ಜಲಶಕ್ತಿ ಅಭಿಯಾನ ತಂಡದಿಂದ ಭೇಟಿ

ಲೋಕದರ್ಶನ ವರದಿ

ಗದಗ 20: ಜಲಶಕ್ತಿ ಅಭಿಯಾನ ತಂಡದ ಅಧಿಕಾರಿ ಕೀರ್ತಿ, ಐ.ಎ.ಎಸ್., ನವದೆಹಲಿ ಇವರ ಗದಗ ಜಿಲ್ಲೆಗೆ ದಿ. 19ರಂದು ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಲಶಕ್ತಿ ಅಭಿಯಾನದ ಕುರಿತು ಸುದೀರ್ಘವಾಗಿ ಚರ್ಚಿಸಿದ ನಂತರ ಗದಗ ತಾಲೂಕಿನ ಬಿಂಕದಕಟ್ಟಿ, ಹಿರೇಹಂದಿಗೋಳ ಹಾಗೂ ಅಸುಂಡಿ ಭಾಗದ ಕ್ಷೇತ್ರಗಳ ಭೇಟಿ ಮಾಡಿದ್ದಾರೆ. 

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ವಿಶಿಷ್ಟವಾಗಿ ಜಲಾನಯನ ತತ್ವದಡಿ  ಅನುಷ್ಠಾನಗೊಳಿಸಿರುವುದನ್ನು ಹಿರೇಹಂದಿಗೋಳ ಹಾಗೂ ಬಿಂಕದಕಟ್ಟಿ ಗ್ರಾಮಗಳಲ್ಲಿ ವೀಕ್ಷಣೆ ಮಾಡಿದರು. ಬದು  ನಿರ್ಮಾಣ ಕಾಮಗಾರಿಗಳನ್ನು ದಿಬ್ಬದಿಂದ ಹಳ್ಳದವರೆಗೆ ಅನುಷ್ಠಾನಗೊಳಿಸಿ, ಅಲ್ಲಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ  ಮಾಡಿರುವುದರಿಂದ ಮಣ್ಣು ಹಾಗೂ ನೀರಿನ ಸಂಪೂರ್ಣ ಸಂರಕ್ಷಣೆ ಆಗಿರುವದನ್ನು ಮನಗಂಡು ಹಾಗೂ ರೈತರೊಡನೆಚರ್ಚಿಸಿ  ಹರ್ಷ ವ್ಯಕ್ತಪಡಿಸಿದರು. ಈ ಬದುಗಳು ಹಾಗೂ ಕೃಷಿ ಹೊಂಡಗಳ ಅಂಚಿನಲ್ಲಿ ಅರಣ್ಯ ಸಸಿಗಳ ನಾಟಿ ಹಾಗೂ ತರಕಾರಿ ಬೀಜಗಳ ಬಿತ್ತನೆ ಮಾಡಿರುವುದನ್ನು ವೀಕ್ಷಿಸಿದರು. ಒಟ್ಟಾರೆಯಾಗಿ ಸಮಗ್ರ ಭೂ ಅಭಿವೃದ್ಧಿಯ ಪರಿಕಲ್ಪನೆ ಈ ರೀತಿ ಜಲಾನಯನ ತತ್ವದಡಿ ಅನುಷ್ಠಾನವಾದಾಗ ಮಾತ್ರ ಸಾಕಾರಗೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅಸುಂಡಿ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯ ತಡೆಆಣೆ ಕಾಮಗಾರಿಯ ವೀಕ್ಷಣೆಯನ್ನು ಮಾಡಲಾಯಿತು. ಕೇಂದ್ರ ಸರಕಾರದ ಇತರೆ ಯೋಜನೆಗಳಾದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಮಣ್ಣು ಆರೋಗ್ಯ ಅಭಿಯಾನ ಮತ್ತು ರೈತರ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಅಳವಡಿಕೆಯ ಕುರಿತು ಈ ಸಂದರ್ಭದಲ್ಲಿ ಹಾಜರಿದ್ದ ಬಿಂಕದಕಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವ್ಹಿ.ಡಿ. ರಂಗಪ್ಪನವರ ಹಾಗೂ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಒಟ್ಟಾರೆಯಾಗಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಿರುವ ಬಗ್ಗೆ ಹಾಗೂ ಗುಣಮಟ್ಟದ ಕಾಮಗಾರಿಯಾಗಿರುವ ಕುರಿತು ಹರ್ಷ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಜಿಲ್ಲೆಯ ಜಂಟಿ ಕೃಷಿ ನಿದರ್ೇಶಕರಾದ ಟಿ.ಎಸ್. ರುದ್ರೇಶಪ್ಪ, ಗದಗ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ  ಅಧಿಕಾರಿ ಎಚ್.ಎಸ್. ಜನಗಿ, ಸಹಾಯಕ ಕೃಷಿ ನಿರ್ದೇಶಕರಾದ ಮಲ್ಲಯ್ಯ ಕೊರವನವರ, ಸಹಾಯಕ ತೋಟಗಾರಿಕೆ ನಿದರ್ೇಶಕರಾದ ಸಂತೋಷ ಧರಣಾ, ಪಂಚಾಯತ ಅಭಿವೃದ್ಧಿ ಅಧಿಕಾರಿ ಆರ್.ಎಮ್. ಕಿರಸೂರ ಹಾಗೂ ಸಹಾಯಕ ಕೃಷಿ ಅಧಿಕಾರಿ ಆರ್.ವ್ಹಿ. ಕರವೀರಮಠ ಉಪಸ್ಥಿತರಿದ್ದರು.