿದರು. ಪರಿಸರವನ್ನು ನಾವು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ಭಾರತ ವಿದ್ಯಾಥರ್ಿ ಫೆಡರೇಷನ್ (ಖಈ) ಗದಗ ಜಿಲ್ಲಾ ಕಾರ್ಯದಶರ್ಿ ಶಿವಾಜಿ ಗಡ್ಡದ ಹೇಳಿದರು.
ಈ ಸಂದರ್ಭದಲ್ಲಿ ಖಈ ಮತ್ತು ಆಙಈ ನ ಜಿಲ್ಲಾ, ತಾಲ್ಲೂಕಾ, ಹೋಬಳಿ, ಗ್ರಾಮ ಘಟಕಗಳ ಪದಾಧಿಕಾರಿಗಳು, ಪ್ರತಿನಿಧಿಗಳು ಸರ್ವಸದಸ್ಯರು ಉಪಸ್ಥಿತರಿದ್ದರು.