ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ

Laksa Dipotsava Program at Mylaralingeshwar Temple

ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ

ಶಿಗ್ಗಾವಿ 13: ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಗಂಜೀಗಟ್ಟಿ ಡಾ. ವೈಜನಾಥ ಶಿವಾರ್ಚಾಯ ಶ್ರೀಗಳು ಹಾಗೂ ವಿರಕ್ತಮಠದ ಸಂಗನಬಸವ ಶ್ರೀಗಳು ಉಬಯ ಶ್ರೀಗಳ ಸಾನಿಧ್ಯದಲ್ಲಿ ಚಾಲನೆ ನೀಡಿದರು.  

  ನಂತರ ಡಾ.ವೈಜನಾಥ ಶಿವಲಿಂಗೇಶ್ವರ ಶಿವಾರ್ಚಾಯರು ಆರ್ಶಿವದಿಸಿ ಪುರಾತನ ಮೈಲಾರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರವನ್ನು ಸದ್ಬಕ್ತರು ಮಾಡಿ ನಾಡಿಗೆ ಪ್ರತಿಷ್ಠಾಪನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಅಲ್ಲದೇ ಇಂದಿನ ದಿನಗಳಲ್ಲಿ ದೇವಸ್ಥಾನ ನಿರ್ವಹಣೆ ಬಹಳ ಕಷ್ಟದ ಕೆಲಸ ಎಂದರು. 

 ಸಂಗನಬಸವರು ಆರ್ಶಿವದಿಸಿ ಕಲಿಯುಗದಲ್ಲಿ ದೇವರ ಸ್ಮರಣೆ ಭಯ ಭಕ್ತಿಯಿಂದ ಇರದೇ ನಾಟಕೀಯವಾಗಿ ಸಾಗಿದೆ ಇದು ಬೇಸರದ ಸಂಗತಿ ಆದ್ದರಿಂದ ಸದ್ಬಕ್ತರು ಭಯ ಭಕ್ತಿಯಿಂದ ದೇವರ ನಾಮಸ್ಮರಣೆ ಮಾಡಿದರೆ ನಮ್ಮ ಕಷ್ಟ ಕಾರ​‍್ಪಣಯಗಳು ನಿವಾರಣೆ ಆಗುತ್ತವೆ ಎಂದರು.   ಹೆಸ್ಕಾಂ ಅಧ್ಯಕ್ಷಅಜ್ಜಂಪೀರ ಖಾದ್ರಿ, ಭಾಜಪ ಮುಖಂಡ ಭರತ ಬೊಮ್ಮಾಯಿ, ಸಮಾಜ ಶ್ರೀಕಾಂತ ದುಂಡಿಗೌಡ್ರ ರವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು. 

ಗೊರವಪ್ಪನವರ ಕಾಲಿಗೆ ಗೆಜ್ಜೆಕಟ್ಟಿ ಹಾಗೂ ಧೀವಟಿಗೆ ಹಿಡಿದು ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುಭಾಸ ಚವ್ಹಾಣ,ಲಿಂಗರಾಜ ಗಾಣಗೇರ, ನಿಂಗಪ್ಪ ಇಂಗಳಗಿ, ಸಂತೋಷ ಮೊರಬದ, ಮಂಜುನಾಥ ಬ್ಯಾಹಟ್ಟಿ, ಸಂಗಪ್ಪ ಕಂಕನವಾಡ, ಮಂಜುನಾಥ ಕಟ್ಟಿಮನಿ, ಸುರೇಶ ಯಲಿಗಾರ, ತಿರಕಪ್ಪ ಅಂದಲಗಿ, ಮಾಲತೇಶ ಕಂಕನವಾಡ, ನಿಂಗಪ್ಪ ಯಲಿಗಾರ, ನಿಂಗಪ್ಪ ಯಲವಗಿ, ಭಾರತೇಶ ಬಳಿಗಾರ, ಮಲೇಶಪ್ಫ ಅತ್ತಿಗೇರಿ, ಸೋಮಣ್ಣ ಮತ್ತೂರ, ಹಾಗೂ ಹಿರಿಯರು, ಯುವಕರು, ಯುವತಿಯರು ಸೇರಿದಂತೆ ವಿವಿಧ ಗ್ರಾಮದ ಭಕ್ತರು, ಹಾಗೂ ಲಕ್ಷ ದೀಪೋತ್ಸವದಲ್ಲಿ ಎಲ್ಲ ಸಮುದಾಯದ ಭಕ್ತರು ಪಾಲ್ಗೊಂಡಿದ್ದರು. ನಂತರ ಪ್ರಸಾದ ಸೇವೆ ಜರುಗಿತು.