ಚಿಕ್ಕೋಡಿ 28: ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿ ಬಳಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಹೆಸ್ಕಾಂ ಚಿಕ್ಕೋಡಿ ಉಪವಿಭಾಗದ ಸಹಾಯಕ ಅಭಿಯಂತರಾದ ನೇಮಿನಾಥ ಅವಟೆ ಅವರಿಗೆ ಸೇರಿದ ಕಾರು ಎನ್ನಲಾಗಿದೆ. ಕಾರಿನಲ್ಲಿದ್ದ ನಿರ್ಮಲ ಭರಮು ಅವಟೆ(60) ಮೃತ ಮಹಿಳೆ ಎಂದು ಗುರ್ತಿಸಲಾಗಿದೆ. ಸಹಾಯಕ ಅಭಿಯಂತ ನೇಮಿನಾಥ ಅವಟೆ ಅವರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕೋಡಿ ಕಡೆಯಿಂದ ಕಾರು ರಾಯಬಾಗ ಹೋಗುವ ವೇಳೆಯಲ್ಲಿ ಉಮರಾಣಿ ಹತ್ತಿರ ಬಸ್ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸ್‌ರು ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.