ಬೆಳಗಾವಿ 23: 'ಹುಟ್ಟು ಸಾವು ಬರುತ್ತವೇ ಹೋಗುತ್ತವೆ ಆದರೆ ಇವುಗಳ ಮಧ್ಯ ಬದುಕಿನಲ್ಲಿ ನಾವು ಏನು ಮಾಡುತ್ತೇವೆ ಅದು ಅಜರಾಮರವಾಗಿ ಉಳಿಯುತ್ತದೆ. ಹಾಗಾಗೀ ಕೆಎಲ್ಇ ಸಂಸ್ಥೆಯನ್ನು ಕಟ್ಟಿದ ಏಳು ಜನ ಶಿಕ್ಷಕರು ಇಂದು ಇತಿಹಾಸದ ಪುಟಗಳಲ್ಲಿ ಅಮರವಾಗಿದ್ದಾರೆ' ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಿ.ಕೆ.ಶಿವಕುಮಾರ ಅವರು ಹೇಳಿದರು.
ಅವರು ದಿ.23 ರಂದು ಬೆಳಗಾವಿಯ ಜೆಎನ್ಎಂಸಿಯ ಕನ್ವೇನ್ಶನ್ ಸೆಂಟರ್ನಲ್ಲಿ ಜರುಗಿದ ಕೆಎಲ್ಇ ಸಂಸ್ಥೆಯ 103ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಕೆಎಲ್ಇ ಸಂಸ್ಥೆಯು ಇಂದು ಜಾಗತಿಕವಾಗಿ ವಿಸ್ತರಿಸಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಶಿಕ್ಷಣ ಹೆಜ್ಜೆಗಳನ್ನು ಮೂಡಿಸಿದೆ. ಅಂದು ಶಿಕ್ಷಣದ ಕನಸುಗಳನ್ನು ಕಟ್ಟಿಕೊಂಡ ಏಳುಜನ ಶಿಕ್ಷಕರು ತಮ್ಮ ಬದುಕನ್ನು ಸಮಪರ್ಿಸಿಕೊಂಡು ಅದ್ಭುತವಾದ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು. ಅವರು ಇಟ್ಟುಕೊಂಡ ಗುರಿ ಅಚಲವಾಗಿತ್ತು. ಜನರಿಗೆ ವಿದ್ಯೆಕೊಡುವ ದೊಡ್ಡ ಬುನಾದಿಯನ್ನೇ ಅವರು ಹಾಕಿದರು. ಅವರು ಮಾಡಿದ ತ್ಯಾಗ ಇಂದಿನವರಿಗೆ ಮಾದರಿಯಾಗಿದೆ. ಸಮಾಜವು ಮುನ್ನಡೆಯುವಲ್ಲಿ ಶಿಕ್ಷಣದಪಾತ್ರ ಹಿರಿದಾದದು. ಕೆಎಲ್ಇ ಸಂಸ್ಥೆಯು ಶಿಕ್ಷಣ, ಆರೋಗ್ಯ, ಸಂಶೋಧನೆ ಕ್ಷೇತ್ರಗಳಲ್ಲಿ ದಾಖಲೆಯ ಕಾರ್ಯವನ್ನು ನಿರ್ವಹಿಸಿದೆ. ಸಕರ್ಾರ ಮಾಡದೇ ಇರುವ ಕಾರ್ಯವನ್ನು ಕೆಎಲ್ಇ ಸಂಸ್ಥೆಯು ಸಾಧಿಸಿ ತೋರಿಸಿದೆ. ಈ ನಾಡಿನ ಹಲವಾರು ಶಿಕ್ಷಣ ಸಂಸ್ಥೆಗಳು ಶತಮಾನಗಳಿಂದ ಸಲ್ಲಿಸುತ್ತಿರುವ ಸೇವೆಯ ಪ್ರತಿಫಲವಾಗಿ ಇಂದು ನಾಡಿನ ಶಿಕ್ಷಣ ಕ್ಷೇತ್ರವೇ ಬದಲಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯುವರು ಸಪ್ತಷರ್ಿಗಳು ಸಾಗಿದ ದಾರಿಯಲ್ಲಿ ಕೆಎಲ್ಇ ಸಂಸ್ಥೆಯನ್ನು ವಿಸ್ತಾರೋನ್ನತವಾಗಿ ಬೆಳೆಸಿದ್ದಾರೆ. ಅವರು ಹಾಗೂ ಆಡಳಿತ ಮಂಡಳಿಯವರ ಕೊಡುಗೆ ಅಪಾರ. ಡಾ.ಕೋರೆಯವರು ಕೆಎಲ್ಇ ಸಂಸ್ಥೆಯನ್ನು ಬೆಳೆಸಿಲ್ಲ, ಅದರೊಂದಿಗೆ ಬೆಳಗಾವಿ ಅಭಿವೃದ್ಧಿಗೆ ಮೌಲಿಕ ಕಾರ್ಯವನ್ನು ಮಾಡಿದ್ದಾರೆ. ಬೆಳಗಾವಿಗೆ ಎರಡನೇ ರಾಜ್ಯಧಾನಿ ಪಟ್ಟ, ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಸುವರ್ಣ ವಿಧಾನ ಸೌಧ ಬರುವಲ್ಲಿ ಕೋರೆಯವರು ಅಹನರ್ಿಶಿ ಶ್ರಮಿಸಿದ್ದಾರೆ. ಹೀಗೆ ಬೆಳಗಾವಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಒಂದು ಸ್ಥಾನವನ್ನು ತಂದುಕೊಡುವಲ್ಲಿ ವಿಶೇಷ ಕಾಳಜಿವಹಿಸಿದ್ದಾರೆ. ಡಾ.ಕೋರೆಯವರಿಂದ ಕೆಎಲ್ಇ ಸಂಸ್ಥೆಯು ಇನ್ನಷ್ಟು ವಿಸ್ತಾರೋನ್ನತವಾಗಿ ಮುನ್ನಡೆಯಲಿ' ಎಂದು ಶುಭಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕೆಎಲ್ಇ ಸಂಸ್ಥೆಯ ಕಾಯರ್ಾಧ್ಯಕ್ಷರು ಹಾಗು ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆಯವರು ಮಾತನಾಡಿ ಕೆಎಲ್ಇ ಸಂಸ್ಥೆಯನ್ನು ಕಟ್ಟಿದ ಸಪ್ತಷರ್ಿಗಳು ಅಂದು ಮನಸ್ಸು ಮಾಡಿದ್ದರೆ ಸಕರ್ಾರದ ಉನ್ನತ ಹುದ್ದೆಗಳನ್ನು ಕಟ್ಟಬಹುದಾಗಿತ್ತು. ಆದರೆ ಅವರು ಸಮಾಜದ ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಲೆಂಬ ಸದ್ದುದ್ದೇಶದಿಂದ ಕೆಎಲ್ಇ ಸಂಸ್ಥೆಯನ್ನು ಹುಟ್ಟುಹಾಕಿದರು. ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟರು. ಇಂದು ಬೆಳಗಾವಿ ಕನರ್ಾಟಕದಲ್ಲಿ ಉಳಿದಿದ್ದರೆ ಕೆಎಲ್ಇ ಸಂಸ್ಥೆಯಿಂದ. ಅಂದು ಸಪ್ತಷರ್ಿಗಳು ಸಂಸ್ಥೆಯೊಂದಿಗೆ ಗಡಿಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದರು. ಕೆಎಲ್ಇ ಸಂಸ್ಥೆಯ ಸ್ಫೂತರ್ಿಯ ಫಲವಾಗಿ ಹಲವಾರು ಶಿಕ್ಷಣ ಸಂಸ್ಥೆಗಳು ತಲೆಎತ್ತಿದವು, ಮಾತ್ರವಲ್ಲದೇ ಕನ್ನಡ ನಾಡು ನುಡಿ ಸಂಸ್ಕೃತಿಗೆ ಭದ್ರವಾದ ಬುನಾದಿ ಹಾಕಿದವು. ಅಂತಹ ಶಿಕ್ಷಣ ರತ್ನಗಳನ್ನು ಸ್ಮರಿಸುವುದೇ ಉದಯವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾಥರ್ಿ ವಿದ್ಯಾಥರ್ಿನಿಯರನ್ನು ಸತ್ಕರಿಸಲಾಯಿತು. ಅದ್ವಿತೀಯ ಸಾಧನೆ ಮಾಡಿದ ಡಾ.ಅಶೋಕ ಶೆಟ್ಟರ, ಡಾ. ಎಂ.ವ್ಹಿ.ಜಾಲಿ, ಡಾ. ಅನಿವಾಶ ಕವಿ ಹಾಗೂ ಸಿಬ್ಬಂದಿವರ್ಗದವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದಶರ್ಿ ಶಾಲಿನಿ ರಜನಿಶ್ ಗೌರವ ಅತಿಥಿಗಳಾಗಿ ಆಮಿಗಿಸಿದ್ದರು. ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಾನಂದ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಡಾ.ಅವಿನಾಶ ಕವಿ ನಿರೂಪಿಸಿದರು. ಕೆಎಲ್ಇ ಕಾರ್ಯದಶರ್ಿಗಳಾದ ಡಾ.ಬಿ.ಜಿ.ದೇಸಾಯಿ ವಂದಿಸಿದರು. ಕೆಎಲ್ಇ ಸಂಗೀತ ಶಾಲೆ ಸಿಬ್ಬಂದಿ ವಿದ್ಯಾಥರ್ಿಗಳು ಪ್ರಾಥರ್ಿಸಿದರು.