ತಾಯಿಯೇ ಜಗತ್ತಿನ ಅತೀ ದೊಡ್ಡ ಶಿಕ್ಷಕಿ: ನಿಜಗುಣಪ್ರಭು ತೊಂಟದಾರ್ಯ ಸ್ವಾಮಿಜಿ

ಲೋಕದರ್ಶನ ವರದಿ

ಕೊಪ್ಪಳ 27: ಶಿಕ್ಷಣ ಎಂದರೆ ಹೊಟ್ಟೆಪಾಡಿನ ವ್ಯವಸ್ಥೆ ಅಲ್ಲ. ಶಿಕ್ಷಣ ಪಡೆದವರು ಬಹಳ ದೊಡ್ಡವರು ಎನ್ನುವ ಭಾವನೆಯಿದೆ. ಆದರೆ ಅನ್ ಎಜುಕೇಟೆಡ್ ಎನ್ನುವುದೇ ದೊಡ್ಡ ಮೋಸ. ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವುದೇ ಶಿಕ್ಷಣ. ಶಿಕ್ಷಣ ಎಂದರೇ ಬರೀ ಅಕ್ಷರಗಳಲ್ಲ. ತಾಯಿ ಭಾಷೆಯನ್ನು ಮೊದಲೇ ಕಲಿಸುತ್ತಾಳೆ. ಶಾಲೆಯಲ್ಲಿ ಕಲಿಸುವ ವಿದ್ಯೆಯೇ ಬೇರೆ ಮನೆಯಲ್ಲಿ ತಾಯಿ ಕಲಿಸುವ ವಿದ್ಯೆಯೇ ಬೇರೆ ತಾಯಿ ಜಗತ್ತಿನ ಅತೀ ದೊಡ್ಡ ಶಿಕ್ಷಕಿ ಎಂದು  ಮುಂಡರಗಿ ತೊಂಟದಾರ್ಯಮಠದ ನಿಜಗುಣಪ್ರಭು ತೊಂಟದಾರ್ಯ ಸ್ವಾಮಿಜಿಗಳು ಹೇಳಿದರು. 

ಅವರಿಂದು ಕೊಪ್ಪಳದ ಬಹಾದ್ದೂರ ಬಂಡಿ ರಸ್ತೆಯಲ್ಲಿರುವ  ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳ ಸಾಂಸ್ಕೃತಿಕ ವೈಭವ ಸಿರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲಿಯವರೆಗೆ ತಾಯಿ ಕಲಿಸುವ ವಿದ್ಯೆಗೆ ಗೌರವ ಬರುವುದಿಲ್ಲವೋ ಅಲ್ಲಿಯವರೆಗೆ ಜಗತ್ತಿನಲ್ಲಿ ದರೋಡೆಕಾರರ ಶಿಕ್ಷಣ ಎಲ್ಲವನ್ನ ಮಾಡುತ್ತದೆ . ಜೀವನದಲ್ಲಿ ಮೂರು ಜನ ಬಹಳ ಮುಖ್ಯ ತಾಯಿ, ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಅಧ್ಯಾತ್ಮದ ಗುರು. ಹುಟ್ಟಿದ ಮಗುವಿಗೆ ಹಾಲುಣಿಸುವ ಜೊತೆಗೆ ತಾಯಿ ಬದುಕನ್ನು ಕಟ್ಟಿಕೊಳ್ಳುವ ದಾರಿ ತೋರುತ್ತಾಳೆ. ಹೀಗಾಗಿ ತಾಯಿಯೇ ಜಗತ್ತಿನ ಅತೀ ದೊಡ್ಡ ಶಿಕ್ಷಕಿ. ವಿಪಯರ್ಾಸವೆಂದರೆ ಮಾತೃದೇವೋಭವ ಎನ್ನುವ ನಮ್ಮ ದೇಶದಲ್ಲಿ 18 ಸಾವಿರ ವೃದ್ದಾಶ್ರಮಗಳಿವೆ. ಇದು ಯಾವ ರೀತಿಯ ಶಿಕ್ಷಣ? ಶಾಲೆಗಳಲ್ಲಿ ತಂದೆ ತಾಯಿಗಳನ್ನು ಗೌರವಿಸುವುದನ್ನು ಕಲಿಸಬೇಕು. ತಾಯಿಯನ್ನು ಗೌರವಿಸದವರೂ ಎಂಥಹ ಶಿಕ್ಷಣ ಪಡೆದಿದ್ದರೂ ವ್ಯರ್ಥ. ನಮ್ಮ ದೇಶದಲ್ಲಿ ದೇವರು ದಿಂಡರುಗಳ ಹೆಸರಿನಲ್ಲಿ ಮೋಸ ಮಾಡಲಾಗುತ್ತಿದೆ. ಯಾರ್ಯಾರೋ ದೇಹದಲ್ಲಿ ದೇವರು ಬರುತ್ತಾರೆ. ಹಾಗಾದರೆ ದೇವರು ಬರುವ ಜನರೇ ಹೇಳಿ ಪಾಕಿಸ್ತಾನದ ಯಾವ ಬಾರ್ಡರ್ ನಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ.  ಅದು ಗೊತ್ತಾದರೆ ಯಾವುದೇ ಸಮಸ್ಯೆಗಳೇ ಇರುವುದಿಲ್ಲ. ಯೋಧರನ್ನು ಕೊಂದ ಭಯೋತ್ಪಾದಕರ ಕುಕೃತ್ಯವನ್ನು ಖಂಡಿಸುತ್ತೇನೆ. ಪ್ರಾರ್ಥನೆ ಮಾಡುವ ಕೈಗಳು ಬಂದೂಕು ಹಿಡಿಯಬಾರದು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಹಿರಿಯ ಸಾಹಿತಿ,ಖ್ಯಾತ ಬರಹಗಾರ ಕುಂ.ವೀರಭದ್ರಪ್ಪ ಮಾತನಾಡಿದ ಭಯ ಮುಕ್ತ ಸಮಾಜದಿಂದ ದೇಶಧ ಅಭಿವೃದ್ಧಿಗೆ ಕಾರಣವಾಗುತ್ತೆ. ಅಂಥಹ ಸಮಾಜದ ನಿಮರ್ಾಣವನ್ನು ನಿಜಗುಣಪ್ರಭು ಸ್ವಾಮಿಗಳು ಮಾಡುತ್ತಿದ್ದಾರೆ. ಸಣ್ಣ ಕೋಣೆಯಲ್ಲಿ ಆರಂಭವಾದ ಶಾಲೆ ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಇದರ ಹಿಂದೆ ಅತ್ತನೂರು ದಂಪತಿಗಳ ಪರಿಶ್ರಮ ಇದೆ. ಈ ಸಂಸ್ಥೆಗೆ ಭವಿಷ್ಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹಾರೈಸಿದರು.  

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಕ ಗವಿಸಿದ್ದಪ್ಪ ಕೊಪ್ಪಳ,ನಗರಸಭೆಯ ಹಿರಿಯ ಸದಸ್ಯ ಅಮ್ಜದ್ ಪಟೇಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವಾಣಿಜ್ಯೋಧ್ಯಮಿ ಬಸವರಾಜ್ ಬಳ್ಳೊಳ್ಳಿ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಬಿ.ಎಮ್.ಸವದತ್ತಿ, ಧನಂಜಯ ಮಾಲಗಿತ್ತಿ, ಮುಖ್ಯೋಪಾಧ್ಯಾಯರಾದ ರೇಣುಕಾ ಅತ್ತನೂರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದಶರ್ಿ ಆರ್.ಎಚ್.ಅತ್ತನೂರು ಮಾತನಾಡಿದರು. ಕಾರ್ಯಕ್ರಮದ  ನಿರೂಪಣೆಯವನ್ನು ಸಿ.ವಿ.ಜಡಿಯವರ ಮಾಡಿದರು. ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳ ಪೋಷಕರು, ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.